ಪೌರತ್ವ ಮಸೂದೆ ಅಂಗೀಕಾರಗೊಂಡರೆ ನನ್ನನ್ನು ನಾನು ಮುಸ್ಲಿಮ್ ಎಂದು ಘೋಷಿಸಿಕೊಳ್ಳುವೆ- ಹರ್ಷ ಮಂದರ್

0
6555

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ.10: ಅಫ್ಘಾನಿಸ್ತಾನ ಪಾಕಿಸ್ತಾನ, ಬಾಂಗ್ಲದೇಶದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಮಸೂದೆ ಪಾಸಾದರೆ ತಾನು ಮುಸ್ಲಿಂ ಆಗುವೆ ಎಂದು ಪತ್ರಕರ್ತ ಹರ್ಷ ಮಂದರ್ ಘೋಷಿಸಿದ್ದಾರೆ. ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿ ರವಿವಾರ ರಾತ್ರಿ ಜೆಎನ್‍ಯು ಕ್ಯಾಂಪಸ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರ್ಷ ಮಂದರ್ ಹೀಗೆ ಹೇಳಿದರು.

ಪೌರತ್ವ ತಿದ್ದುಪಡಿ ಮಸೂದೆ ಪಾಸಾದರೆ, ನಾನು ಮುಸ್ಲಿಂ ಎಂದು ಘೋಷಿಸುವೆ. ಎರಡನೆಯಾದಾಗಿ ಗುರುತಿಸುವ ಯಾವ ದಾಖಲೆಯನ್ನೂ ನಾನು ಹಾಜರುಪಡಿಸುವುದಿಲ್ಲ. ಮೂರನೆಯದಾಗಿ, ಸರಕಾರ ಈ ವಿಷಯದಲ್ಲಿ ಏನಾದರೂ ಮುಸ್ಲಿಮರನ್ನು ಜೈಲಿನಲ್ಲಿಟ್ಟರೆ ನಾನೂ ಅದರಲ್ಲೊಬ್ಬನಾಗುವೆ ಎಂದು ಅವರು ಹೇಳಿದರು. ಹರ್ಷ ಮಂದರ್ ರ ಭಾಷಣದ ಕುರಿತು ವಿದ್ಯಾರ್ಥಿಯೊಬ್ಬರು ಫೇಸ್‍ಬುಕ್‍ ನಲ್ಲಿ ಹಂಚಿಕೊಂಡ ಬಳಿಕ ಅವರ ಹೇಳಿಕೆ ಮಾಧ್ಯಮಗಳಲ್ಲಿ ಬಂದಿದೆ.