ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಕೊರೋನ ಸಂಕಷ್ಟ ಅನುಭವಿಸುತ್ತಿರುವ ಮಕ್ಕಳನ್ನು ಸಂರಕ್ಷಿಸಲು ಕೇಂದ್ರ ಸರಕಾರ ಮಾರ್ಗ ಸೂಚಿಯನ್ನು ಹೊರ ತಂದಿದೆ. ಮಹಾಮಾರಿಯಿಂದ ತಂದೆ-ತಾಯಿಗಳಲ್ಲಿ ಒಬ್ಬರನ್ನು ಕಳಕೊಂಡ ಮಕ್ಕಳ ಸಂಖ್ಯೆ 9346 ಆಗಿದ್ದರೆ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳ ಸಂಖ್ಯೆಯು 1700 ಆಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಸಂರಕ್ಷಿಸುವುದಕ್ಕೆ ವಿಶೇಷ ಕ್ರಮವನ್ನು ಸರಕಾರ ನಿರ್ದೇಶಿಸಿದ್ದು ರಾಜ್ಯಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ಗಳು,ಪೊಲೀಸರು, ಪಂಚಾಯತ್ ರಾಜ್ ಸಂಸ್ಥೆಗಳ, ಕಾರ್ಪೊರೇಷನ್ ನಗರಸಭೆಗಳ ಹೊಣೆಗಾರಿಕೆಯಲ್ಲಿ ಸೂಕ್ತ ಕ್ರಮ ಜರಗಿಸಬೇಕೆಂದು ಕೇಂದ್ರ ಮಕ್ಕಳ ಮತ್ತು ಮಹಿಳೆಯರ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ರಾಮ್ ಮೋಹನ್ ಮಿಶ್ರ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಆದೇಶಪತ್ರ ಕಳುಹಿಸಿದ್ದಾರೆ.
1. ಕೊರೋನ ಸಂಕಷ್ಟ ಎದುರಿಸುತ್ತಿರುವ ಮಕ್ಕಳನ್ನು ಪತ್ತೆ ಮಾಡಿ ಟ್ರಾಕ್ ಚೈಲ್ಡ್ ಪೋರ್ಟಲ್ನಲ್ಲಿ ವಿವರಗಳನ್ನು ಅಪ್ಲೋಡ್ ಮಾಡಬೇಕು. ಆಯಾ ರಾಜ್ಯ ಸರಕಾರಗಳು ಈ ಕಾರ್ಯ ಮಾಡಬೇಕಿದೆ.
2. ಕೊರೋನ ಪೀಡಿತ ತಂದೆ-ತಾಯಿಗಳ ಮಕ್ಕಳ ಪೋಷಣೆಯನ್ನು ಹತ್ತಿರದ ಸಂಬಂಧಿಕರು ಇಲ್ಲದಿದ್ದರೆ ಮಕ್ಕಳ ಸಂರಕ್ಷಣಾ ಕೇಂದ್ರಕ್ಕೆ ಕಳುಹಿಸಬೇಕು.
3. ಆಸ್ಪತ್ರೆಗೆ ಬರುವ ರೋಗಿಗಳ ಮಕ್ಕಳ ಸಂರಕ್ಷಣೆಗೆ ಯಾರಿದ್ದಾರೆ ಎಂದು ವಿವರವನ್ನು ಬರೆಯಬೇಕು. ಏನಾದರೂ ಸಂಭವಿಸುವ ಮೊದಲು ಮುನ್ನೆಚ್ಚರಿಕೆ ವಹಿಸುವುದಕ್ಕಾಗಿದೆ.
4. ಕೊರೊಕನ ಸೋಂಕಿತ ಮಕ್ಕಳಿಗೆ ಶಿಶು ಕಲ್ಯಾಣ ಕೇಂದ್ರದಲ್ಲಿ ಪ್ರತ್ಯೇಕ ಸೌಕರ್ಯ ಒದಗಿಸಬೇಕಾಗಿದ್ದು ಅವರ ರಿಜಿಸ್ಟರ್ ತಯಾರಿಸಬೇಕು. ಮನಃಶಾಸ್ತ್ರಜ್ಞರು, ಕೌನ್ಸಲರ್ಗಳ ಸೇವೆಯನ್ನು ಪಡೆದುಕೊಳ್ಳಬೇಕು.
5. ಮಕ್ಕಳ ಮಾನಸಿಕ ನೋವನ್ನು ಕಡಿಮೆ ಮಾಡಲು ಸ್ಥಳೀಯ ಹೆಲ್ಪ್ಲೈನ್ ನಂಬರ್ ಮೂಲಕ ಮನಃಶಾಸ್ತ್ರಜ್ಞರ ಸೇವೆ ಒದಗಿಸಬೇಕು.
6. ಜಿಲ್ಲಾ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ವಿವಿಧ ಮಟ್ಟದಲ್ಲಿ ಕೆಲಸಮಾಡುವ ತಂಡಗಳನ್ನು ರೂಪಿಸಬೇಕು.
7. ಮಕ್ಕಳ ಅಪಹರಣ, ಅನಧಿಕೃತ ದತ್ತು ಪಡೆಯುವುದು, ಬಾಲ್ಯವಿವಾಹ, ಬಾಲಕಾರ್ಮಿಕ ಇತ್ಯಾದಿ ಎಲ್ಲ ರೀತಿಯ ಕಾನೂನು ಉಲ್ಲಂಘನೆಯನ್ನು ತಡೆಯಲು ಕಠಿಣ ಕ್ರಮ ಜರಗಿಸಬೇಕು.
8. ಮಹಾಮಾರಿ ಅನಾಥರನ್ನಾಗಿಸಿರುವ ಎಲ್ಲ ಮಕ್ಕಳಿಗೂ ಸರಕಾರಿ ಶಾಲೆಯಲ್ಲಿ ಉಚಿತ ಶಿಕ್ಷಣ ದೃಢಪಡಿಸಬೇಕು. ಮಕ್ಕಳ ಪ್ರತ್ಯೇಕ ಅಗತ್ಯತೆ ಪರಿಗಣಿಸಿ ಅತ್ಯಂತ ಹತ್ತಿರದ ಖಾಸಗಿ ಶಾಲೆಯಲ್ಲಿ ಪ್ರವೇಶ ಕೊಡಿಸಬಹುದು. ಅರ್ಹ ಸ್ಕಾಲರ್ ಶಿಪ್ ಯೋಜನೆಗಳಿಗೂ ಇವರನ್ನು ಸೇರಿಸಬೇಕು.












