ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ. 30: ಕೊರೊನಾ ಹರಡದಂತೆ ನಿಯಂತ್ರಿಸುವುದಕ್ಕಾಗಿ ಘೋಷಿಸಿದ ಲಾಕ್ಡೌನ್ ಜಾರಿಗೊಳಿಸುವುದರಲ್ಲಿ ವಿಫಲಗೊಂಡಿದ್ದಾರೆ ಎಂದು ಆರೋಪಿಸಿ ದಿಲ್ಲಿಯ ಇಬ್ಬರು ಉನ್ನತ ಐಎಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ಸಾರಿಗೆ ಇಲಾಖೆಯ ಅಡಿಷನಲ್ ಚೀಫ್ ಸೆಕ್ರಟರಿ ರೇಣು ಶರ್ಮ, ಫೈನಾನ್ಸ್ ಪ್ರಿನ್ಸಿಪಲ್ ಸೆಕ್ರಟರಿ ರಾಜೀವ್ ವರ್ಮರನ್ನು ಅಮಾನತಿಗೆ ಗುರಿಪಡಿಸಲಾಗಿದೆ. ರೇಣು 1988ರ ಬ್ಯಾಚ್ ಅಧಿಕಾರಿ. ರಾಜೀವ್ ವರ್ಮ 1992ರ ಬ್ಯಾಚ್ ಅಧಿಕಾರಿಯಾಗಿದ್ದಾರೆ. ಕೇವಲ ಅಮಾನತು ಮಾತ್ರವಲ್ಲ ದಂಡ ಹೇರುವುದಕ್ಕೂ ಗೃಹ ಸಚಿವಾಲಯ ತಿಳಿಸಿದೆ.
ದಿಲ್ಲಿ ಅಡಿಶನಲ್ ಚೀಪ್ ಸೆಕ್ರಟರಿ, ಹೋಂ ಆಂಡ್ ಲ್ಯಾಂಡ್ಬಿಲ್ಡಿಂಗ್ ಸೆಕ್ರಟರಿ ಮತ್ತು ಝೀಲಂಪುರಿ ಸಬ್ ಡಿವಿಷನ್ನ ಮ್ಯಾಜಿಸ್ಟ್ರೇಟ್ ಇವರ ವಿರುದ್ಧ ಕ್ರಮ ಜರಗಿಸಲು ಗೃಹ ಸಚಿವಾಲಯ ತಿಳಿಸಿದೆ.
ಈ ಅಧಿಕಾರಿಗಳ ವಿರುದ್ಧ ಯಾಕೆ ಕ್ರಮ ಕೈಗೊಳ್ಳುವುದು ಎಂದು ಗೃಹಸಚಿವಾಲಯ ಕಾರಣವನ್ನು ಸ್ಪಷ್ಟಪಡಿಸಿಲ್ಲ. ಕಳೆದ ಎರಡು ದಿವಸಗಳಿಂದ ರಾಜಧಾನಿಯ ವಿವಿಧ ಭಾಗಗಳಿಂದ ದಿಲ್ಲಿ, ಉತ್ತರ ಪ್ರದೇಶ ಗಡಿಗಳಿಗೆ ವಲಸೆ ಕಾರ್ಮಿಕರನ್ನು ತಲುಪಿಸಲು ದಿಲ್ಲಿ ಟ್ರಾನ್ಸ್ ಪೋಟ್ ಕಾರ್ಪೊರೇಷನ್ ವ್ಯವಸ್ಥೆಯಲ್ಲಾದ ಅಡಚಣೆಗಳಿಗಾಗಿ ಕ್ರಮ ಜರಗಿಸಲು ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












