✍️ ಶಾಝಿಲ್ ಉಸ್ಮಾನ್
ಇಸ್ರೇಲಿನ ಪ್ರಮುಖ ಸ್ವಯಂ ಸೇವಾ ಸಂಘಟನೆಗಳಾದ ಬೆಲ್ಸಲೆಮ್ ಮತ್ತು ಫಿಸಿಶನ್ಸ್ ಪಾರ್ ಹ್ಯೂಮನ್ ರೈಟ್ಸ್ ಗಾಝದಲ್ಲಿ ನಡೆಯುತ್ತಿರುವುದು ಫೆಲಸ್ತೀನಿಯರ ವಂಶಹತ್ಯೆಯೇ ಆಗಿದೆ ಎಂದು ಬಹಿರಂಗವಾಗಿ ಘೋಷಿಸಿದೆ. 2023 ಅಕ್ಟೋಬರ್ ಏಳರ ಹಮಾಸ್ ದಾಳಿಯ ನಂತರ ಇಸ್ರೇಲ್ ಗಾಝದಲ್ಲಿ ಆರಂಭಿಸಿದ ಸರ್ವನಾಶ ಯುದ್ಧಕ್ಕೆ 21 ತಿಂಗಳಾಗಿವೆ. ಈಗ ಇಸ್ರೇಲಿನೊಳಗಿನಿಂದಲೇ ಇಸ್ರೇಲಿನ ಆಡಳಿತ ಕೂಟದ ವಿರುದ್ಧ ಪ್ರತಿಭಟನೆ ಪುಟಿದೆದ್ದಿದೆ.
ಮೇಲೆ ಸೂಚಿಸಿದ ಎರಡು ಸಂಘಟನೆಗಳು ಇಸ್ರೇಲ್ ಸರಕಾರವನ್ನು ಟೀಕಿಸುವುದು ಈ ಹಿಂದಿನಿಂದಲೂ ನಡೆಯುತ್ತಿರುತ್ತವೆ. ಆದರೆ ಸೋಮವಾರ ಅವರು ಬಿಡುಗಡೆಗೊಳಿಸಿದ ವರದಿಗಳು ಹಿಂದೆಂದೂ ಅದು ಬಳಸದ ಕಟು ಶಬ್ದಗಳಿಂದ ಕೂಡಿತ್ತು-
“ವಂಶಹತ್ಯೆ ನಡೆಸುವ ಒಂದು ಸಮುದಾಯದ ಭಾಗ ನೀವು ಆಗಿದ್ದೀರಿ ಎಂದು ಅರಿತುಕೊಳ್ಳ ಬೇಕಾಗಿದೆ” ಎಂದು ನೆನಪಿಸಿ ತಮ್ಮ ಅಗಾಧವಾದ ನೋವು ತುಂಬಿದ ಕ್ಷಣಗಳಿವು ಎಂದು ಈ ಸಂಘಟನೆಗಳು ಒಪ್ಪಿಕೊಂಡಿವೆ. ಗಾಝಾದ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸುವ ಲೆಕ್ಕದ ಪ್ರಕಾರ ಅರುವತ್ತು ಸಾವಿರದಷ್ಟು ಮಹಿಳೆಯರು ಮಕ್ಕಳು ಹಾಗೂ ಸಾಮಾನ್ಯ ಫೆಲಸ್ತೀನಿಗಳು ಇಸ್ರೇಲ್ ಆಕಾಶದಿಂದ ಬಾಂಬು ಸುರಿಸಿದುದರಿಂದ ಇಷ್ಟರಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಅದು ಈಗಲೂ ಯಾವುದೇ ಅಡಚಣೆಗಳಿಲ್ಲದೆ ಮುಂದುವರಿಯುತ್ತಿದೆ.
ಇದರ ಎರಡು ಪಟ್ಟು ಜನರು ಗಾಯಗೊಂಡಿದ್ದಾರೆ. ಹಸಿವಿನಿಂದ ಸಾವೀಗೀಡಾದವರೂ ಇದ್ದಾರೆ. ಇಡೀ ಜಗತ್ತೇ ಹೇಳುತ್ತಿರುವ ಅದೇ ವಿಚಾರವನ್ನು ಇಸ್ರೇಲಿನ ಈ ಎರಡು ಸಂಘಟನೆಗಳು ಹೇಳುತ್ತಿವೆ. ಸಾವಿರಾರು ಮಹಿಳೆಯರು, ಮಕ್ಕಳು, ವೃದ್ಧರು ಕಠಿಣ ಹಸಿವಿಗೆ ಬಿದ್ದಿದ್ದಾರೆ. ಗಡೀಪಾರು, ಮನೆಧ್ವಂಸ, ಮೂಲಭೂತ ಸೌಕರ್ಯಗಳ ನಾಶ ಇತ್ಯಾದಿ ಕ್ರೂರ ಕೃತ್ಯಗಳ ವಿಷದವಾದ ವಿವರಗಳು ಅವುಗಳ ವರದಿಯಲ್ಲಿವೆ.
ಒಂದು ವಿಭಾಗವನ್ನು ನಾಶಪಡಿಸುವ ಸ್ಪಷ್ಟ ಮತ್ತು ಪ್ರಜ್ಞಾಪೂರ್ವಕ ಪ್ರಯತ್ನ ಎಂದು ನಾವು ಇದನ್ನು ನೋಡುತ್ತೇವೆ ಎಂದು ಬೆನ್ಸಲೇಂ ನಿರ್ದೇಶಕ ಯುಲಿನೆವಾಕ್ ಹೇಳಿದರು.
ಈ ವಂಶ ಹತ್ಯೆ ವಿರುದ್ಧ ನಿಮ್ಮಿಂದ ಏನು ಮಾಡಲು ಸಾಧ್ಯ ಎಂದು ಪ್ರತಿಯೊಬ್ಬ ಮನುಷ್ಯ ಜೀವಿಗಳು ಸ್ವಯಂ ತಮ್ಮನ್ನೇ ಕೇಳುತ್ತಿದ್ದಾರೆ ಎಂದು ಯುಲಿನೆವಾಕ್ ಹೇಳಿದೆ. ವಂಶ ಹತ್ಯೆ ಬರೇ ಕಾನೂನಿಡಿಯ ಅಪರಾಧ ಮಾತ್ರವಲ್ಲ. ಅದೊಂದು ಸಾಮಾಜಿಕ, ರಾಜಕೀಯ ವಿದ್ಯಮಾನ ಆಗಿದೆ ಎಂದು ಇಸ್ರೇಲಿನ ಈ ಎರಡು ಸ್ವಯಂ ಸೇವಾ ಸಂಘಟನೆಗಳು ಘೋಷಿಸಿವೆ.
ನಾಝಿ ಜರ್ಮನಿಯ ಅತೀ ಕ್ರೂರಿ ಸರ್ವಾಧಿ ಕಾರಿ ಅಡಾಲ್ಫ್ ಹಿಟ್ಲರ್ ತನ್ನ ದೇಶದಲ್ಲಿ ಯಹೂದಿಯರ ವಂಶನಾಶ ಶುರುಮಾಡಿದಾಗ ಅಲ್ಲಿದ್ದ ಯಹೂದಿಯರು ಜಗತ್ತಿನ ನಾನಾ ದಿಕ್ಕುಗಳಿಗೆ ಓಡಿಹೋದರು. ಇವರನ್ನು ಒಂದು ಕಡೆ ಒಕ್ಕಲು ಕೂರಿಸುವುದಕ್ಕೆ ವಿಶ್ವಸಂಸ್ಥೇ 1948ರಲ್ಲಿ ಅರಬ್ ಜಗತ್ತಿನ ಭಾಗವಾಗಿದ್ದ ಫೆಲಸ್ತೀನಿನಲ್ಲಿ ಇಸ್ರೇಲ್ ಎಂಬ ಒಂದು ದೇಶವನ್ನು ಸ್ಥಾಪಿಸಿದ್ದು ಎಲ್ಲರಿಗೂ ಗೊತ್ತಿದೆ.
ಆ ದೇಶದಲ್ಲಿದ್ದ ಅರಬರನ್ನು ಅಂದರೆ ಅಲ್ಲಿ ವಾಸಿಸುತ್ತಿದ್ದ ಜನತೆಯನ್ನು ಹೊರದಬ್ಬಿ ಇಸ್ರೇಲ್ ದೇಶವನ್ನು ಅಂದಿನ ಬೃಹತ್ಶಕ್ತಿಗಳಾದ ಬ್ರಿಟನ್ ಫ್ರಾನ್ಸ್ ಅಮೆರಿಕಗಳ ಬಲದಲ್ಲಿ ಸ್ಥಾಪನೆ ಮಾಡಿದ್ದು. ನಂತರ 1967ರಲ್ಲಿ ಫೆಲಸ್ತೀನಿನ ಜನರು ಹುಟ್ಟಿದೂರಿನ ವಿವಿಧ ಭಾಗಗಳನ್ನು ಜೆರುಸಲೇಂ ಸಹಿತ ಆಯುಧಾಸ್ತ್ರ ಆಕ್ರಮಣ ನಡೆಸಿ ವಶಪಡಿಸಿಕೊಂಡು ಝಿಯೊನಿಸ್ಟ್ ದೇಶಕ್ಕೆ ಸೇರಿಸಿದ್ದು ಆಧುನಿಕ ಇತಿಹಾಸದಲ್ಲಿ ವ್ಯಕ್ತಗೊಂಡಿದೆ.
ಇಪ್ಪತ್ತು ಲಕ್ಷಕ್ಕೂ ಹೆಚ್ಚು ಫೆಲಸ್ತೀನಿಯರು ಗಾಝದಲ್ಲಿ ಜೀವಿಸುತ್ತಿದ್ದಾರೆ. ಇವರನ್ನು ದಿನನಿತ್ಯ ಝಿಯೊನಿಸ್ಟ್ ದೇಶ ಆಕ್ರಮಿಸುತ್ತಿರುವುದು ಖಂಡನೀಯವಾಗಿದೆ. ಅಲ್ಲಿ ನಡೆಯುತ್ತಿರುವುದು ವಂಶಹತ್ಯೆ ಎಂದು ಬೃಹತ್ ಶಕ್ತಿಗಳಾದ ಅಮೆರಿಕ ಮತ್ತು ಅದರ ಮಿತ್ರ ದೇಶಗಳು ಒಪ್ಪಿಕೊಳ್ಳುವುದಿಲ್ಲ. ಇಂತಹ ಪರಿಸ್ಥಿತಿಯಿಂದಾಗಿ ಹಮಾಸ್ 2023 ಅಕ್ಟೋಬರ್ ಏಳಕ್ಕೆ ಇಸ್ರೇಲಿನ ಮೇಲೆ ದಾಳಿ ಮಾಡಿತು. ಇದು ಖಂಡಿಸಬೇಕಾದ್ದೆ ಎಂದು ಒಪ್ಪಿಕೊಂಡೇ ಗಾಝದಲ್ಲಿ ಲಕ್ಷಾಂತರ ಮಹಿಳೆ ಮಕ್ಕಳು ಸಾಮಾನ್ಯ ಜನರನ್ನು ಸಾಮೂಹಿಕವಾಗಿ ಹಸಿವಿಗೆ ತಳ್ಳಿ ನಿರ್ನಾಮ ಮಾಡುತ್ತಿರುವುದನ್ನು ಒಪ್ಪಿಕೊಳ್ಳಲು ಅಮೆರಿಕಕ್ಕೂ ಅದರ ಸಂಗಡಿಗರಿಗೂ ಸಾಧ್ಯವಾಗಿಲ್ಲ ಯಾಕೆ. ಈಗ ಇಸ್ರೇಲಿನದ್ದೇ ಮಾನವ ಹಕ್ಕು ಸಂಘಟನೆಗಳು ಜಗತ್ತನ್ನು ಪ್ರಶ್ನಿಸುತ್ತಿವೆ.
ಯುದ್ಧವಿರಾಮ ಚರ್ಚೆಗಳು ಹೆಸರಿಟ್ಟು ವಿಳಂಬ ಮಾಡುವುದೆಲ್ಲ ಫೆಲಸ್ತೀನಿಯರನ್ನು ಮನೆಯಿಂದ ಹೊರದಬ್ಬುವುದು ವಂಶನಾಶದ ನಡೆಸುವುದು ಇವಕ್ಕೆಲ್ಲ ಸಮಯ ಮಾಡಿಕೊಡುವ ಎಂದು ಸಂದೇಹವನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ. ಬ್ರಿಟನ್, ಫ್ರಾನ್ಸ್, ಕೆನಡ, ಆಸ್ಟ್ರೇಲಿಯಾ ಸಹಿತ ವಿಶ್ವಸಂಸ್ಥೆ ಸದಸ್ಯ ದೇಶಗಳು ಯುದ್ಧ ನಿಲ್ಲಿಸಲು ಹೇಳಿಯೂ ಡೊನಾಲ್ಡ್ ಟ್ರಂಪ್ ಕಣ್ಣಿನಲ್ಲಿ ಒಂದಿಷ್ಟು ಕರುಣೆ ಇಲ್ಲ. ಇಸ್ರೇಲಿನ ಎನ್ಜಿಒಗಳು ಹೇಳಿದಂತೆ ಈ ವಂಶನಾಶ ಕೊನೆಗೊಳಿಸು ವುದರಲ್ಲಿ ಅಮೆರಿಕ ಮತ್ತು ಸಂಗಡಿರಗರ ನೈತಿಕ, ಕಾನೂನಾತ್ಮಕ ಹೊಣೆಗಾರಿಕೆ ಖಂಡಿತ ಇದೆ.
ಗಾಝದಲ್ಲಿ ಹಸಿವಿನಿಂದ ಸಾಯುತ್ತಿರುವ ಸಾವಿರಾರು ಮಕ್ಕಳಿಗೆ ಮನುಷ್ಯರಿಗೆ ಆಹಾರ ವಸ್ತು ತಲುಪಿಸಲು ಬಿಡುತ್ತೇವೆಂದ ಅದೇ ಇಸ್ರೇಲು ಮಾತು ಪಾಲಿಸುತ್ತಿಲ್ಲ ಎಂದು ಟ್ರಂಪ್ ದೂರುತ್ತಿದ್ದಾರೆ. ಅವರ ಈ ಕಕ್ಕುಲತೆ ಪ್ರಾಮಾಣಿಕ ಆಗಿದ್ದರೆ ನೆತನ್ಯಾಹುರ ಮೇಲೆ ಈ ವಿಷಯದಲ್ಲಿಯೂ ಒತ್ತಡ ಹಾಕಬಹುದಿತ್ತು. ಆದರೆ ಹಿಟ್ಲರ್ ಹೊಸ ಅವತಾರಗಳಿಗೆ ನ್ಯಾಯ ಮಾನವೀಯತೆಯ ಉಪದೇಶ ನೀಡುವುದು ವ್ಯರ್ಥ ಎಂದು ನೀವು ಹೇಳಬಹುದು.












