ಮೃತ ಸಿಆರ್‌ಪಿಎಫ್ ಯೋಧನ ಮನೆಯಲ್ಲಿ ಗುಂಡುಗಳು ಪತ್ತೆ

0
502

ಸನ್ಮಾರ್ಗ ವಾರ್ತೆ

ಅಂಚಲ್: ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಸಿಆರ್‌ಪಿಎಫ್ ಯೋಧರೊಬ್ಬರ ಮನೆಯಿಂದ ಗುಂಡುಗಳು ಮತ್ತು ಖಾಲಿ ಕೇಸ್‍ಗಳು ಪತ್ತೆಯಾಗಿದೆ. 2016ರಲ್ಲಿ ಕೇರಳದ ಅಗಸ್ತ್ಯಕ್ಕೊಡ್ ಅಲುವಿಳ ಅಮಿತ್ ಎಂಬ ಯೋಧನ ಮನೆಯಿಂದ ಮೂರು ಗುಂಡುಗಳು ಮತ್ತು ಖಾಲಿ ಕೇಸ್‍ಗಳು ಸಲಭಿಸಿವೆ. ಅಮಿತ್‍ನ ಸಹೋದರ ಮನೆಯಲ್ಲಿ ಗುಂಡು ಇರುವುದನ್ನು ಪೊಲೀಸರಿಗೆ ತಿಳಿಸಿದ್ದಾರೆ. ಅಂಚಲ್ ಪೊಲೀಸರು ಹಾಗೂ ಕೊಲ್ಲಂನ ಆಯುಧ ಪರಿಶೀಲನೆ ತಜ್ಞರ ತಂಡ ಮನೆಗೆ ಬಂದು ಗುಂಡು ಮತ್ತು ಕೇಸನ್ನು ವಶಪಡಿಸಿಕೊಂಡಿದ್ದಾರೆ.

ಆಸ್ತಿ ಸಂಬಂಧಿಸಿದ ವಿವಾದವಿದ್ದುದ್ದರಿಂದ ಕುಟುಂಬದವರು ಮನೆಯನ್ನು ಬಂದ್ ಮಾಡಿ ಇಟ್ಟಿದ್ದರು. ಕುಟುಂಬ ಮನೆಯ ಸಿಟೌನ್‍ನಲ್ಲಿ ವಾಸವಿದ್ದ ಅಮಿತ್‍ನ ಹಿರಿಯ ಸಹೋದರ ಮತ್ತು ಪತ್ನಿ ಕಳೆದ ದಿನ ಬಾಗಿಲು ತೆರೆದು ಮೇಜು ಮತ್ತು ಇತರ ವಸ್ತುಗಳನ್ನು ಪರಿಶೀಲಿಸಿದಾಗ ಗುಂಡುಗಳು ಕಂಡು ಬಂದಿವೆ.

ಇದರ ನಂತರ ಅಮಿತ್ ತಾಯಿ ಮತ್ತು ಇನ್ನೊಬ್ಬ ಸಹೋದರನ್ನು ಪುನಲೂರಿನ ಮನೆಯಿಂದ ಅಂಚಲ್ ಪೊಲೀಸರು ಠಾಣೆಗೆ ಕರೆಯಿಸಿಕೊಂಡು ಹೇಳಿಕೆ ಪಡೆದುಕೊಂಡಿದ್ದಾರೆ. ಗುಂಡುಗಳು ಮನೆಯಲ್ಲಿರುವುದು ತಿಳಿಸಿದಿತ್ತಾದರೂ ಅದರ ಗಂಭೀರತೆಯ ಅರಿವಿರಲಿಲ್ಲ ಎಂದು ತಾಯಿ ಮತ್ತು ಸಹೋದರ ಹೇಳಿಕೆ ನೀಡಿದ್ದಾರೆ.

ಈ ಹಿಂದೆ ಕುಳತ್ತುಪುಯ ಎಂಬಲ್ಲಿ ರಸ್ತೆ ಬದಿಯಲ್ಲಿ 12 ಗುಂಡುಗಳು ಲಭಿಸಿದ್ದವು. ಈ ಘಟನೆಯನ್ನು ತನಿಖಿಸುವ ತಂಡವೇ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ.