ಸನ್ಮಾರ್ಗ ಕುರ್‌ ಆನ್ ಕ್ವಿಝ್ ಸ್ಪರ್ಧೆ: ಎ.30 ರಂದು ರಮಝಾನ್ ವಿಶೇಷಾಂಕ ಬಿಡುಗಡೆ

0
1296

ಎಪ್ರಿಲ್ 30ರಂದು ಬಿಡುಗಡೆಗೊಳ್ಳಲಿರುವ ಸನ್ಮಾರ್ಗ ರಮಝಾನ್ ವಿಶೇಷಾಂಕದಲ್ಲಿ ಸತತ ನಾಲ್ಕನೇ ಬಾರಿ ಕುರ್‍ಆನ್ ಕ್ವಿಝ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪವಿತ್ರ ಕುರ್‍ಆನಿನ ಅಲ್ ಅಅ್‌ರಾಫ್ ಮತ್ತು ಅಲ್ ಅನ್‍ಫಾಲ್ ಅಧ್ಯಾಯಗಳನ್ನು ಈ ಬಾರಿ ಕ್ವಿಝ್‌ಗೆ ಆಯ್ಕೆ ಮಾಡಲಾಗಿದ್ದು, ಶಾಲಾ ಪ್ರಶ್ನೆಪತ್ರಿಕೆಯ ಮಾದರಿಯಲ್ಲಿ ಪ್ರಶ್ನೆಪತ್ರಿಕೆಯನ್ನು ತಯಾರಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ರೂ. 6000, ದ್ವಿತೀಯ ರೂ.5000, ತೃತೀಯ ರೂ. 4000 ಮತ್ತು ತಲಾ ರೂ. 1000ದಂತೆ 10 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು. ಜೊತೆಗೆ ವಿಜೇತರೆಲ್ಲರಿಗೂ ಸುಲ್ತಾನ್ ಗೋಲ್ಡ್ ಪ್ರಾಯೋಜಿತ ಆಕರ್ಷಕ ಸ್ಮರಣಿಕೆಗಳನ್ನು ನೀಡಲಾಗುವುದು. ಸ್ಪರ್ಧೆಯ ನಿಯಮಗಳು ಪ್ರಶ್ನೆಪತ್ರಿಕೆಯಲ್ಲಿದೆ. ಸನ್ಮಾರ್ಗ ರಮಝಾನ್ ವಿಶೇಷಾಂಕವನ್ನು ಖರೀದಿಸಿ, ಸ್ಪರ್ಧೆಯಲ್ಲಿ ಭಾಗವಹಿಸಿ. ವಿಶೇಷಾಂಕದ ಮುಂಗಡ ಕಾಯ್ದಿರಿಸುವಿಕೆಗಾಗಿ ಸಂಪರ್ಕಿಸಿ: 9844963059, 9880096128