ಸನ್ಮಾರ್ಗ ವಾರ್ತೆ
ಲಕ್ನೊ,ಅ.16: ಕಡುಬಡತನದ ಕಾರಣದಿಂದ ಆರು ವರ್ಷದ ಪುತ್ರಿಯನ್ನು ಕೊಲೆ ಮಾಡಿದ ತಾಯಿಯನ್ನು ಬಂಧಿಸಲಾಗಿದೆ. ಉಷಾ ದೇವಿ ಎಂಬ ಮಹಿಳೆ ತನ್ನ ಪುಟ್ಟ ಮಗಳನ್ನು ಹಸಿವಿನ ಕಾರಣದಿಂದ ಕೊಲೆ ಮಾಡಿದ್ದು ಘಟನೆ ಉತ್ತರ ಪ್ರದೇಶದ ಬೋಸ್ಕಿ ಗ್ರಾಮದಲ್ಲಿ ನಡೆದಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮಗಳ ಭವಿಷ್ಯವನ್ನು ನೆನೆದ ಆತಂಕಗೊಂಡು ಕೊಲೆ ಮಾಡಿದೆ ಎಂದು ಮಹಿಳೆ ತಿಳಿಸಿದ್ದು ಮಹಿಳೆಗೆ ಇನ್ನಿಬ್ಬರು ಗಂಡು ಮಕ್ಕಳಿದ್ದಾರೆ. ಉಷಾದೇವಿಯ ಗಂಡ ಅಪಘಾತವೊಂದರಲ್ಲಿ ಗಾಯಗೊಂಡು ಕೆಲಸ ಮಾಡದ ಸ್ಥಿತಿಯಲ್ಲಿದ್ದಾರೆ. ಬಡತನ ಇವರನ್ನು ಕಾಡುತ್ತಿದ್ದು ಬಡವಳಾದ ತಾನು ಹೇಗೆ ಮಗಳನ್ನು ಮುಂದೆ ಮದುವೆ ಕೊಡಬಲ್ಲೆ. ಅದಕ್ಕೆ ಎಲ್ಲಿಂದ ಹಣ ತರುವುದು ಎಂದು ಮಹಿಳೆ ಹೇಳಿದರೆಂದು ಹಾಂಡಿಯ ಪೊಲೀಸರು ತಿಳಿಸಿದ್ದಾರೆ.
ಪತಿಗೆ ಕೆಲಸ ಮಾಡಲು ಸಾಧ್ಯವಾಗದ್ದರಿಂದ ಐದು ಮಂದಿ ಕುಟುಂಬ ಹೊಣೆಯನ್ನು ಉಷಾ ದೇವಿ ಹೊರಬೇಕಾಯಿತು. ಮನೆಮಂದಿಗೆ ಊಟವನ್ನು ಕೊಡುವುದಕ್ಕೆ ಮಹಿಳೆ ಕಷ್ಟಪಡುತ್ತಿದ್ದರು. ಉಷಾದೇವಿಗೆ ಮಾನಸಿಕ ಅಸ್ವಾಸ್ಥ್ಯ ಕೂಡ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.












