ಹೊಸದಿಲ್ಲಿ,ಮೇ 2: ಜೈಷೆ ಮುಹಮ್ಮದ್ ಭಯೋತ್ಪಾದಕ ಮಸೂದ್ ಅಝರ್ನನ್ನು ಜಾಗತಿಕ ಭಯೋತ್ಪಾದಕನೆಂದು ವಿಶ್ವಸಂಸ್ಥೆ ಘೋಷಿಸಿದ ಕ್ರಮವನ್ನು ರಾಜಕೀಯ ಪ್ರಚಾರಕ್ಕೆ ಬಿಜೆಪಿ ಬಳಸುತ್ತಿರುವುದನ್ನು ಬಹುಜನ ಸಮಾಜವಾದಿ ಪಾರ್ಟಿ ಅಧ್ಯಕ್ಷೆ ಮಾಯಾವತಿ ತೀವ್ರವಾಗಿ ಟೀಕಿಸಿದ್ದಾರೆ. ಈ ಹಿಂದೆ ಬಿಜೆಪಿ ಸರಕಾರ ಮಸೂದ್ ಅಝರ್ನನ್ನು ಅತಿಥಿಯನ್ನಾಗಿಸಿತು. ನಂತರ ವಿದೇಶಕ್ಕೆ ಕರಕೊಂಡು ಹೋಗಿ ಸ್ವತಂತ್ರಗೊಳಿಸಿತು. ಈಗ ಚುನಾವಣೆ ಸಮಯದಲ್ಲಿ ಅಝರ್ನ ಹೆಸರಿನಲ್ಲಿ ಅವರು ಮತ ಗಳಿಸಲು ಶ್ರಮಿಸುತ್ತಿದ್ದಾರೆ. ಆದರೆ ಇದೆಲ್ಲ ಫಲಪ್ರದವಾಗುವುದಿಲ್ಲ ಎಂದು ಮಾಯಾವತಿ ಹೇಳಿದರು. ಭಾರತದ ಜೈಲಿನಲ್ಲಿದ್ದ ಮಸೂದ್ ಅಝರ್ನನ್ನು 1999ರ ಕಂಧಮಲ್ ವಿಮಾನ ಅಪಹರಣದಿಂದಾಗಿ ಬಿಡುಗಡೆಗೊಳಿಸಲಾಗಿತ್ತು. ಈ ಘಟನೆಯನ್ನು ಬೆಟ್ಟು ಮಾಡಿ ಮಾಯಾವತಿ ಬಿಜೆಪಿಯನ್ನು ಟೀಕಿಸಿದ್ದಾರೆ. ಬಿಜೆಪಿ ಸರಕಾರವಿದ್ದ ಕಾಲದಲ್ಲಿ 176 ಪ್ರಯಾಣಿಕರೊಂದಿಗೆ ಹೊರಟ ವಿಮಾನ ಅಪಹರಣಕ್ಕೊಳಗಾಗಿತ್ತು. ಅಪಹರಣಕಾರರ ಬೇಡಿಕೆಯಂತೆ ಮಸೂದ್ ಅಝರ್ ಸಹಿತ ಮೂವರು ಭಯೋತ್ಪಾದಕರನ್ನು ಭಾರತ ಬಿಡುಗಡೆಗೊಳಿಸಿತ್ತು.












