ದಿಲ್ಲಿ ಗಲಭೆ ಪ್ರಕರಣ: ವಿದ್ಯಾರ್ಥಿ ನಾಯಕ ಉಮರ್ ಖಾಲಿದ್‍‌ಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

0
320

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪೌರತ್ವ ಹೋರಾಟಕ್ಕೆ ನೇತೃತ್ವ ನೀಡಿದುದ್ದಕ್ಕಾಗಿ ದಿಲ್ಲಿ ಪೊಲೀಸರು ಗಲಭೆಗೆ ಸಂಚು ಆರೋಪದಲ್ಲಿ ಬಂಧಿಸಿ ಯುಎಪಿಎ ಕಾನೂನು ಹೇರಿದ ಜೆಎನ್‍ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್‍ರ ಜಾಮೀನ ಅರ್ಜಿಯನ್ನು ದಿಲ್ಲಿ ಕೋರ್ಟು ತಿರಸ್ಕರಿಸಿದೆ. ಮೂರು ಸಲ ತೀರ್ಪು ನೀಡುವುದನ್ನು ಮುಂದೂಡಿದ ಅಡಿಶನಲ್ ಶೆಷನ್ಸ್ ಜಡ್ಜ್ ಅಮಿತಾಭ್ ರಾವತ್ ಜಾಮೀನು ನಿರಾಕರಿಸಿದರು.

2020 ಸೆಪ್ಟಂಬರ್ 13ಕ್ಕೆ ಉಮರ್ ಖಾಲಿದ್ ಬಂಧಿಸಲ್ಪಟ್ಟಿದ್ದರು. ಮಹಾರಾಷ್ಟ್ರದ ಅಮರಾವತಿಯಲ್ಲಿ ಉಮರ್ ಖಾಲಿದ್ ನೀಡಿದ ಭಾಷಣದ ಹೆಸರಿನಲ್ಲಿ ಬಂಧಿಸಲಾಗಿತ್ತು. ಉಮರ್ ಖಾಲಿದ್ ಜಾಮೀನು ಅರ್ಜಿಯಲ್ಲಿ ಕಳೆದ ತಿಂಗಳು ವಾದ ಆಲಿಕೆ ಪೂರ್ತಿ ಯಾಗಿತ್ತು. ಈ ತಿಂಗಳು ಹದಿನಾಲ್ಕಕ್ಕೆ ತೀರ್ಪು ನೀಡಬೇಕಿತ್ತು. ಆದರೆ, ನಂತರ 21ಕ್ಕೆ ಮುಂದೂಡಲಾಯಿತು. ನಂತರ 23ಕ್ಕೆ ನಂತರ 24ಕ್ಕೆ ತೀರ್ಪು ಮುಂದೂಡಿದ್ದು ಇಂದು ಅವರಿಗೆ ಜಾಮೀನು ತಿರಸ್ಕರಿಸಿ ತೀರ್ಪು ಹೊರಬಂದಿದೆ.

ರಿಪಬ್ಲಿಕ್ ಟಿವಿ ನ್ಯೂಸ್‍ ಮತ್ತು ಚ್ಯಾನೆಲ್ 18 ಪ್ರಸಾರ ಮಾಡಿದ ವೀಡಿಯೊ ಕ್ಲಿಪ್ ಆಧಾರದಲ್ಲಿ ಉಮರ್ ಖಾಲಿದ್ ವಿರುದ್ಧ ಕೇಸು ದಾಖಲಿಸಿದ್ದೆಂದು ಖಾಲಿದ್‍ರ ವಕೀಲ ತೃದೀಪ್ ಪಯಸ್ ಕೋರ್ಟಿಗೆ ಮನವರಿಕೆ ಮಾಡಿದ್ದರು. ಇದೇ ಪ್ರಕರಣದಲ್ಲಿ ಪೌರತ್ವ ಹೋರಾಟ ನಾಯಕರಾದ ಮೀರಾನ್ ಹೈದರ್ ಮತ್ತು ಶರ್ಜಿಲ್ ಇಮಾಮ್‍ರ ಜಾಮೀನು ಅರ್ಜಿಯನ್ನು ಯಥಾ ಪ್ರಕಾರ ಈ ತಿಂಗಳು 25ಕ್ಕೆ ಮತ್ತು 26ಕ್ಕೆ ಮುಂದೂಡಲಾಗಿದೆ. ಪೌರತ್ವ ಹೋರಾಟಕ್ಕೆ ನೇತೃತ್ವ ನೀಡಿದುದಕ್ಕೆ ದಿಲ್ಲಿ ಗಲಭೆಯಲ್ಲಿ ಸಂಚು ಹೆಣೆದುದಕ್ಕೆ ಯುಎಪಿಎ ಹೇರಲಾಗಿದ್ದ ಮುಹಮ್ಮದ್ ಸಲೀಂ ಖಾನ್‍ರಿಗೂ ಜಡ್ಜ್ ಅಮಿತಾಭ್ ರಾವತ್ ಜಾಮೀನು ನಿರಾಕರಿಸಿದ್ದರು.