ಇಸ್ರೇಲ್‌: 2 ವರ್ಷದಲ್ಲಿ ನಾಲ್ಕನೆಯ ಸಾರ್ವತ್ರಿಕ ಚುನಾವಣೆ; ಮಾ.31ಕ್ಕೆ ನೆತನ್ಯಾಹು ಭವಿಷ್ಯ ನಿರ್ಧಾರ

0
494

ಸನ್ಮಾರ್ಗ ವಾರ್ತೆ

ಜೆರುಸಲೇಂ: ಎರಡು ವರ್ಷಗಳಲ್ಲಿ ನಾಲ್ಕನೆಯ ಸಾರ್ವತ್ರಿಕ ಚುನಾವಣೆಯು ಮಂಗಳವಾರ ನಡೆದಿದ್ದು ಹನ್ನೆರಡು ವರ್ಷಗಳಿಂದ ಪ್ರಧಾನಿಯಾಗಿರುವ ಬೆಂಜಮಿನ್ ನೆತನ್ಯಾಹು(71) ಮುಂದುವರಿಕೆಯ ಕುರಿತು ಇಸ್ರೇಲಿಗರ ತೀರ್ಮಾನ ಬರಲಿದೆ. ಅರಬ್ ಜಗತ್ತಿನೊಂದಿಗೆ ರಾಜತಾಂತ್ರಿಕ ಸಂಬಂಧ ಮರುಸ್ಥಾಪಿಸಿದ ನೆತನ್ಯಾಹುರಿಗೆ ಫಲಿತಾಂಶ ಅನುಕೂಲಕರವಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.

ಕೊರೋನ ಪ್ರತಿರೋಧದಲ್ಲಿ ಯಶಸ್ಸು ಅವರಿಗೆ ಪ್ರಯೋಜನವಾಗಲಿದೆ. ಮಾಜಿ ವಿತ್ತ ಸಚಿವ ಯಯಿರ್ ಲಿಪಿದ್(57) ನೇತೃತ್ವದ ಯೇಶ್ ಅಟಿಡ್ ಪಾರ್ಟಿ ಎರಡನೇ ಸ್ಥಾನಕ್ಕೆ ಬರಲಿದೆ ಎನ್ನಲಾಗಿದ್ದು ನೆತನ್ಯಾಹು, ಪತ್ನಿ ಸಾರ ಜರುಸಲೇಂಇನ್ ಕಾಟಮೊನ್‍ನಲ್ಲಿ ಮತದಾನ ಮಾಡಿದರು. ತಮ್ಮ ಪಾರ್ಟಿಗೆ ಮತ ಹಾಕುವಂತೆ ಅವರು ಮತದಾರರಿಗೆ ಮನವಿ ಮಾಡಿದ್ದಾರೆ. ಮಾರ್ಚ್ 31ಕ್ಕೆ ಫಲಿತಾಂಶ ಪ್ರಕಟವಾಗಲಿದೆ.