ಸನ್ಮಾರ್ಗ ವಾರ್ತೆ
ಹೈದರಾಬಾದ್,ಜೂ.27: ಕೊರೋನಕ್ಕೆ ಬಲಿಯಾದ ವಯೋವೃದ್ಧನ ಮೃತದೇಹವವನ್ನು ಶ್ಮಶಾನಕ್ಕೆ ಜೆಸಿಬಿಯಲ್ಲಿ ಹಾಕಿ ಕೊಂಡು ಹೋದ ಅಮಾನವೀಯ ಘಟನೆ ಶ್ರೀಕುಲಂ ಜಿಲ್ಲೆಯ ಉದಯಪುರಂ ಪಲಾಸ ಮುನ್ಸಿಪಾಲಿಟಿಯಲ್ಲಿ ನಡೆದಿದ್ದು ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. ಜೆಸಿಬಿಯಲ್ಲಿ ಮೃತದೇಹ ಕೊಂಡು ಹೋಗುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಕೊರೋನದಿಂದ 72 ವರ್ಷದ ವ್ಯಕ್ತಿ ಮೃತಪಟ್ಟಿದ್ದರು. ಪಿಪಿಇ ಕಿಟ್ ಹಾಕಿಕೊಂಡು ಮುನ್ಸಿಪಾಲಿಟಿ ಅಧಿಕಾರಿಗಳು ಜೆಸಿಬಿಯಲ್ಲಿ ಕೊಂಡು ಹೋಗಿದ್ದರು. ದೈಹಿಕ ಅಸ್ವಾಸ್ಥ್ಯದ ನಂತರ ವೃದ್ಧರು ಗುರುವಾರ ಮೃತಪಟ್ಟಿದ್ದರು. ಇವರು ಶುಚೀಕರಣ ಕಾರ್ಮಿಕರು ಆಗಿದ್ದರು. ಪರೀಕ್ಷೆ ಮಾಡಿದಾಗ ಕೊರೋನ ಪಾಸಿಟಿವ್ ಎಂದು ಪತ್ತೆಯಾಗಿತ್ತು. ಇದರಿಂದ ಕಂಗೆಟ್ಟ ಕುಟುಂಬದವರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಮೃತದೇಹವನ್ನು ಕೊಂಡು ಹೋಗಲು ಹೇಳಿದ್ದಾರೆ.ಆದರೆ, ಮುನ್ಸಿಪಾಲಿಟಿ ಅಧಿಕಾರಿಗಳ ವರ್ತನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ನಂತರ ಇದಕ್ಕೆ ಕಾರಣಕರ್ತರಾದ ಅಧಿಕಾರಿಗಳನ್ನು ಅಮಾನತು ಮಾಡಲು ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಸೂಚಿಸಿದ್ದು, ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಇದೇ ಜಿಲ್ಲೆಯಲ್ಲಿ ಸೋಂಪೆಟ್ ಡಿವಿಷನ್‍ನಲ್ಲಿ ಕೊರೋನ ಪೀಡಿತನಾಗಿ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಟ್ರಾಕ್ಟರಿನಲ್ಲಿ ಕೊಂಡು ಹೋದ ಘಟನೆಯೂ ನಡೆದಿತ್ತು.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












