ಬೀದರ್: ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಸನ್ಮಾನ

0
585

ಸನ್ಮಾರ್ಗ ವಾರ್ತೆ

ಬೀದರ್: ನೂತನವಾಗಿ ಬೀದರ್ ಜಿಲ್ಲೆಯ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಅಧ್ಯಕ್ಷರು ತಾಹಿರ್ ಹುಸೇನ್ ಸನ್ಮಾನ ನೆರವೇರಿಸಲಾಯಿತು.

ಪಕ್ಷದ ಕಚೇರಿ ಆದ ಗವಾನ್ ಸರ್ಕಲ್ ಬಳಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಕಡೆಯಿಂದ ಚುನಾಯಿತ ಗ್ರಾಮ ಪಂಚಾಯತಿ ಸದಸ್ಯರನ್ನು ಪಕ್ಷದ ಜಿಲ್ಲಾ ಸಮಿತಿ ಹಾಗೂ ರಾಜ್ಯ ಸಮಿತಿ ವತಿಯಿಂದ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ತಾಹಿರ್ ಹುಸೇನ್ ಮಾತನಾಡುತ್ತಾ, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ದಿಸಿ ವಿಜಯಾಗಿರುವ ವೆಲ್ಫೇರ್ ಪಾರ್ಟಿ ಬೆಂಬಲಿತ ಎಲ್ಲಾ ಅಭ್ಯರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

ನಿಮ್ಮ ಗೆಲುವು ನಿಮ್ಮ ವಾರ್ಡಿನ ಜನರ ಗೆಲುವು, ನಿಮ್ಮ ಮೇಲೆ ಜನ ವಿಶ್ವಾಸವಿಟ್ಟು ನಿಮ್ಮನು ಗ್ರಾಮ ಸೇವೆಗೆ ಒಂದು ಅವಕಾಶ ಕೊಟ್ಟಿದಾರೆ. ಗೆಲುವಿನ ಈ ಕ್ಷಣ ಸಂಭ್ರಮದ ಕ್ಷಣಗಳು ಖಂಡಿತ ಖುಷಿ ಪಡೋಣ, ಆದರೆ ಮುಂದೆ ಕಠಿಣ ದಾರಿ ಇದೆ. ಹೌದು ನೀವು ಕೇವಲ ಗೆಲ್ಲಲಿಕ್ಕಾಗಿ ಮಾತ್ರ ವಾಗ್ದಾನಗಳು ಮಾಡಲಿಲ್ಲ, ಬದಲಿಗೆ ನಿಷ್ಠೆಯಿಂದ ಸೇವೆ ಮಾಡುವ ಮನೋಭಾವನೆಯಿಂದ ಜನರ ಜೊತೆ ವಾಗ್ದಾನ ಮಾಡಿದ್ದೀರಿ. ಜನರ ನಿರೀಕ್ಷೆಗೆ ತಕ್ಕಂತೆ ಶ್ರಮ ಪಡುವುದು ಅತ್ಯಂತ ಕಠಿಣ ಕೆಲಸ. ಹಾಗಾಗಿ ಈ ಕ್ಷಣ ದಿಂದಲೇ ಅದರ ಬಗ್ಗೆ ಮಾನಸಿಕವಾಗಿ ಸಿದ್ದರಾಗಿ. ನಿಮ್ಮ ಗ್ರಾಮವನ್ನು ಕಲ್ಯಾಣ ಗ್ರಾಮ ಮಾಡುವ ಕನಸು ನನಸಾಗಸಿ ಎಂಬುದಾಗಿ ಅವರು ಕತೆ ನೀಡಿದರು.

ಬೀದರ್ ಜಿಲ್ಲೆಯಲ್ಲಿ ವೆಲ್ಫೇರ್ ಪಾರ್ಟಿ 21 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, 15 ಜನರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ರಾಜ್ಯದ್ಯಂತ 44 ಗ್ರಾಮ ಪಂಚಾಯಿತಿ ಸದಸ್ಯರು ಈ ಬಾರಿ ಚುನಾಯಿತರಾಗಿದ್ದಾರೆ.

ಈ ಸಂದರ್ಭದಲ್ಲಿ ಪಕ್ಷದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷರಾದ ತಾಹಿರ್ ಹುಸೇನ್, ವೆಲ್ಫೇರ್ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಮುಜಾಹಿದ್ ಕುರೇಶಿ, ರಾಜ್ ಮಾಧ್ಯಮ ಕಾರ್ಯದರ್ಶಿ ಅಜೀಜ್ ಜಾಗಿರ್ದಾರ್, ಜಿಲ್ಲಾಧ್ಯಕ್ಷರಾದ ಮುಬಾಶಿರ ಸಿಂದೆ, ಜಿಲ್ಲಾ ಉಪಾಧ್ಯಕ್ಷರಾದ ಶರಣಪ್ಪ, ಹುಸೇನಿ ಸಾಹೇಬ್, ಇಬ್ರಾಹಿಂ, ಸೇರಿದಂತೆ ಮುಂತಾದವರು ಪಕ್ಷದ ಮುಖಂಡರು ಇದ್ದರು.