ಸನ್ಮಾರ್ಗ ವಾರ್ತೆ
ರೋಮ್, ಮಾ. 10: ಸುಳ್ಳು ವಾರ್ತೆಗಳನ್ನು ನಂಬಿ ಕೊರೊನಾ ವೈರಸ್ ಪ್ರತಿರೋಧಿಸಲು ಆಲ್ಕೊಹಾಲ್ ಸೇವಿಸಿದ 27 ಮಂದಿ ಮೃತಪಟ್ಟಿದ್ದಾರೆ. ಓರ್ವ ದೃಷ್ಟಿ ಕಳಕೊಂಡಿದ್ದಾನೆ. ಕೆಲವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದು ಇರಾನಿನ ಕುಸೆಸ್ತಾನ್, ಅಲ್ಬೊರ್ಸ್ ಪ್ರಾಂತದಲ್ಲಿ ಘಟನೆ ನಡೆದಿದೆ. ಖುಸೆಸ್ತಾನ್ ಪ್ರಾಂತದಲ್ಲಿ ಇದುವರೆಗೆ 73 ಮಂದಿಗೆ ಕರೊನಾ ದೃಢಪಟ್ಟಿದೆ. ಆಲ್ಕೊಹಾಲ್ ಸೇವಿಸಿದರೆ ಕೊರೊನಾ ಪ್ರತಿರೋಧಿಸಬಹುದು ಎಂಬ ಸುಳ್ಳು ಸಂದೇಶ ನೋಡಿ ಇವರೆಲ್ಲ ಆಲ್ಕೊಹಾಲ್ ಸೇವಿಸಿದ್ದರು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಇವರು ವೈರಾಣುನಾಶಕ ಆಲ್ಕೊಹಾಲ್ ಕುಡಿದಿದ್ದರು.
ದೇಶಾದ್ಯಂತ ಕೊರೊನಾ ಹಬ್ಬಿದ್ದರಿಂದ ಆಲ್ಕೊಹಾಲ್ ಸೇವಿಸಿದರೆ ಕೊರೊನಾ ಬರುವುದಿಲ್ಲ ಎಂಬ ವದಂತಿ ಸುಳ್ಳು ಪ್ರಚಾರಗಳು ಸಾಮಾಜಿಕ ಮಾದ್ಯಮಗಳಲ್ಲಿ ಬೃಹತ್ತಾಗಿ ಹರಿದಾಡುತ್ತಿದೆ.












