ಸನ್ಮಾರ್ಗ ವಾರ್ತೆ
ಬೀಜಿಂಗ್, ಮಾ.10: ಕೊರೊನಾ ವೈರಸ್ ಜಗತ್ತಿನಾದ್ಯಂತ ಹರಡುತ್ತಿದ್ದು ಈ ನಡುವೆ ಚೀನದಲ್ಲಿ ಕೊರೊನಾ ದೃಢಪಟ್ಟು ಚಿಕಿತ್ಸೆಯಲ್ಲಿದ್ದ ನೂರು ವರ್ಷದ ಅಜ್ಜ ಸಂಪೂರ್ಣ ಗುಣಮುಖರಾಗಿದ್ದಾರೆ. ಕಳೆದ ತಿಂಗಳು ಇವರು ನೂರನೇ ಜನ್ಮ ದಿನವನ್ನು ಆಚರಿಸಿದ್ದರು.
ಫೆಬ್ರುವರಿ 24ಕ್ಕೆ ಕೊರೊನಾದಿಂದಾಗಿ ಇವರಿಗೆ ಹುಬಾದ ಮೆಟರ್ನಿಟಿ ಆಂಡ್ ಚೈಲ್ಡ್ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭಿಸಲಾಗಿತ್ತು. ವೈರಸ್ ಮಾತ್ರವಲ್ಲ ಅಲ್ಜೀಮರ್ಸ್, ರಕ್ತದೊತ್ತಡ, ಹೃದಯ ರೋಗ ಕೂಡ ಇವರಿಗಿತ್ತು. ಇತರ ರೋಗಕ್ಕಿಂತ ಬೇಗನೆ ಕೊರೊನದಲ್ಲಿ ಇವರು ಗುಣಮುಖರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಎಂಬತ್ತು ಮಂದಿಯ ಜೊತೆ ಅಜ್ಜನಿಗೂ ಕೊರೊನಾ ಚಿಕಿತ್ಸೆ ನೀಡಲಾಗುತ್ತಿತ್ತು. ಕೊರೊನಾ ಚಿಕಿತ್ಸೆ ಹೆಚ್ಚು ವಯಸ್ಸಾದವರಲ್ಲಿ ಕಷ್ಟಕರ ಎಂಬ ಸಾರ್ವತ್ರಿಕ ಭಾವನೆಯನ್ನು ಇಲ್ಲದಾಗಿಸುವಂತೆ ಈ ಘಟನೆ ಮಾಡಿದೆ. ಚೀನದಲ್ಲಿ 80 ಸಾವಿರ ಮಂದಿ ಕೊರನಾ ಪೀಡಿತರಿದ್ದು . 3000 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ.












