ಮನಾಮ,ಮೇ 1: ಮಾದಕವಸ್ತು ವ್ಯಾಪಾರಿಯ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಯುವಕರನ್ನು ಬಿಡುಗಡೆಗೊಳಿಸಲು ಬಹ್ರೈನ್ನ ಕ್ರಿಮಿನಲ್ ಕೋರ್ಟು ಆದೇಶಿಸಿದೆ.
ಕೊಲೆಯಾದ ವ್ಯಕ್ತಿಯ ಕೈಯಿಂದ ಆರೋಪಿಗಳು ಹಲವು ಸಲ ಮಾದಕವಸ್ತು ಖರೀದಿಸಿ ಉಪಯೋಗಿಸಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. ಅಲ್ಲದೆ ಆರೋಪಿಗಳ ವಿರುದ್ಧ ಕಳವು ಆರೋಪವೂ ಇತ್ತು.ಕಳವು ಆರೋಪದಲ್ಲಿ ಕೋರ್ಟು ಆರೋಪಿಗಳಿಗೆ ಹದಿನೈದುವರ್ಷ ಜೈಲುಶಿಕ್ಷೆ ವಿಧಿಸಿತ್ತು. ಮಾದಕವಸ್ತು ಬಳಕೆ ಆರೋಪದಲ್ಲಿ ಒಂದು ವರ್ಷ ಜೈಲು ಮತ್ತು 1000 ದೀನಾರ್ ದಮಡವನ್ನು ವಿಧಿಸಲಾಗಿತ್ತು. ಗುದೈಬಿಯ ಎಂಬಲ್ಲಿ ವಾಸವಿಲ್ಲದ ಮನೆಯಲ್ಲಿ ಶವವೊಂದು ಅನಾಥ ಸ್ಥಿತಿಯಲ್ಲಿ ಪತ್ತೆಯಾದ ನಂತರ ತನಿಖೆ ಆರಂಭವಾಗಿತ್ತು. ಆದರೆ ಆರೋಪಿಗಳು ಕೊಲೆ ಮಾಡಿದ್ದಾರೆ ಎನ್ನುವುದನ್ನು ಸಾಬೀತು ಪಡಿಸಲು ಸಾಲುವಷ್ಟು ಸಾಕ್ಷ್ಯಗಳು ದೊರಕಿಲ್ಲ. ಆದ್ದರಿಂದ ಆರೋಪಿಗಳನ್ನು ಖುಲಾಸೆಗೊಳಿಸಿ ಕೋರ್ಟು ಆದೇಶ ಹೊರಡಿಸಿತು.












