ವೃದ್ಧ ವ್ಯಕ್ತಿಯ ಮೃತದೇಹವನ್ನು 3 ಕಿ.ಮೀ ಹೊತ್ತು ಸಾಗಿಸಿದ ಮಹಿಳಾ ಎಸ್ಸೈ: ವ್ಯಾಪಕ ಪ್ರಶಂಸೆ

0
359

ಸನ್ಮಾರ್ಗ ವಾರ್ತೆ

ಆಂಧ್ರಪ್ರದೇಶ: ಇಲ್ಲಿನ ಪ್ರಕಾಶಂ ಜಿಲ್ಲೆಯ ಹನ್ಮಂತುನಿಪೇಟ್‍ನಲ್ಲಿ ಜನರು ಮೃತದೇಹವನ್ನೆತ್ತಲು ಮುಂದೆ ಬಾರದ ಪರಿಣಾಮವಾಗಿ ಮಹಿಳಾ ಎಸ್ಸೈಯೊಬ್ಬರು ಅರುವತ್ತು ವರ್ಷದ ಹಿರಿಯ ವ್ಯಕ್ತಿಯ ಮೃತದೇಹವನ್ನು ಕಾನ್ಸ್ಟೇಬಲ್‌‌ಗಳ ಸಹಾಯದೊಂದಿಗೆ ಕಾಡಿನ ದಾರಿಯಲ್ಲಿ ಮೂರು ಕಿ.ಮೀವರೆಗೆ ಹೆಗಲಲ್ಲಿ ಹೊತ್ತು ಸಾಗಿಸಿದ ಘಟನೆ ನಡೆದಿದೆ.

ಕಾಡಿನಲ್ಲಿ ಮೃತದೇಹ ಸಿಕ್ಕಿದೆ ಎಂದು ಊರ ಮಂದಿ ಪೊಲೀಸರಿಗೆ ತಿಳಿಸಿದರು. ಆದರೆ ಮೃತದೇಹವನ್ನು ಹೊರಗೆ ತರಲು ಅವರು ಸಿದ್ಧರಿಲ್ಲ. ಮಹಿಳಾ ಎಸ್ಸೈ ಕೃಷ್ಣಾ ಪವಾನಿಯವರು ಧೈರ್ಯ ವಹಿಸಿ ಮೃತದೇಹವನ್ನು ಕಾಡಿನಿಂದ ಹೊರ ತಂದಿದ್ದಾರೆ. ಕಾನ್ಸ್ಟೇಬಲ್‍ಗಳು ಕೈಜೋಡಿಸಿದರು.

ಈ ಹಿಂದೆ ಶ್ರೀಕುಳಂ ಜಿಲ್ಲೆಯಲ್ಲಿ ಎಸ್ಸೈ ಶಿರಿಶ ಎಂಬ ಮಹಿಳಾ ಪೊಲೀಸಧಿಕಾರಿಣಿ ಇದೇ ರೀತಿಯಲ್ಲಿ ಮೃತಹದೇಹವನ್ನು ಹೊತ್ತು ತಂದು ಪ್ರಶಂಸೆಗೆ ಗುರಿಯಾಗಿದ್ದರು. ಎರಡು ಕಿಲೊಮೀಟರ್ ದೂರ ಅವರು ಮೃತದೇಹ ಹೊತ್ತು ನಡೆದು ಕೊಂಡು ಬಂದುದು ಸುದ್ದಿಯಾಗಿತ್ತು.