ಸೌದಿಯಲ್ಲಿ ವಿದೇಶಿಯರ ಲೆವಿ ಬಾಕಿ ಮನ್ನಾ ಕುರಿತ ಮನವಿ ಸ್ವೀಕಾರ ಆರಂಭ

0
707

ಸೌದಿ ಅರೇಬಿಯ: ವಿದೇಶಿಯರು ಲೆವಿ ಬಾಕಿ ಮನ್ನಾ ಕುರಿತ ಅರ್ಜಿ ಸ್ವೀಕಾರ ಪ್ರಕ್ರಿಯೆಯು ಆರಂಭವಾಗಿದ್ದು, ನಿನ್ನೆಯಿಂದ ಅರ್ಜಿ ಸ್ವೀಕಾರ ಆರಂಭವಾಗಿದೆ. ಸ್ವದೇಶೀಕರಣದ ನಿಬಂಧನೆಯಲ್ಲಿ ಪ್ಲಾಟಿನಂ, ಹಸಿರು ಕೆಟಗರಿಯ ಮೂರು ಲಕ್ಷ ಸಂಸ್ಥೆಗಳಿಗೆ ಮೊದಲ ಹಂತದ ಬಾಕಿ ಕಡಿತ ಮಾಡಲಾಗುವುದು.

ಸೌದಿಯ ಪ್ರಜೆಗಳೂ ನಿಗದಿತ ಸಂಖ್ಯೆಯ ಲೆವಿ ನೀಡಬೇಕು.

ಇದರಲ್ಲಿ ಬಾಕಿ ಇರುವ ಮೊತ್ತವನ್ನು ಪಾವತಿಸಲು ಕಾರ್ಮಿಕ ಸಚಿವಾಲಯ ಇನ್ವಾಯ್ಸ್ ನೀಡಿತ್ತು. ಈಗಾಗಲೇ ಬಾಕಿ ಪಾವತಿಸಿರುವವರಿಗೆ ಹಣವನ್ನು ಮರಳಿಸಲಾಗುತ್ತದೆ. ಪಾವತಿ ಬಾಕಿಯಿರುವವರ ಲೆವಿಯನ್ನು ಮನ್ನಾ ಮಾಡಲಾಗುವುದು.

ಸ್ವದೇಶೀಕರಣದ ನಿಬಂಧನೆ ಪಾಲಿಸಿದ ಪ್ಲಾಟಿನಂ, ಹಸಿರು ಕೆಟಗರಿ ಸಂಸ್ಥೆಗಳಿಗೆ ಮೊದಲು ವಿನಾಯಿತಿ ದೊರೆಯಲಿದೆ. 3,16,000 ಸಂಸ್ಥೆಗಳು ಈ ಸಾಲಿಗೆ ಸೇರಿವೆ. ಇವರಿಂದ ಅರ್ಜಿಗಳನ್ನು ಕಳೆದ ದಿವಸದಿಂದ ಸ್ವೀಕರಿಸಲಾಗುತ್ತಿದೆ. ಹಳದಿ, ಕೆಂಪು ಕೆಟಗರಿಯ ಕಂಪೆನಿಗಳು ಬಾಕಿ ಸಂದಾಯ ಮಾಡಿದ ಮೊತ್ತ ಮರಳಿ ಸಿಗುತ್ತದೆ. ಪಾವತಿಸದ ಲೆವಿಯನ್ನು ಕೈಬಿಡಲಾಗುವುದು. ಈ ಕುರಿತ ನಿಬಂಧನೆಯನ್ನು ಈ ಹಿಂದೆ ಸಚಿವಾಲಯ ವಿವರಿಸಿತ್ತು. ಕಾರ್ಮಿಕ ಸಚಿವಾಲಯ ಅರ್ಜಿ ಸಲ್ಲಿಸಬೇಕಾದ ರೀತಿ ವಿವರಿಸಿ ವೀಡಿಯೊ ಹೊರತಂದಿದೆ. ಕಾರ್ಮಿಕ ಸಚಿವಾಲಯದ ವೆಬ್‍ಸೈಟ್‍ನಲ್ಲಿ ವಿವರಗಳಿವೆ.