ಯಮನ್ ಯುದ್ಧ: 1 ಲಕ್ಷಕ್ಕೂ ಅಧಿಕ ನಾಗರಿಕರು ಬಲಿ- ವರದಿ

0
821

ಸನ್ಮಾರ್ಗ ವಾರ್ತೆ

ಬೈರೂತ್,ನ.2: ಸೌದಿ ಅರೇಬಿಯಾ ನೇತೃತ್ವದ ಸಖ್ಯ ಸೇನೆಯೊಂದಿಗೆ ಯಮನ್‍ನಲ್ಲಿ ಯುದ್ಧ ಸಂಭವಿಸಿದ ಬಳಿಕ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದಾರೆ ಎಂದು ಅಮೆರಿಕದ ಡಾಟಾಬೇಸ್ ಪ್ರಾಜೆಕ್ಟ್ ಎಸಿಎಲ್‍ಇಡಿ ತಿಳಿಸಿದೆ.

ಯಮನ್‍ನಲ್ಲಿ 2015ರಲ್ಲಿ ಯುದ್ಧ ಆರಂಭವಾಗಿತ್ತು. ನೇರ ದಾಳಿಯಲ್ಲಿ 12000 ನಾಗರಿಕರ ಹತ್ಯೆಯಾಗಿದೆ. ವರದಿಯ ಪ್ರಕಾರ ಈ ವರ್ಷ 20000 ಮಂದಿಯ ಹತ್ಯೆ ನಡೆದಿದೆ. 2018ರ ನಂತರ ಈ ವರ್ಷ ಈ ವರೆಗೆ ಯಮನಿಯರಿಗೆ ಅತ್ಯಂತ ಕೆಟ್ಟ ವರ್ಷವಾಗಿ ಬದಲಾಗಿದೆ ಎಂದು ವರದಿ ವಿಶ್ಲೇಷಣೆ ನಡೆಸಿದೆ.ಈ ವರೆಗೆ 25000 ಮಂದಿ ಮೃತಪಟ್ಟಿದ್ದು, ಸೆಪ್ಟಂಬರ್‍‌ನಲ್ಲಿ 1700 ಮಂದಿ ಹತ್ಯೆಯಾದರೆಂದು ಅಮೆರಿಕನ್ ಡೆಟಾ ಪ್ರಾಜೆಕ್ಟ್ ತಿಳಿಸಿದೆ.

2015ರಲ್ಲಿ  ಹುದೈದಾ ಮತ್ತು ಜೌಫ್ ಪ್ರಾಂತ್ಯಗಳು ಹೆಚ್ಚು ಹಿಂಸೆಗೆ ಗುರಿಯಾಗಿದ್ದು ಇಲ್ಲಿನ ಒಂದೊಂದು ಸ್ಥಳದಲ್ಲಿ 10000 ಮಂದಿ ಹತ್ಯೆಯಾಗಿದ್ದಾರೆ. ಸೌದಿ ಅರೇಬಿಯ ನೇತೃತ್ವದ ಸಖ್ಯ ಸೇನೆ ನಡೆಸಿದ ನೇರ ದಾಳಿಯಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ 8000 ನಾಗರಿಕರನ್ನು ಕೊಂದು ಹಾಕಿದೆ. ಸೌದಿ ಸೇನೆ ಆಕಾಶ ದಾಳಿ ಮಾಡಿದ್ದರಿಂದ ಯಮನ್‍ನ ಶಾಲೆ, ಆಸ್ಪತ್ರೆ ಮತ್ತು ಮದುವೆ ಸಮಾರಂಭದಲ್ಲಿ ಸಾವಿರಾರು ನಾಗರಿಕರು ಜೀವ ತೆತ್ತಿದ್ದು, ಯಮನ್ ಯುದ್ಧಗ್ರಸ್ತ ಸ್ಥಿತಿಯಿಂದ ಹಸಿವಿನ ಸಂಕಟವನ್ನೂ ಅನುಭವಿಸುತ್ತಿದೆ ಎಂದು ಡೇಟಾ ಪ್ರಾಜೆಕ್ಟ್ ವರದಿಯಲ್ಲಿ ಬಹಿರಂಗಪಡಿಸಿದೆ.