13ನೇ ದಿನವೂ ಗ್ರಾಹಕರಿಗೆ ಶಾಕ್: ಪೆಟ್ರೋಲ್, ಡಿಸೇಲ್ ದರ ಹೆಚ್ಚಳ

0
479

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ತೈಲ ಕಂಪೆನಿಗಳು ಇಂಧನ ಬೆಲೆ ಹೆಚ್ಚಿಸುವ ಕಾರ್ಯವನ್ನು ಮುಂದುವರೆಸಿದ್ದು, 13ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆವಾಗಿದೆ. ಪೆಟ್ರೋಲ್‍ ಹಾಗೂ ಡೀಸೆಲ್‍ಗೆ ಇಂದು 39 ಪೈಸೆ ಹೆಚ್ಚಳವಾಗಿದ್ದು ಪೆಟ್ರೋಲ್ ದರ 90 ರೂಪಾಯಿಯನ್ನು ದಾಟಿದೆ.

ಪೆಟ್ರೋಲ್ ಬೆಲೆ 92.46 ರೂಪಾಯಿ ಹಾಗೂ ಡೀಸೆಲ್ ಬೆಲೆ 86.99 ರೂಪಾಯಿಯಾಗಿದೆ. ಇದೇ ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದರ ಇಳಿಕೆಯಾಗಿದೆ. ಕಚ್ಚಾ ತೈಲ ಬ್ಯಾರ್‍ಲಗೆ 1.02 ಡಾಲರ್ ಕಡಿಮೆಯಾಗಿ 62.91 ಡಾಲರ್‍ಗೆ ಇಳಿಕೆಯಾಗಿದೆ. ಬ್ರೆಂಟ್ ಕ್ರೂಡ್ ಆಯಿಲ್‌ನ ದರ ಶೇ 1.60 ಕಡಿಮೆಯಾಗಿದೆ ಎಂಬುದಾಗಿ ವರದಿಯಾಗಿದೆ.