ಸನ್ಮಾರ್ಗ ವಾರ್ತೆ
ಬರ್ಲಿನ್, ಮಾ. 9: ಪೌರತ್ವ ತಿದ್ದುಪಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕೆ ಪ್ರತಿಯಾಗಿ ಕೇಂದ್ರ ಸರಕಾರ ವೀಸಾ ರದ್ದುಪಡಿಸಿದ್ದ ಮದ್ರಾಸ್ ಐಐಟಿಯ ಜರ್ಮನ್ ವಿದ್ಯಾರ್ಥಿ ಜೇಕಬ್ ಲಿಂಂಡೆನ್ಟಲ್ ಅವರು ಜರ್ಮನಿಯ ಬರ್ಲಿನ್ನಲ್ಲಿ ಭಾರತೀಯರು ಆಯೋಜಿಸಿದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ವೀಸಾ ರದ್ದಾದೊಡನೆ ಜರ್ಮನಿಗೆ ಮರಳಿದರೂ ತನ್ನ ನಿಲುವಿನಲ್ಲಿ ಬದಲಾವಣೆಯಿಲ್ಲ ಎಂದು ಅವರು ತೋರಿಸಿಕೊಟ್ಟಿದ್ದಾ. ಪ್ರಜಾಪ್ರಭುತ್ವ ದೇಶ ಎಂದು ಹೇಳುವ ಭಾರತದಲ್ಲಿ ಭಾರತ ಸರಕಾರ ಪ್ರತಿವಾದವನ್ನು ಸ್ವೀಕರಿಸುವುದಿಲ್ಲ ಎಂದು ಜೇಕಬ್ ಹೇಳಿದ್ದಾರೆ.
ಚೆನ್ನೈನಲ್ಲಿ ನಡೆದಿದ್ದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು ಜರ್ಮನಿಗೆ ಮರಳಿ ಕಳುಹಿಸಿಕೊಡಲಾಗಿತ್ತು. ಅವರ ವೀಸಾಕ್ಕೆ ಈ ವರ್ಷ ಜೂನ್ ವರೆಗೆ ಸಮಯ ಇತ್ತು. ಆದರೆ ಫೆಬ್ರವರಿ 8ಕ್ಕೆ ವೀಸಾ ರದ್ದುಪಡಿಸಲಾಗಿತ್ತು. ಜರ್ಮನಿಯ ಡ್ರೆಸ್ಡೆನ್ ಟೆಕ್ನಿಕಲ್ ಯುನಿವರ್ಸಿಟಿಯಿಂದ ಎಕ್ಸ್ ಚೇಂಜ್ ಪ್ರೊಗ್ರಾಮ್ಗಾಗಿ ಮದ್ರಾಸ್ ಐಐಟಿಗೆ ಜೇಕಬ್ ಬಂದಿದ್ದರು. ಅವರ ಶಿಕ್ಷಣ ಮೇ ತಿಂಗಳಿಗೆ ಕೊನೆಗೊಳ್ಳುವುದಿತ್ತು. ಆದರೆ ಯಾವುದೇ ಕಾರಣ ತೋರಿಸದೆ ಅವರ ವೀಸಾ ರದ್ದುಪಡಿಸಲಾಗಿತ್ತು. ಆದರೆ ಈಗ ಪೂರ್ತಿ ಮಾಡಿರುವ ಒಂದು ಸೆಮಿಸ್ಟರ್ ದಾಖಲೆ ಜೇಕಬ್ಗೆ ಕೊಡಲಾಗುವುದು ಎಂದು ವಿಶ್ವವಿದ್ಯಾನಿಲಯ ಮೂಲಗಳು ತಿಳಿಸಿದೆ.












