ನೀವು ಎಷ್ಟು ದಲಿತರೊಂದಿಗೆ ಊಟ ಮಾಡಿರುವಿರಿ?: ಇವತ್ತು ಮುಸ್ಲಿಮರಾದರೆ, ನಾಳೆ ದಲಿತರು; ಬಿಜೆಪಿ ಬಗ್ಗೆ ಅಶೋಕ್ ಗೆಹ್ಲೋಟ್

0
1048

ಸನ್ಮಾರ್ಗ ವಾರ್ತೆ

ಜೈಪುರ, ಫೆ. 117: ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗ ಮೀಸಲಾತಿ ವಿಷಯದಲ್ಲಿ ಕೇಂದ್ರ ಸರಕಾರವನ್ನು ತೀವ್ರವಾಗಿ ತರಾಟೆಗೆತ್ತಿಕೊಂಡ ಕಾಂಗ್ರೆಸ್ ಹಿರಿಯ ನಾಯಕ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಸ್ಪೃಶ್ಯತೆಯನ್ನು ಕೊನೆಗೊಳಿಸಲು, ಬಿಜೆಪಿ, ಆರೆಸ್ಸೆಸ್ ಏನಾದರೂ ಮಾಡಿದೆಯೇ ಎಂದು ಪ್ರಶ್ನಿಸಿದ್ದಾರೆ. ಇಂದು ಅವರು ಮುಸ್ಲಿಮರ ವಿರುದ್ಧ ದಾಳಿ ಮಾಡುತ್ತಿದ್ದಾರೆ. ನಾಳೆ ಅವರು ಸಿಖ್ಖರು, ಬುದ್ಧಿಸ್ಟ್ ಗಳನ್ನು ಹುಡುಕಿ ಬಂದಾರು. ಅವರು ಹಿಂದು ದೇಶ ಬಯುಸುತ್ತಾರೆ. ಆದರೆ ಅವರು ಅಸ್ಪೃಶ್ಯತೆ ಕೊನೆಗೊಳಿಸಲು ಏನಾದರೂ ಮಾಡಿದ್ದಾರೆಯೇ? ನಿಮ್ಮ ಕುಟುಂಬದ ಎಷ್ಟು ಮಂದಿ ಅವರ ಜೊತೆ ಕೂತು ಊಟ ಮಾಡುತ್ತಾರೆ ಎಂದು ಗೆಹ್ಲೋಟ್ ಪ್ರಶ್ನಿಸಿದರು.

ಜೈಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತಾಡುತ್ತಿದ್ದರು. ಉಪಮುಖ್ಯಮಂತ್ರಿ ಸಚಿನ್ ಪೈಲಟ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅವಿನಾಶ್ ಪಾಂಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮೀಸಲಾತಿ ಕೊನೆಗೊಳಿಸುವ ಕೇಂದ್ರ ಸರಕಾರದ ಕ್ರಮದ ವಿರುದ್ಧ ಮೀಸಲಾತಿ ಫಲಾನುಭವಿಗಳೆಲ್ಲರೂ ಮುಂದೆ ಬರಬೇಕೆಂದು ಅವರು ಕರೆ ನೀಡಿದರು.