ಇಂಡೋನೇಷ್ಯಾ: ಕೋಡಂಗಿ ವೇಷ ಧರಿಸಿ ಕುರ್‌ಆನ್ ಬೋಧಿಸುವ ಅಧ್ಯಾಪಕ- ವಿಡಿಯೋ

0
8058

ಸನ್ಮಾರ್ಗ ವಾರ್ತೆ

ಜಕರ್ತಾ(ಇಂಡೋನೇಷ್ಯಾ): ಮಕ್ಕಳು ಹೆಚ್ಚಾಗಿ ಕಾರ್ಟೂನ್ ವೇಷಧಾರಿಗಳಿಗೆ ಆಕರ್ಷಿತರಾಗುವುದರಿಂದ ಬೋಧನಾ ವಿಧಾನವಾಗಿ ಕುರ್‌ಆನ್ ಅಧ್ಯಾಪಕರೋರ್ವರು ಕೋಡಂಗಿ ವೇಷತೊಟ್ಟು ಪಾಠ ಹೇಳುತ್ತಿರುವುದು ಸುದ್ದಿಯಾಗಿದೆ. ತನ್ನನ್ನು ಕಾಣುವಾಗ ಮಕ್ಕಳು ಕಲಿಯಲು ಉತ್ಸುಕರಾಗುತ್ತಾರೆ ಹಾಗೂ ಇತರ ಮಕ್ಕಳಿಗೆ ಹೋಲಿಸಿದರೆ ಅವರು ಪಾಠವನ್ನು ಬಹುಬೇಗನೆ ಬಾಯಿಪಾಠ ಮಾಡಿಕೊಳ್ಳುತ್ತಾರೆ. ತನ್ನ ಕೋಡಂಗಿ ಉಡುಪಿನ ಬೋಧನೆಯು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಯಹ್ಯಾ ಹೇಳುತ್ತಾರೆ.

ಗ್ರೇಟರ್ ಜಕಾರ್ತಾ ಮಹಾನಗರ ಪ್ರದೇಶದ ಮೂರನೇ ಅತಿದೊಡ್ಡ ನಗರವಾದ ತಂಗೇರಾಂಗ್‌ನಲ್ಲಿರುವ ತನ್ನ ಮನೆಯ ಸಮೀಪವಿರುವ ಅನಾಥಾಶ್ರಮದಲ್ಲಿ ಅವರು ಕುರ್‌ಆನ್ ‌ಅನ್ನು ಮಕ್ಕಳಿಗೆ ಕಲಿಸುತ್ತಾರೆ. ಅವರು ಕಳೆದ 13 ವರ್ಷಗಳಿಂದ ದಾರುಸ್ಸಲಾಮ್ ಅನ್-ನೂರ್ ಅನಾಥಾಶ್ರಮದಲ್ಲಿ ಕೆಲಸ ಮಾಡುತ್ತಿರುವ ಅವರು ಕುರ್‌ಆನ್ ಕಲಿಸುವಾಗ ಈ ವಿಶಿಷ್ಟ ವಿಧಾನವನ್ನು ಕಂಡುಹಿಡಿದರು.

“ನಾನು ಕೋಡಂಗಿ ವೇಷ ಧರಿಸಿ ಕುರ್‌ಆನ್‌ನ್ನು ಮಕ್ಕಳನ್ನು ರಂಜಿಸುವ ಮೂಲಕ ಕಲಿಸಲು ಪ್ರಾರಂಭಿಸಿ 11 ವರ್ಷಗಳಾಗಿವೆ” ಎಂದು 38 ವರ್ಷದ ಯಹ್ಯಾ ಹೇಳಿದರು. ಮಕ್ಕಳು ಅವರನ್ನು ಕುರ್‌ಆನ್ ಪ್ರೀಯ ಕೋಡಂಗಿ ಎಂದು ಕರೆಯುತ್ತಾರೆ.