ಸನ್ಮಾರ್ಗ ವಾರ್ತೆ
ಕಾಠ್ಮಂಡು,ನ.24: ನನಗೆ ಏನಾದರೂ ಸಂಭವಿಸಿದರೆ ಅದಕ್ಕೆ ಚೀನ ಜವಾಬ್ದಾರಿಯಾಗಲಿದೆ ಎಂದು ನೇಪಾಳದ ಪ್ರತಿಪಕ್ಷ ನಾಯಕ ಜೀವನ್ ಬಹಾದೂರ್ ಶಾಹಿ ಹೇಳಿದರು. ಹುಂಲದ ನೇಪಾಳ ಜಮೀನನ್ನು ಚೀನ ಅತಿಕ್ರಮಿಸಿದೆ ಎಂಬ ವಿವರವನ್ನು ಹೊರ ಜಗತ್ತಿಗೆ ತಿಳಿಸಿದ್ದರಿಂದ ತನಗೆ ಜೀವ ಬೆದರಿಕೆಯಿಂದೆ ಎಂದು ಅವರು ತಿಳಿಸಿದರು.
ಜೀವನ್ ಬಹಾದೂರ್ ನೇಪಾಳ ಕಾಂಗ್ರೆಸ್ ಪಾರ್ಲಿಮೆಂಟ್ ಪಾರ್ಟಿ ನಾಯಕರಾಗಿದ್ದು ಹುಂಲದ ನೇಪಾಳದ ಭೂಪ್ರದೇಶವನ್ನು ಚೀನ ಅತಿಕ್ರಮಿಸಿ ನಿರ್ಮಾಣ ಕಾಮಗಾರಿ ನಡೆಸುತ್ತಿದೆ ಎಂದು ಇತ್ತೀಚೆಗೆ ಹೇಳಿದ್ದು ಅವರು ಕನಾಲು ಪ್ರದೇಶದ ಪ್ರತಿಪಕ್ಷ ನಾಯಕರೂ ಆಗಿದ್ದಾರೆ.
ಆದರೆ, ಕೆಪಿ ಶರ್ಮ ಒಲಿ ಸರಕಾರ ಅವರ ವಾದವನ್ನು ತಳ್ಳಿಹಾಕಿದೆ. ಅತಿಕ್ರಮಣದ ಕುರಿತು ನಮಗೂ ತಿಳಿದಿಲ್ಲ ಎಂದು ಸರಕಾರಿ ಅಧಿಕಾರಿಗಳೂ ತಿಳಿಸಿದ್ದಾರೆ. ಆದರೆ ಚೀನದ ಅತಿಕ್ರಮಣದ ಕುರಿತು ಜೀವನ್ ಬಹಾದ್ದೂರ್ ಶಾಹಿ ಸರಕಾರಕ್ಕೆ ವರದಿ ಸಲ್ಲಿಸಿದ್ದರು. ಚೀನ ಇದನ್ನು ವಿರೋಧಿಸಿದೆ.












