ಗುಜರಾತ್ ವಿಶ್ವವಿದ್ಯಾನಿಲಯದಿಂದ ಎಬಿವಿಪಿ ಔಟ್; ಕಾಂಗ್ರೆಸ್ ನ ಎನ್‍ಎಸ್‍ಯು ಇನ್

0
1177

ಸನ್ಮಾರ್ಗ ವಾರ್ತೆ

ಗುಜರಾತ್, ಮಾ.10: ಗುಜರಾತ್ ವಿಶ್ವವಿದ್ಯಾನಿಲಯದ ಸೆನೆಟ್ ಚುನಾವಣೆಯಲ್ಲಿ ಎಬಿವಿಪಿಯನ್ನು ಸೋಲಿಸಿ ಎನ್‍ಎಸ್‍ಯುಐ ಪ್ರಚಂಡ ವಿಜಯ ದಾಖಲಿಸಿದೆ. ಒಟ್ಟು ಎಂಟು ಸೀಟುಗಳ ಪೈಕಿ ಆರು ಸೀಟುಗಳಲ್ಲಿ ಕಾಂಗ್ರೆಸ್‍ನ ವಿದ್ಯಾರ್ಥಿ ಸಂಘಟನೆ ನ್ಯಾಶನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‍ಎಸ್‍ಯು ಐ) ವಿಜಯಗಳಿಸಿದೆ. ನಾಲ್ಕು ವರ್ಷಗಳ ಅಂತರದ ಬಳಿಕ ರವಿವಾರ ಸೆನೆಟ್‍ಗೆ ಚುನಾವಣೆ ನಡೆಯಿತು.

ಬಿಜೆಪಿಯ ವಿಭಜಕ ನೀತಿಯನ್ನು ಪ್ರಧಾನಿಯ ಊರಿನ ವಿದ್ಯಾರ್ಥಿಗಳು ತಿರಸ್ಕರಿಸಿದ್ದಾರೆ. ಒಗ್ಗಟ್ಟಿನ ಭಾರತ ಸಿದ್ಧಾಂತ ಗೆದ್ದು ಬಂದಿದೆ ಎಂದು ಗೆಲುವಿನ ಕುರಿತು ಎನ್‍ಎಸ್‍ಯುಐ ಟ್ವೀಟ್ ಮಾಡಿದೆ.