ವಂಚನೆ, ನ್ಯಾಯಾಂಗ ನಿಂದನೆ ಪ್ರಕರಣ: ರಷ್ಯದ ಪ್ರತಿಪಕ್ಷ ನಾಯಕನಿಗೆ 9 ವರ್ಷ ಜೈಲು

0
327

ಸನ್ಮಾರ್ಗ ವಾರ್ತೆ

ಮಾಸ್ಕೊ: ವಂಚನೆ, ಕೋರ್ಟ್ ನಿಂದೆ ಪ್ರಕರಣದಲ್ಲಿ ರಷ್ಯದ ಪ್ರತಿಪಕ್ಷ ನಾಯಕ ಅಲಕ್ಸಿ ನವಾಲ್‍ನಿಯವರಿಗೆ ರಷ್ಯದ ಕೋರ್ಟು 9 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಲಕ್ಸಿ, ಅಧ್ಯಕ್ಷ ವ್ಲಾದಿಮಿರ್ ಪುಟಿನ್‍ರ ಕಟು ಟೀಕಾಕಾರರಾಗಿದ್ದರು. ಸಾಧ್ಯವಿರುವಷ್ಟು ಕಾಲ ಇವರನ್ನು ಜೈಲಿನಲ್ಲಿಡುವುದು ಉದ್ದೇಶ ಇದೆಂದು ಹೇಳಲಾಗುತ್ತಿದೆ.

ನವಾಲ್‍ನಿಯವರಿಗೆ 1.2 ದಶಲಕ್ಷ ರೂಬಲ್ (ಸುಮಾರು 8.75 ಲಕ್ಷ ರೂಪಾಯಿ) ದಂಡವನ್ನೂ ವಿಧಿಸಲಾಗಿದೆ. ತೀರ್ಪಿನ ವಿರುದ್ಧ ನವಾಲ್ನಿ ಮೇಲ್ಕೋರ್ಟಿಗೆ ಮೇಲ್ಮನವಿ ಸಲ್ಲಿಸಬಹುದು. ಸ್ವಂತ ಪೌಂಡೇಶನ್ ಮಾಡಿ ಹಣ ಸಂಗ್ರಹಿಸಿದ್ದು ರಾಜಕೀಯ ಪ್ರೇರಿತ ಮತ್ತು ವಿಚಾರಣೆಯ ವೇಳೆ ನ್ಯಾಯಾಧೀಶರನ್ನು ಅಪಾನಿಸಿದ್ದು ನವಾಲ್‍ನಿಯವರ ಅಪರಾಧವಾಗಿದೆ. ಪ್ರಾಸಿಕ್ಯೂಶನ್ 13 ವರ್ಷ ಜೈಲು 1.2 ದಶಲಕ್ಷ ರೂಬಲ್ ದಂಡವನ್ನು ವಾದಿಸಿತ್ತು.