ಉತ್ತರ ಪ್ರದೇಶದಲ್ಲಿ ಪೊಲೀಸ್ ದೌರ್ಜನ್ಯ : ಯುವಕನ ಮರ್ಮಾಂಗಕ್ಕೆ ಪೆಟ್ರೋಲ್ ಸುರಿದು ಇಲೆಕ್ಟ್ರಿಕ್ ಶಾಕ್ ಕೊಟ್ಟ ಪೊಲೀಸರು!

0
853

ಕಾನ್‍ಪುರ,ಎ.3: ಉತ್ತರ ಪ್ರದೇಶದ ಕಾನ್‍ಪುರ ಜಿಲ್ಲೆಯೊಂದರಿಂದ ಕೊಲೆ ಆರೊಪದಲ್ಲಿ ವಿಚಾರಣೆ ಎದುರಿಸುತ್ತಿದ್ದ ಇಬ್ಬರು ಯುವಕರಲ್ಲಿ ಒಬ್ಬನ ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದು ಇಲೆಕ್ಟ್ರಿಕ್ ಶಾಕ್ ಕೊಟ್ಟು ಕ್ರೂರ ದೌರ್ಜನ್ಯವೆಸಗಿದ ಘಟನೆ ವರದಿಯಾಗಿದೆ. ಶಾರ್ಟ್ ಶರ್ಕೀಟ್ ಆಗಿ ಯುವಕನ ಬಟ್ಟೆಗೆ ಬೆಂಕಿ ಹಿಡಿದಿತ್ತು. ಕೂಡಲೇ ಪೊಲೀಸರು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಬಹಿರಂಗಗೊಂಡ ಬಳಿಕ ಎಸ್ಸೈಯನ್ನು ಅಮಾನತಿನಲ್ಲಿರಿಸಲಾಗಿದೆ.

ವರದಿಯಾಗಿರುವ ಪ್ರಕಾರ ಮಾರ್ಚ್ 29ರಂದು ರೈಲ್ವೆ ಹಳಿಯಲ್ಲಿ ನಿರ್ಮಲ್ ಎಂಬ ವ್ಯಕ್ತಿಯೊಬ್ಬ ಶವ ಪತ್ತೆಯಾಗಿತ್ತು. ಪೊಲೀಸರು ಪ್ರಕರಣದಲ್ಲಿ ಉನ್ನಾವದ ಸೋನು ಮತ್ತು ಮೋನು ಎಂಬಿಬ್ಬರನ್ನು ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಂಡಿದ್ದರು. ಪೊಲೀಸರು ತಡರಾತ್ರೆ ಸೋನು ಮತ್ತು ಮೋನುರ ವಿಚಾರಣೆ ಆರಂಭಿಸಿದ್ದಾರೆ. ಮೊದಲು ಪೊಲೀಸರ ಇಬ್ಬರಿಗೂ ಮಾರಣಾಂತಿಕವಾಗಿ ಹೊಡೆದಿದ್ದಾರೆ. ನಂತರ ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದು ಇಲಕ್ಟ್ರಿಕ್ ಶಾಕ್ ಕೊಟ್ಟಿದ್ದಾರೆ. ಮೋನುವಿನ ಜೇಬಿನಲ್ಲಿ ಬೆಂಕಿ ಪೊಟ್ಟಣ ಇತ್ತು. ವಿಚಾರಣೆಯಿಂದ ಪಾರಾಗುವುದಕ್ಕಾಗಿ ಆತ ಸ್ವಯಂ ಬೆಂಕಿ ಹಚ್ಚಿಕೊಂಡಿದ್ದಾನೆ ಎಂದು ಎಸ್‍ಎಸ್‍ಪಿ ಅನಂತ್ ಕುಮಾರ್ ಹೇಳಿದ್ದಾರೆ. ನಂತರ ಸತ್ಯಸಂಗತಿ ಬಹಿರಂಗವಾದ ಬಳಿಕ ದೌರ್ಜನ್ಯವೆಸಗಿದ ಬಿಟೂರ್ ಪೊಲೀಸ್ ಠಾಣೆಯ ಎಸ್ಸೈ ಸುಧೀರ್ ಪವಾರ್‍ನನ್ನು ಅಮಾನತಲ್ಲಿರಿಸಲಾಗಿದೆ.