‘ಪವಿತ್ರ ಕುರ್ ಆನ್ ದೇವ ವಚನವಲ್ಲ’ ಎಂದ ಜಾಮಿದಾ ಟೀಚರ್ ಗೆ ಸದಸ್ಯತ್ವದಿಂದಲೇ ವಜಾಗೊಳಿಸಿದ ಕುರ್ ಆನ್ ಸುನ್ನತ್ ಸೊಸೈಟಿ!

0
1914

ಕೋಝಿಕ್ಕೋಡ್ :  “ಪವಿತ್ರ ನೀಡುವುದೂ ದೇವನಿಂದ ಅವತೀರ್ಣಗೊಂಡ  ವಚನವಲ್ಲ” ಎಂದು ಬಹಿರಂಗವಾಗಿ ಘೋಷಿಸಿ ವಿವಾದಕ್ಕೊಳಗಾಗಿದ್ದ ಕೇರಳದ ಕುರ್‍ಆನ್ ಸುನ್ನತ್ ಸೊಸೈಟಿ ಕಾರ್ಯದರ್ಶಿ ಜಾಮಿದಾರನ್ನು ಸಂಘಟನೆಯಿಂದ ತೆಗೆದು ಹಾಕಲಾಗಿದೆ.

ಇತ್ತೀಚೆಗೆ ಜಾಮೀದಾ ತನ್ನನ್ನು ಸ್ವಂತಂತ್ರ ಚಿಂತನೆಯ ನಾಯಕಿಯೆಂದು ಬಿಂಬಿಸಿದ್ದರು.  ಪವಿತ್ರ ಕುರ್‍ಆನ್ ದೇವ ಗ್ರಂಥವಲ್ಲ, ತಾನು ಧರ್ಮಾತೀತಳಾದ ಸ್ವತಂತ್ರ ಚಿಂತನೆಯ ವ್ಯಕ್ತಿಯಾಗಿದ್ದೇನೆ ಎಂದು ಹೇಳಿದ್ದರು.  ಜಾಮಿದಾ ಹೇಳಿಕೆಗೆ ಕೆರಳಿದ   ಕುರ್‍ಆನ್ ಸುನ್ನತ್ ಸೊಸೈಟಿ  ಅವರ ವಿರುದ್ಧ ಕ್ರಮ ಜರಗಿಸಿದೆ . ಸಂಘಟನೆಯು  ಜಾಮಿದಾರನ್ನು ಪ್ರಾಥಮಿಕ ಸದಸ್ಯತ್ವದಿಂದ ವಜಗೊಳಿಸಿದೆ ಎಂದು ಸುನ್ನತ್,ಕುರ್‍ಆನ್ ಸೊಸೈಟಿ ಪತ್ರಿಕಾ ಹೇಳಿಕೆ ನೀಡಿದೆ.

ಒಂದು ತಿಂಗಳ ಹಿಂದೆ ಜುಮಾ ನಮಾಝ್‍ಗೆ ನೇತೃತ್ವ ನೀಡಿ ವಿವಾದ ಸೃಷ್ಟಿಸಿದ್ದರು. ವಂಡೂರಿನ ಚೆರುಕ್ಕೋಡ್ ಕುರ್‍ಆನ್ ಸುನ್ನತ್ ಸೊಸೈಟಿ ಸೆಂಟ್ರಲ್ ಕಮಿಟಿ ಕಚೇರಿಯಲ್ಲಿ ಜಾಮಿದಾ ಜುಮಾ ನಮಾಝ್‍ಗೆ ನೇತೃತ್ವ ನೀಡಿದ್ದರು.  ಇಸ್ಲಾಂ ಧರ್ಮ ಸ್ವೀಕರಿಸಿದ್ದಕ್ಕಾಗಿ ವಿವಾದಕ್ಕೊಳಗಾದ  ಹಾದಿಯಾರ ಮನೆಗೆ ತೆರಳಿ ಹಿಂದೂ ಧರ್ಮಕ್ಕೆ ಮರಳಿ ಹೋಗುವಂತೆ ಒತ್ತಾಯಿಸಿ ಜಾಮಿದಾ ನಡೆಸಿದ  ಕೌನ್ಸಿಲಿಂಗ್ ಕೂಡಾ ವಿವಾದಕ್ಕೆ ಗುರಿಯಾಗಿತ್ತು. ಆಗ ಕುರ್‍ಆನ್ ಸುನ್ನತ್ ಸೊಸೈಟಿ ಜಾಮಿದಾರನ್ನು ಬೆಂಬಲಿಸಿತ್ತು. ಮಾತ್ರವಲ್ಲ, ಅವರು ಕುರ್‍ಆನ್,ಸುನ್ನತ್ ಸೊಸೈಟಿ ಕಾರ್ಯದರ್ಶಿ ಎಂಬ ನೆಲೆಯಲ್ಲಿ ಟಿವಿ ಚರ್ಚೆಗಳಲ್ಲಿಯೂ ಭಾಗವಹಿಸಿದ್ದರು.

ಕುರ್‍ಆನ್ ಸುನ್ನತ್ ಸೊಸೈಟಿ ಅಧ್ಯಕ್ಷ ಬೀರಾನ್ ಕುಟ್ಟಿ ಕುನಿಯಿಲ್ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಜಾಮಿದಾರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಕುರ್‍ಆನ್ ಸುನ್ನತ್ ಸೊಸೈಟಿಯ ಕಾರ್ಯದರ್ಶಿ ಅಝೀಝ್ ಮೌಲವಿ ತೃಪ್ಪನಚ್ಚಿ, ಜಲೀಲ್ ಅಯನಿಕ್ಕೋಡ್, ಶಮೀರ್ ಚೆಂಬ್ರಶ್ಶೇರಿ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.