ಉತ್ತರಪ್ರದೇಶದಲ್ಲಿ ಪುನಃ ಅಂಬೇಡ್ಕರ್ ಪ್ರತಿಮೆ ಹಾನಿ

0
628

ಸನ್ಮಾರ್ಗ ವಾರ್ತೆ

ಲಕ್ನೊ: ಉತ್ತರಪ್ರದೇಶದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಹಾನಿ ಮಾಡಲಾಗಿದ್ದು ಬಲಿಯ ಜಿಲ್ಲೆಯ ಕೊಟಿಯ ಗ್ರಾಮದಲ್ಲಿ ಘಟನೆ ನಡೆದಿದೆ. ನಂತರ ಪ್ರತಿಮೆಯನ್ನು ದುರಸ್ತಿಗೊಳಿಸಿ ಮರು ಪುನಃ ಸ್ಥಾಪಿಸಲಾಯಿತು.

ಸಮಾಜ ವಿರೋಧಿಗಳು ಪ್ರತಿಮೆಗೆ ಹಾನಿಮಾಡಿದ್ದಾರೆ. ಪ್ರತಿಮೆಯ ಕೈ ಕಣ್ಣು ಮುರಿದು ಹಾಕಿದ್ದರು. ಗ್ರಾಮಸ್ಥರೇ ಪ್ರತಿಮೆಗೆ ಹಾನಿ ಮಾಡಲಾದ ವಿವರವನ್ನು ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.

ಘಟನೆಯಲ್ಲಿ ಈವರೆಗೆ ಯಾರಿಂದಲೂ ದೂರು ಬಂದಿಲ್ಲ ಎಂದು ಹತ್ತಿರದ ಪೊಲೀಸ್ ಠಾಣೆ ಅಧಿಕಾರಿ ದಿನೇಶ್ ಚಂದ್ರ ತಿಳಿಸಿದರು. ಆದರೆ ಮುನ್ನೆಚ್ಚರಿಕೆಯಾಗಿ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಇಲ್ಲಿ ಈ ಹಿಂದೆಯೂ ಅಂಬೇಡ್ಕರ್ ಪ್ರತಿಮೆ ನಾಶಪಡಿಸಿದ ಘಟನೆ ನಡೆದಿತ್ತು.