ಛತ್ತೀಸ್‍ಗಡದಲ್ಲಿ ಸಾಮೂಹಿಕ ಅತ್ಯಾಚಾರ: ನಾಲ್ವರ ಬಂಧನ

0
716

ಸನ್ಮಾರ್ಗ ವಾರ್ತೆ-

ರಾಯಪುರ, ಡಿ.10: ಛತ್ತೀಸ್ ಗಡದಲ್ಲಿ ರಾಜ್‍ನಂದಗಾಂವ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರನ್ನು ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ಘಟನೆಯಲ್ಲಿ ಅಪ್ರಾಪ್ತ ವಯಸ್ಕ ಸಹಿತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ತಕ್‍ಚೇಂದ್ ಧ್ರುವ್, ಸೀತಾರಾಂ ಪಟೇಲ್, ಮಾಯಾರಾಮ, ಆನಂದ್ ಪಟೇಲ್ ಬಂಧಿತ ಆರೋಪಿಗಳು.

ಸಾಲೆವಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಡಿಸೆಂಬರ್ ಎರಡರಂದು ರಾತ್ರಿ ಘಟನೆ ನಡೆದಿದೆ. ಮಹಿಳೆ ಕಸ ಎಸೆಯಲು ಹೊರಗೆ ಬಂದಾಗ ಆರೋಪಿಗಳು ಮಹಿಳೆಯನ್ನು ಎತ್ತಿಕೊಂಡು ಹೋಗಿ ದುಷ್ಕøತ್ಯ ಎಸಗಿದ್ದಾರೆ.

ಅತ್ಯಾಚಾರದ ಬಳಿಕ ಆರೋಪಿಗಳು ಮಹಿಳೆಯನ್ನು ಬಿಟ್ಟು ಹೋಗಿದ್ದರು. ಅಲ್ಲಿಂದ ಪಾರಾಗಿ ಮನೆಗೆ ಬಂದ ನಂತರ ರವಿವಾರ ಘಟನೆ ಬಹಿರಂಗವಾಗಿತ್ತು. ಇದರೊಂದಿಗೆ ಕುಟುಂಬ ಪೊಲೀಸರಿಗೆ ದೂರು ನೀಡಿತ್ತು. ಇಬ್ಬರು ಆರೋಪಿಗಳನ್ನು ಮಧ್ಯಪ್ರದೇಶದಿಂದ ಮತ್ತು ಇಬ್ಬರನ್ನು ರಾಜ್‍ನಂದ್‍ಗಾಂವ್‍ನಿಂದ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ.