ಟೈಮ್ಸ್ ನೌ ಆ್ಯಂಕರ್ ವಿರುದ್ಧ ಕೇಸು ದಾಖಲಿಸಿದ ರಿಪಬ್ಲಿಕ್ ಟಿವಿ

0
694

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಟೈಮ್ಸ್ ನೌ ಆ್ಯಂಕರ್ ನವಿಕಾ ಕುಮಾರಿಯ ವಿರುದ್ಧ ರಿಪಬ್ಲಿಕ್ ಟಿವಿ ಮಾನನಷ್ಟ ಮೊಕದ್ದಮೆ ಹೂಡಿದೆ.

ಅರ್ನಾಬ್ ಗೋಸ್ವಾಮಿಯ ವಾಟ್ಸಪ್ ಚ್ಯಾಟ್‍ಗಳು ಹೊರಬಂದ ಹಿನ್ನೆಲೆಯಲ್ಲಿ ಚಾನೆಲ್ ಚರ್ಚೆಯಲ್ಲಿ ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ರಿಪಬ್ಲಿಕ್ ಮಾತೃ ಕಂಪೆನಿಯಾದ ಎ ಆರ್ ಜಿ ಔಟ್‍ಲಿಯರ್ ಮೀಡಿಯಾ ದಿಲ್ಲಿ ಕೋರ್ಟಿನಲ್ಲಿ ದೂರು ನೀಡಿದೆ.

ಅರ್ನಾಬ್ ವಿರುದ್ಧ ಟಿಆರ್ ಪಿ ವಂಚನೆ ಪ್ರಕರಣದಲ್ಲಿ ಮುಂಬೈ ಪೊಲೀಸರು ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಅರ್ನಾಬ್‍ನ ವಾಟ್ಸಪ್ ಚಾಟ್‍ಗಳ ವಿವರಗಳು ಇದ್ದವು. ಪುಲ್ವಾಮಾ ದಾಳಿಯ ಘಟನೆಯ ಕುರಿತ ಅರ್ನಾಬ್‍ರ ವಿವಾದ ಹೇಳಿಕೆಗಳು ಬಹಿರಂಗವಾಗಿದ್ದು, ವ್ಯಾಪಕ ಚರ್ಚೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಟೈಮ್ಸ್ ನೌ ಚಾನೆಲ್ ಚರ್ಚೆ ನಡೆಸಿತ್ತು.

ಅರ್ನಾಬ್ ಅಧಿಕೃತ ರಹಸ್ಯಗಳನ್ನು ಸೋರಿಕೆ ಮಾಡಿ ದೇಶದ ಸುರಕ್ಷೆಯನ್ನು ಅಪಾಯಕ್ಕೀಡು ಮಾಡಿದ್ದಾರೆ ಎಂದು ಚರ್ಚೆಯ ವೇಳೆ ನವಿಕಾ ಕುಮಾರಿ ಹೇಳಿದ್ದಾರೆ ಎಂದು ದೂರಿನಲ್ಲಿ ರಿಪಬ್ಲಿಕ್ ಟಿವಿ ಹೇಳಿದೆ.

ಇದು ನಿರಾಧಾರವಾಗಿದ್ದು, ನವಿಕಾ ಕುಮಾರಿ ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯ ಇಲ್ಲ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಜರಗಿಸಬೇಕೆಂದು ದಿಲ್ಲಿ ಕೋರ್ಟಿನಲ್ಲಿ ಸಲ್ಲಿಸಿದ ದೂರಿನಲ್ಲಿ ರಿಪಬ್ಲಿಕ್ ಟಿವಿ ಯವರು ತಿಳಿಸಿದ್ದಾರೆ.