ಭಾರತ, ಸೌದಿ ನಡುವೆ 5 ಒಪ್ಪಂದಗಳಿಗೆ ಹಸ್ತಾಕ್ಷರ

0
815

ಹೊಸದಿಲ್ಲಿ: ಟೂರಿಸಂ, ವಸತಿ, ವಾರ್ತಾ ಪ್ರಸಾರ ಮೊದಲಾದ ಕ್ಷೇತ್ರದಲ್ಲಿ ಪರಸ್ಪರ ಸಹಕರಿಸಲು ಭಾರತ ಮತ್ತು ಸೌದಿ ಅರೇಬಿಯ ತೀರ್ಮಾನಿಸಿದೆ. ಒಟ್ಟು ಐದು ಒಪ್ಪಂದಗಳಿಗೆ ಎರಡು ದೇಶಗಳು ಸಹಿಹಾಕಿವೆ. ಪ್ರಧಾನಿ ನರೇಂದ್ರ ಮೋದಿ, ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಮಾಧ್ಯಮಗಳಿಗೆ ಜಂಟಿಯಾಗಿ ತಿಳಿಸಿದ್ದಾರೆ.

ಭಯೋತ್ಪಾದನೆ ಇಲ್ಲದಾಗಿಸಲು ಉಭಯ ದೇಶಗಳು ಪರಸ್ಪರ ಸಹಕರಿಸುವುದು ಅಗತ್ಯವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಯುವಕರನ್ನು ಭಯೋತ್ಪಾದನೆಗಳಿಂದ ದೂರವಿರಿಸುವುದು ಅಗತ್ಯವಾಗಿದೆ. ಈ ವಿಷಯದಲ್ಲಿ ಸೌದಿ ಮತುತ ಭಾರತಕ್ಕೆ ಒಂದೇ ಅಭಿಪ್ರಾಯವಿದೆ ಎಂದು ಮೋದಿ ಹೇಳಿದರು. ಭಯೋತ್ಪಾದನೆ ಎಷ್ಟು ಅಪಾಯಕಾರಿ ಎಂದು ಪುಲ್ವಾಮ ಭಯೋತ್ಪಾದನಾ ದಾಳಿ ತೋರಿಸಿಕೊಟ್ಟಿದೆ. ಭಯೋತ್ಪಾದನೆಯ ಮೂಲಭೂತ ಸೌಕರ್ಯಗಳನ್ನು ಇಲ್ಲದಂತೆ ಮಾಡುವುದು ಅಗತ್ಯವಿದೆ. ಭಯೋತ್ಪಾದನೆಗೆ ಉತ್ತೇಜನ ನೀಡುವವರನ್ನು ಒಂಟಿಗೊಳಿಸಬೇಕಾಗಿದೆ ಎಂದು ಮೋದಿ ಹೇಳಿದರು.

ಭಾರತದೊಂದಿಗಿನ ದೃಢ ಸಂಬಂಧದ ಹೊಸ ಅಧ್ಯಾಯ ಈ ಸಂದರ್ಶನ ಎಂದು ಮುಹಮ್ಮದ್ ಬಿನ್ ಸಲ್ಮಾನ್ ಹೇಳಿದರು. ಇತ್ತೀಚೆಗೆ ಅವರು ಪಾಕಿಸ್ತಾನಕ್ಕೂ ಭೇಟಿ ನೀಡಿದ್ದರು. ನಿನ್ನೆರಾತ್ರೆಯಷ್ಟೇ ದಿಲ್ಲಿಗೆ ಬಂದಿರುವ ಅವರನ್ನು ಪ್ರಧಾನಿ ಸ್ವಾಗತಿಸಿದ್ದಾರೆ.