ಸನ್ಮಾರ್ಗ ವಾರ್ತೆ
ಬೆಂಗಳೂರು,ಅ.11: ರಾಜ್ಯದ ಮಾಜಿ ಉಪಮುಖ್ಯಮಂತ್ರಿ ನೇತೃತ್ವದ ಟ್ರಸ್ಟ್ ನಡೆಸುತ್ತಿರುವ ತುಮಕೂರಿನ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ದಾಳಿ ನಡೆಸಿದ ಆದಾಯ ಇಲಾಖೆಗೆ 4.5 ಕೋಟಿ ರೂ. ಪತ್ತೆಯಾಗಿದೆ ಎಂದು ವರದಿಯಾಗಿದೆ.
ಮೆಡಿಕಲ್ ಕಾಲೇಜು ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಇಂದು ಕೂಡ ಐಟಿ ಶೋಧ ಕಾರ್ಯ ಮುಂದುವರಿದಿದ್ದು, ಪರಮೇಶ್ವರ್ಗೆ ಸಂಬಂಧಸಿದ 30 ಸ್ಥಳಗಳಲ್ಲಿ 4.52 ಕೋಟಿ ರೂಪಾಯಿ ಪತ್ತೆಯಾಗಿದೆ. ಗುರುವಾರ ಐಟಿ ಪರಮೇಶ್ವರ್ರ ಮನೆ ವಿದ್ಯಾಭ್ಯಾಸ ಸಂಸ್ಥೆಗಳಲ್ಲಿ ದಾಳಿ ಮಾಡಿತ್ತು.
ಬೆಂಗಳೂರಿನ ಸದಾಶಿವ ನಗರದ ವಸತಿಯಲ್ಲಿ, ನೆಲಮಂಗಲದ ಮೆಡಿಕಲ್ ಕಾಲೇಜು, ತುಮಕೂರಿನ ಇತರ ಶಿಕ್ಷಣ ಸಂಸ್ಥೆಗಳ ಸಹಿತ ಮೂವತ್ತು ಸ್ಥಳಗಳಲ್ಲಿ ಶೋಧ ನಡೆಯಿತು. ವಿಧಾನಸಭೆ ಸಮ್ಮೇಳನ ನಡೆದ ಮೊದಲ ದಿನವೇ ತುಮಕೂರಿನ ಶಾಸಕರಾದ ಪರಮೇಶ್ವರ್ ಮನೆಗಳಿಗೆ ಮತ್ತು ಸಂಸ್ಥೆಗಳಿಗೆ ದಾಳಿ ನಡೆದಿದೆ.
ಕಾಂಗ್ರೆಸ್ ಮಾಜಿ ಸಂಸದ, ಶಾಸಕರಾದ ಆರ್ಎಲ್ ಜಾಲಪ್ಪರ ದೊಡ್ಡಬಳ್ಳಾಪುರ, ತುಬಗೆರೆಯ ಮನೆಯಲ್ಲಿ ಮತ್ತು ಕೋಲಾರದ ಜಾಲಪ್ಪ ಮೆಡಿಕಲ್ ಕಾಲೇಜು, ಚಿಕ್ಕಬಳ್ಳಾಪುರ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಜಿಎಚ್ ನಾಗರಾಜು ಮನೆಯಲ್ಲಿಯೂ ಆದಾಯ ತೆರಿಗೆ ದಾಳಿ ನಡೆದಿತ್ತು. ಉಪಮುಖ್ಯಮಂತ್ರಿ ಸ್ಥಾನ ಮತ್ತು ಬೆಂಗಳೂರಿನ ಅಭಿವೃದ್ಧಿ ಸಚಿವ ಸ್ಥಾನ ತನ್ನ ವೈಯಕ್ತಿಕ ಲಾಭಕ್ಕೆ ಪರಮೇಶ್ವರ್ ಉಪಯೋಗಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.












