ಸನ್ಮಾರ್ಗ ವಾರ್ತೆ
ಲಕ್ನೋ; ಮಾರ್ಚ್30- ಕೊರೋನಾ ಸೋಂಕಿತರ ವಿಷಯದಲ್ಲಿ ಸರಕಾರಕ್ಕೆ ನೆರವಾಗಲು ಭಾರತದ ಮುಸ್ಲಿಮರ ಪ್ರಮುಖ ವಿದ್ಯಾ ಸಂಸ್ಥೆಯಾದ ದಾರುಲ್ ಉಲೂಮ್ ದೇವ್ ಬಂದ್ ಮುಂದೆ ಬಂದಿದೆ. ಉತ್ತರಪ್ರದೇಶದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಈ ಸಂಸ್ಥೆಯು ಕೊರೋನಾ ಶಂಕಿತರ ಐಸೋಲೇಷನ್ ಗಾಗಿ ಜಿ ಟಿ ರಸ್ತೆಯಲ್ಲಿರುವ ದಾರುಲ್ ಕುರ್ ಆನ್ ಕಟ್ಟಡವನ್ನು ಸರಕಾರಕ್ಕೆ ನೀಡುವುದಾಗಿ ಪತ್ರ ಬರೆದಿದೆ.
ಕೊರೋನಾವನ್ನು ತಡೆಯುವ ಈ ಹೋರಾಟದಲ್ಲಿ ನಾವು ಸರಕಾರದ ಜೊತೆಗಿದ್ದೇವೆ. ದಾರುಲ್ ಕುರ್ ಆನ್ ಕಟ್ಟಡವನ್ನು ಮಾತ್ರವಲ್ಲ, ಅಗತ್ಯ ಬಿದ್ದರೆ ಇನ್ನಷ್ಟು ಕಟ್ಟಡಗಳನ್ನು ಸರಕಾರಕ್ಕೆ ನೀಡಲು ನಾವು ಸಿದ್ಧರಿದ್ದೇವೆ ಎಂದು ಸಂಸ್ಥೆಯ ಕುಲಪತಿ ಅಬುಲ್ ಕಾಸಿಂ ನೂಮಾನಿ ಅವರು ಸರಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪುಟವನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












