ರಾಜಭವನದಲ್ಲಿ ಸರಕಾರದ ವಿರುದ್ಧ ರಾಜ್ಯಪಾಲರು ನಡೆಸಿದ ಪತ್ರಿಕಾಗೋಷ್ಠಿ ಅಸಾಮಾನ್ಯವಾದುದು: ಮುಖ್ಯಮಂತ್ರಿ ಪಿಣರಾಯಿ ವಿಜಯನ್

0
167

ಸನ್ಮಾರ್ಗ ವಾರ್ತೆ

ತಿರುವನಂತಪುರಂ: “ರಾಜಭವನದಲ್ಲಿ ಸರಕಾರದ ವಿರುದ್ಧ ರಾಜ್ಯಪಾಲರು ನಡೆಸಿದ ಪತ್ರಿಕಾಗೋಷ್ಠಿ ಅಸಾಮಾನ್ಯವಾದುದು” ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ರಾಜ್ಯಪಾಲರು ಒಪ್ಪದಿದ್ದರೆ ಸಂಪುಟಕ್ಕೆ ತಿಳಿಸಬಹುದು. ಬದಲಾಗಿ ಸಾರ್ವಜನಿಕ ನಿಲುವು ತಳೆಯುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

“ಸಚಿವ ಸಂಪುಟದ ಸಲಹೆಯಂತೆ ರಾಜ್ಯಪಾಲರು ನಡೆದುಕೊಳ್ಳಬೇಕು. ಈ ವಿಷಯವನ್ನು ನ್ಯಾಯಾಲಯ ಘೋಷಿಸಿದೆ. ಸರ್ಕಾರದೊಂದಿಗೆ ಸಂವಹನ ನಡೆಸಲು ರಾಜ್ಯಪಾಲರಿಗೆ ಹಲವು ಮಾರ್ಗಗಳಿವೆ. ಆದರೆ ಪತ್ರಿಕಾಗೋಷ್ಠಿ ನಡೆಸಿದ್ದು ಅಸಾಮಾನ್ಯವಾದುದು ಎಂದು ಸಿಎಂ ಹೇಳಿದರು. ಸಚಿವ ಸಂಪುಟದ ನಿರ್ಧಾರವನ್ನು ತಿರಸ್ಕರಿಸುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ ಆದರೆ ಪತ್ರಿಕಾಗೋಷ್ಟಿಯ ಮೂಲಕ ರಾಜ್ಯಪಾಲರು ಸಾರ್ವಜನಿಕ ನಿಲುವು ತಳೆದಿದ್ದು ಇದಕ್ಕೆ ಉತ್ತರ ನೀಡಬೇಕಿದೆ” ಎಂದರು.

ರಾಜ್ಯಪಾಲರು ಹಲವೆಡೆ ಕೇಂದ್ರದ ಏಜೆಂಟ್‌ನಂತೆ ವರ್ತಿಸುತ್ತಿದ್ದಾರೆ. ರಾಜ್ಯಪಾಲರು ಆರ್‌ಎಸ್‌ಎಸ್ ಅನ್ನು ಶ್ಲಾಘಿಸಿದರು. ಆರ್‌ಎಸ್‌ಎಸಿನ ಬೆಂಬಲಿಗ ಎಂದು ಹೇಳಿಕೊಂಡಿದ್ದಾರೆ. ಇದು ನಿಜವೇ ಎಂಬ ಕುರಿತು ರಾಜ್ಯಪಾಲರು ಸ್ಪಷ್ಟಪಡಿಸಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶ್ನಿಸಿದ್ದಾರೆ.