ಹೊಸದಿಲ್ಲಿ, ನ.11: ವಿವಾದಿತ ಜಮೀನಿನಲ್ಲಿ ರಾಮಮಂದಿರ ಕಟ್ಟುವ ಸುಪ್ರೀಂಕೋರ್ಟಿನ ತೀರ್ಪಿನ ಬೆನ್ನಿಗೆ ಶಾಂತಿ ಸಮನ್ವಯಕ್ಕಾಗಿ ಕೇಂದ್ರ ಸರಕಾರ ಹಿಂದೂ ಮುಸ್ಲಿಂ ನಾಯಕರ ಸಭೆ ಕರೆದಿದೆ. ಶಾಂತಿ ಭಂಗ ಮಾಡುವುದಿಲ್ಲ ಎಂದು ದೃಢಪಡಿಸಲಾಗುವುದು ಎಂದು ಸಭೆಯ ನಂತರ ಎರಡು ವಿಭಾಗಗಳು ಸೇರಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿವೆ.
ಇದೇವೇಳೆ, ಸುಪ್ರೀಂಕೊರ್ಟಿನ ತೀರ್ಪಿನ ವಿರುದ್ಧ ಮುಸ್ಲಿಮರು ಮರುಪರಿಶೀಲನೆ ಅರ್ಜಿ ಸಲ್ಲಿಸಬಾರೆದನ್ನುವ ಹಿಂದೂ ನಾಯಕರು ಮತ್ತು ಶಿಯಾ ವಿಭಾಗದ ಬೇಡಿಕೆಯನ್ನು ಒಪ್ಪುವಂತಿಲ್ಲ ಎಂದು ಮುಸ್ಲಿಂ ನಾಯಕರು ಹೇಳಿದರು. ಪೌರತ್ವ ಪಟ್ಟಿಗೆ ಸಂಬಂಧಿಸಿದ ಮುಸ್ಲಿಮರ ಆತಂಕವನ್ನೂ ನಾಯಕರು ಮುಂದಿಟ್ಟರು. ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಅಜಿತ್ ಡೋವಲ್ರ ಮನೆಯಲ್ಲಿ ರವಿವಾರ ಸಭೆಯು ನಡೆದಿತ್ತು. ಉಪಸಲಹೆಗಾರ ದತ್ತ ಮತ್ತು ಹದಿನೆಂಟು ಹಿಂದೂ ನಾಯಕರು ಮತ್ತು 12 ಮುಸ್ಲಿಂ ನಾಯಕರೂ ಇದ್ದರು.












