5 ಲಕ್ಷ ದಾಟಿದ ಸೋಂಕಿತರ ಸಂಖ್ಯೆ: ಪ್ರಧಾನಿ ಸೋಂಕಿಗೆ ಶರಣಾಗಿದ್ದಾರೆ- ರಾಹುಲ್ ಗಾಂಧಿ ಟೀಕೆ
ಸನ್ಮಾರ್ಗ ವಾರ್ತೆ
ನವ ದೆಹಲಿ.ಜೂ.27:ದೇಶದಲ್ಲಿ ಕೊರೋನಾ ಸಾಂಕ್ರಾಮಿಕ ರೋಗವು ತೀವ್ರವಾಗಿ ಹರಡುತ್ತಿದ್ದು, ಈ ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದಾರೆ. “ಕೋವಿಡ್ -19 ದೇಶದಲ್ಲಿ ವೇಗವಾಗಿ ಹರಡುತ್ತಿದೆ, ಆದರೆ ಅದನ್ನು ಸೋಲಿಸುವ ಯಾವುದೇ ಯೋಜನೆ ಸರ್ಕಾರಕ್ಕೆ ಇಲ್ಲ” ಎಂದು ರಾಹುಲ್ ಶನಿವಾರ ಟ್ವೀಟ್ ಮಾಡಿದ್ದಾರೆ.
“ಪ್ರಧಾನಿ ಮೌನವಾಗಿದ್ದಾರೆ. ಅವರು ಶರಣಾಗಿದ್ದಾರೆ ಮತ್ತು ರೋಗದ ವಿರುದ್ಧ ಹೋರಾಡಲು ನಿರಾಕರಿಸಿದ್ದಾರೆ” ಎಂದು ರಾಹುಲ್ ಟ್ವೀಟ್ನಲ್ಲಿ ಟೀಕಿಸಿದ್ದಾರೆ.
ಕೊರೋನಾಗೆ ಸಂಬಂಧಿಸಿದಂತೆ ಹಲವಾರು ದಿನಗಳಿಂದ ಐಸಿಎಂಆರ್ ಸಮಿತಿ ಮತ್ತು ಮಂತ್ರಿಗಳ ಗುಂಪು ಸಭೆ(GOM) ನಡೆದಿಲ್ಲ ಎಂದು ಮಾಧ್ಯಮ ವರದಿಯನ್ನು ರಾಹುಲ್ ಉಲ್ಲೇಖಿಸಿದ್ದರು. ಆರೋಗ್ಯ ಸಚಿವಾಲಯವು ಕೂಡ ಸಾಂಕ್ರಾಮಿಕ ರೋಗದ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.
ರಾಹುಲ್ ಟ್ವೀಟ್ ಮಾಡಿದ 3 ಗಂಟೆಗಳ ನಂತರ GOM ಸಭೆ ಪ್ರಾರಂಭ!
ಕೊರೋನಾಕ್ಕೆ ಸಂಬಂಧಿಸಿದಂತೆ ಜೂನ್ 9ರ ನಂತರ ಜಿಒಎಂ ಸಭೆ ನಡೆದಿಲ್ಲ ಎಂದು ರಾಹುಲ್ ಟ್ವೀಟ್ ಮಾಡಿದ್ದರು. ಆದರೆ, ಇದನ್ನು ಕಾಕತಾಳೀಯ ಅಥವಾ ರಾಹುಲ್ ಅವರ ಮಾತುಕತೆಯ ಪರಿಣಾಮ ಎಂದು ಕರೆಯಿರಿ, ಅವರ ಟ್ವೀಟ್ ಮಾಡಿದ 3 ಗಂಟೆಗಳ ನಂತರ, ದೆಹಲಿಯಲ್ಲಿ GOM ಸಭೆ ನಡೆಯುತ್ತಿದೆ ಎಂಬ ಸುದ್ದಿ ವರದಿಯಾಯ್ತು.
Delhi: Group of Ministers (GoM) meeting under the chairmanship of Union Health Minister Dr Harsh Vardhan on #COVID19, is underway, through video conferencing. External Affairs Minister S Jaishankar & Union Civil Aviation Minister Hardeep Singh Puri also present. pic.twitter.com/ALDHm91Hjo
— ANI (@ANI) June 27, 2020
6 ದಿನಗಳಲ್ಲಿ 1 ಲಕ್ಷ ಕೊರೋನಾ ಪ್ರಕರಣಗಳು!
ದೇಶದ ಕೊರೋನಾ ರೋಗಿಗಳ ಸಂಖ್ಯೆ ಶುಕ್ರವಾರ 5 ಲಕ್ಷ ದಾಟಿದೆ. ಕೇವಲ 6 ದಿನಗಳಲ್ಲಿ, ಕೊರೋನಾ ರೋಗಿಗಳ ಸಂಖ್ಯೆ 4 ಲಕ್ಷದಿಂದ 5 ಲಕ್ಷಕ್ಕೆ ಏರಿಕೆಯಾಗಿದೆ. ಜೂನ್ 20 ರಂದು, ಸೋಂಕಿತರ ಸಂಖ್ಯೆ 4 ಲಕ್ಷಕ್ಕೂ ಹೆಚ್ಚು ತಲುಪಿದೆ. ಕೊರೋನದ ಮೊದಲ ಪ್ರಕರಣವು ಜನವರಿ 30 ರಂದು ದೇಶದಲ್ಲಿ ವರದಿಯಾಗಿತ್ತು. 110 ದಿನಗಳ ನಂತರ, ಮೇ 10 ರಂದು ಈ ಸಂಖ್ಯೆ ಒಂದು ಲಕ್ಷಕ್ಕೆ ಏರಿತ್ತು.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












