ಸನ್ಮಾರ್ಗ ವಾರ್ತೆ
ಡಮಸ್ಕಸ್,ಜೂ.4: ಜಗತ್ತಿನಲ್ಲಿ ಈಗ ಜಾರ್ಜ್ ಫ್ಲಾಯ್ಡ್ಗಾಗಿ ಒಗ್ಗಟ್ಟಿನ ಹೋರಾಟ ಸಂಗಮವೇ ನಡೆಯುತ್ತಿದೆ. ಬೇರೆ ಬೇರೆ ದೇಶಗಳಲ್ಲಿ ವಿವಿಧ ರೀತಿಯ ಹೋರಾಟಗಳು ನಡೆಯುತ್ತಿವೆ. ಇದರಲ್ಲಿ ಸಿರಿಯದ ಒಂದು ಪ್ರತಿಭಟನಾ ವಿಧಾನ ಜಗತ್ತಿನ ಗಮನ ಸೆಳೆದಿದೆ. ಆಂತರಿಕ ಯುದ್ಧದಿಂದ ಕಟ್ಟಡಕ್ಕೆ ಬಾಂಬ್ ಹಾಕಿದ ಪರಿಣಾಮವಾಗಿ ಛಿದ್ರಗೊಂಡು ಬಾಕಿ ಉಳಿದ ಗೋಡೆಯ ಪುಟ್ಟ ಭಾಗವೊಂದರಲ್ಲಿ ಫ್ಲಾಯ್ಡ್ನ ಚಿತ್ರವನ್ನು ಪೇಯಿಂಟಿಂಗ್ ಮಾಡುವ ಮೂಲಕ ಕಲಾಕಾರ ಅಝೀಝ್ ಅಲ್ ಅಸ್ಮರ್ಪ್ರತಿಭಟಿಸಿದ್ದಾರೆ.
ಇದ್ಲಿಬ್ನ ಸಮೀಪದ ಪ್ರಾಂತದಲ್ಲಿ ಸಿರಿಯದ ಗ್ರಾಫ್ಟಿ ಕಲಾವಿದರಾದ ಅಝೀಝ್ ಅಲ್ ಅಸ್ಮರ್(48) ಜಾರ್ಜ್ ಫ್ಲಾಯ್ಡ್ರ ಚಿತ್ರವನ್ನು ತಮ್ಮ ಕುಂಚದಲ್ಲಿ ಅರಳಿಸಿದ್ದಾರೆ. ತನ್ನ ಹಟ್ಟೂರು ಬಿನಿಶ್ ನಗರದಲ್ಲಿ ಬಾಂಬಿಂಗ್ನಲ್ಲಿ ನಾಶವಾದ ತನ್ನ ಮನೆಯ ಗೋಡೆಯಲ್ಲಿ ಇವರು ಈ ಚಿತ್ರ ಬರೆದಿದ್ದಾರೆ.
ಅಮೆರಿಕದಲ್ಲೂ ಜಗತ್ತಿನಲ್ಲಿಯೂ ನೆಲೆಯೂರಿದ ಜನಾಂಗ ದ್ವೇಷದ ವಿರುದ್ಧ ಒಗ್ಗಟ್ಟನ್ನು ಈ ರೀತಿ ವ್ಯಕ್ತಪಡಿಸಿದ ಅವರು, “ನಾವು ಶಾಂತಿ ಮತ್ತು ಸ್ವಾತಂತ್ರ್ಯದ ವಕ್ತಾರರು. ಜಾಗತಿಕ ಮಾನವರ ಸಮಸ್ಯೆಗಳ ವಿರುದ್ಧ ಹೋರಾಟದಲ್ಲಿ ಒಗ್ಗಟ್ಟು ವ್ಯಕ್ತಪಡಿಸುವುದು ನಮ್ಮ ಕರ್ತವ್ಯವೆಂದು” ಅಝೀಝ್ ಹೇಳಿದರು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












