ಸನ್ಮಾರ್ಗ ವಾರ್ತೆ
ಕಾಶ್ಮೀರ,ಡಿ.7: ಗಡಿ ದಾಟಿ ಇಬ್ಬರು ಪಾಕಿಸ್ತಾನಿ ಹೆಣ್ಣುಮಕ್ಕಳು ಭಾರತಕ್ಕೆ ಬಂದಿದ್ದು 17 ವರ್ಷದ ಲೈಬಾ ಸಬೈರ್, ಸಹೋದರಿ 13 ವರ್ಷದ ಸನಾ ಸಬೈರ್ ಪಾಕ್ ಆಕ್ರಮಿತ ಕಾಶ್ಮೀರದ ಗಡಿದಾಟಿದವರು. ಫೂಂಚ್ನಲ್ಲಿ ಘಟನೆ ನಡೆದಿದ್ದು ಅಬ್ಬಾಸ್ಪುರದ ನಿವಾಸಿಗಳಾಗಿದ್ದಾರೆ.
ರವಿವಾರ ಬೆಳಗ್ಗೆ ಘಟನೆ ನಡೆದಿದೆ. ಹೆಣ್ಣುಮಕ್ಕಳು ಗಡಿ ದಾಟಿದ್ದು ಇಲ್ಲಿ ಕರ್ತವ್ಯದಲ್ಲಿದ್ದ ಸೈನಿಕರು ಗಮನಿಸಿದ್ದಾರೆ. ಅವರನ್ನು ತಡೆದು ವಿಷಯ ಕೇಳಿದಾಗ ಗಡಿ ದಾಟಿದ್ದು ಗೊತ್ತಾಗಿಲ್ಲ ಎಂದು ಹೇಳಿದ್ದಾರೆ ಎಂದು ಸೇನೆಯ ವಕ್ತಾರ ತಿಳಿಸಿದರು. ಇವರನ್ನು ಸುರಕ್ಷಿತವಾಗಿ ಮರಳಿ ಕಳುಹಿಸುವ ಕ್ರಮಗಳಿಗೆ ಚಾಲನೆ ನೀಡಲಾಗಿದೆ.
ಈ ನಡುವೆ, ಪೂಂಛ್, ಕಠ್ವಾ ಜಿಲ್ಲೆಯ ಗಡಿಯಲ್ಲಿ ಸೈನಿಕ ಪೋಸ್ಟ್ಗಳ ಮೇಲೆ ರವಿವಾರವೂ ಪಾಕಿಸ್ತಾನದ ಸೆಲ್ ದಾಳಿ ನಡೆದಿದೆ. ರವಿವಾರ ಮಧ್ಯಾಹ್ನ 12:30ಕ್ಕೆ ದಾಳಿ ನಡೆಯಿತು. ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸುತ್ತಿದೆ ಎಂದು ಸೇನೆಯ ವಕ್ತಾರ ತಿಳಿಸಿದ್ದಾರೆ. ಶನಿವಾರ ರಾತ್ರೆ 10:15ಕ್ಕೆ ಗುಂಡು ಹಾರಾಟ ನಡೆದಿದೆ. ಪೂಂಚ್ ಜಿಲ್ಲೆಯ ಬಾಲಕೋಟ್, ಕಠ್ವಾದ ಹಿರಾನಗರದಲ್ಲಿ ಘಟನೆ ನಡೆದಿದೆ.












