ಸನ್ಮಾರ್ಗ ವಾರ್ತೆ
ಬೆಲ್ಗ್ರೇಡ್, ಅ.11: ಆಸ್ಟ್ರಿಯನ್ ಸಾಹಿತಿ ಪೀಟರ್ ಹಂಡ್ಕೆಗೆ ನೊಬೆಲ್ ಪ್ರಶಸ್ತಿ ನೀಡಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಅಲ್ಬೇನಿ, ಬೊಸ್ನಿಯಾ, ಕೊಸೊವ ದೇಶಗಳಲ್ಲಿ ಪ್ರತಿಭಟನೆ ಕಾಣಿಸಿಕೊಂಡಿದೆ.
ಅವರು ಬೊಸ್ನಿಯ, ಕ್ರೋಯೇಶ್ಯ, ಕೊಸೊವಗಳಲ್ಲಿ ಸರ್ಬ್‌ಗಳು ನಡೆಸಿದ ಜನಾಂಗೀಯ ಹತ್ಯೆಯಲ್ಲಿ ಶಿಕ್ಷಿಸಲಾದ ಸರ್ಬಿಯನ್ ಮಾಜಿ ಅಧ್ಯಕ್ಷ ಸ್ಲೋಬೊಡನ್ ಮಿಲೊಸೇವಿಚ್‍ರ ಅಭಿಮಾನಿಯಾಗಿದ್ದಾರೆ.ಪೀಟರ್‌ಗೆ ನೋಬೆಲ್ ಪ್ರಶಸ್ತಿ ನೀಡಿದ್ದನ್ನು ಈ ರಾಷ್ಟ್ರಗಳು ವಿರೋಧಿಸಿವೆ.
ಮಿಲೊಸೇವಿಚ್‍ರನ್ನು ಅಂತಾರಾಷ್ಟ್ರೀಯ ಯುದ್ಧಾಪರಾಧ ಕೋರ್ಟು ಅಪರಾಧಿಯೆಂದು ಘೋಷಿಸಿತ್ತು. ಆದರೆ ಪೀಟರ್ ಮಿಲೊಸೇವಿಚ್‍ರನ್ನು ಸಮರ್ಥಿಸಿಕೊಂಡಿದ್ದರು. ಬೊಸ್ನಿಯದ ಮುಸ್ಲಿಮ್ ಜನಾಂಗೀಯ ಹತ್ಯೆಗೆ ನೇತೃತ್ವ ನೀಡಿದ ವ್ಯಕ್ತಿ ಮಿಲೊಸೇವಿಚ್ ಅವರನ್ನು ಪೀಟರ್ ಬೆಂಬಲಿಸಿದ್ದಾರೆ.
ಮಿಲೊಸೇವಿಚ್‍ರ ಸ್ಥಾನದಲ್ಲಿ ತಾನಿದ್ದರೂ ದೇಶದ ಅಖಂಡತೆ ಉಳಿಸುವುದಕ್ಕಾಗಿ ಹೀಗೆಯೇ ಮಾಡುತ್ತಿದ್ದೆ ಎಂದು ಪೀಟರ್ ಹಂಡ್ಕೆ ಹೇಳಿದ್ದರು. ಅಲ್ಬೇನಿಯನ್ ಪ್ರಧಾನಿ ಎಡಿರಮ್ ಟ್ವೀಟ್ ಮಾಡಿ ನೋಬೆಲ್ ಪ್ರಶಸ್ತಿ ಓಲೈಕೆಗಾಗಿರುವುದು ಎಂದು ಭಾವಿಸಿರಲಿಲ್ಲ. ಆದರೆ ನಾಚಿಕೆಗೇಡಿಗೆ ಅದು ಹೊಸ ಮೌಲ್ಯವನ್ನು ತಂದು ಕೊಟ್ಟಿದೆ ಎಂದು ಹೇಳಿದ್ದಾರೆ. 1942 ಡಿಸೆಂಬರ್ ಆರರಂದು ದಕ್ಷಿಣ ಆಸ್ಟ್ರೀಯ ಗ್ರಿಫನ್ ಪ್ರದೇಶದಲ್ಲಿ ಜನಿಸಿದ ಪೀಟರ್‌ರ ತಂದೆ ಸೈನಿಕರಾಗಿದ್ದು ಸ್ಲೋವಿನಿಯನ್ ಅಲ್ಪಸಂಖ್ಯಾತ ವಿಭಾಗಕ್ಕೆ ಸೇರಿದವರು.












