✍️ ಡಾ. ಸಿಮಿ ಕೆ.ಕೆ.
ವ್ಯಾಪಾರ-ಹೂಡಿಕೆಯಲ್ಲಿ ಸಂಬಂಧ ಹೆಚ್ಚಿಸುವ ಉದ್ದೇಶದಿಂದ ಭಾರತ ಮತ್ತು ಅಮೆರಿಕ ಪರಸ್ಪರ ಎರಡು ದೇಶಗಳಲ್ಲಿ ವ್ಯಾಪಾರ ಒಪ್ಪಂದ (ಎಫ್ಟಿಎ) ಮಾಡಿಕೊಳ್ಳಲು ಚರ್ಚೆಗಳು ನಡೆಯುತ್ತಲಿದೆ. ಇದರ ನಡುವೆ ಭಾರತ ಉತ್ತಮ ವ್ಯಾಪಾರ ಪಾಲುದಾರ ಅಲ್ಲ. ಭಾರತದ ಮೇಲೆ ಕಠಿಣ ಸುಂಕ ಹಾಕಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಈ ಬೆದರಿಕೆ ಭಾರತವನ್ನು ಒತ್ತಡದಲ್ಲಿ ಸಿಲುಕಿಸುವ ಉದ್ದೇಶದ್ದು. ಹೆದರಿ ಕೊಂಡು ವ್ಯಾಪಾರದ ಪ್ರಧಾನ ವಿಷಯಗಳಲ್ಲಿ ನಾವು ರಾಜೀ ಮಾಡಿಕೊಳ್ಳಲು ಸಿದ್ಧರಾದರೆ ಅದರ ಹೊಡೆತ ಕೇವಲ ಭಾರತಕ್ಕೆ ಮಾತ್ರ ಅಲ್ಲ ಮೂರನೇ ಜಾಗತಿಕ ದೇಶಗಳಿಗೂ ತೊಂದರೆ ಆಗುತ್ತದೆ.
ಡಬ್ಲ್ಯೂಟಿಒದ ಟಿಆರ್ಐಪಿ ಒಪ್ಪಂದದಲ್ಲಿ (ಜಾಗತಿಕ ವ್ಯಾಪಾರ ವ್ಯವಸ್ಥೆಯ ಪೇಟೆಂಟ್ಗಳು, ಹಕ್ಕು ಸ್ವಾಮ್ಯಗಳು, ಬೌದ್ಧಿಕ ಆಸ್ತಿ ಹಕ್ಕುಗಳ ಸಂರಕ್ಷಣೆಯ ಅತೀ ಕಡಿಮೆ ಮಾನದಂಡಗಳು) ನಿಬಂಧಗಳ ಪ್ರಕಾರವಾಗಿಯೇ ಈಗಿನ ಭಾರತ-ಅಮೆರಿಕ ನಡುವಿನ ವ್ಯಾಪಾರ ಸಂಬಂಧಗಳಿವೆ. ಸದಸ್ಯ ದೇಶಗಳ ನಡುವೆ ಬೌದ್ಧಿಕ ಆಸ್ತಿ ಹಕ್ಕು ಏಕೀಕರಣಕ್ಕೂ ವ್ಯಾಪಾರ ನವೀಕರಣಕ್ಕೂ ಕಾರಣವಾಗಿದೆ. ಬೌದ್ಧಿಕ ಆಸ್ತಿಯ ಒಡೆತನಕ್ಕೆ ಸಾಕಷ್ಟು ಸಂರಕ್ಷಣೆ ನೀಡುವುದು ಇದರ ಘೋಷಿತ ಗುರಿಯಾಗಿದೆ.
ಕಡಿಮೆ ಸುಂಕದಲ್ಲಿ ರಫ್ತು(ಜವಳಿ, ಐಟಿ ಸೇವೆಗಳು) ಸಾಧ್ಯವಾಗುವಂತೆ ಮಾಡುವುದು, ನಿಬಂಧನೆಗಳನ್ನು ದೂರವಿಟ್ಟು ಕೃಷಿ, ಔಷಧ ಕ್ಷೇತ್ರಗಳಿಗೆ ಹೆಚ್ಚಿನ ರಕ್ಷಣೆಯನ್ನು ಎರಡು ದೇಶಗಳ ನಡೆದ ಚರ್ಚೆಯಲ್ಲಿ ಖಚಿತಗೊಳಿಸುವುದು ಭಾರತದ ಪ್ರಧಾನ ಹಿತಾಸಕ್ತಿಯಾಗಿತ್ತು.
ಅಮೆರಿಕದ ಗುರಿ
ಅಮೆರಿಕದ ಉತ್ಪನ್ನ ಸೇವೆಗಳಿಗೆ ಭಾರತದ ಮಾರುಕಟ್ಟೆ ಹೆಚ್ಚು ತೆರೆದು ಸಿಗಬೇಕು, ಬೌದ್ಧಿಕ ಹಕ್ಕುಸ್ವಾಮ್ಯದ ಮೇಲೆ ಈಗಿರುವುದಕ್ಕಿಂತ ಹೆಚ್ಚು ಶಕ್ತಿಶಾಲಿ ಸಂರಕ್ಷಣೆ(ಟಿಆರ್ಐಪಿಎಸ್ ಪ್ಲಸ್), ವಿದೇಶಿ ಕಂಪೆನಿಗಳ ಮೇಲೆ ನಿಯಂತ್ರಣವನ್ನು ಕಡಿಮೆ ಮಾಡುವ ಗುರಿಯನ್ನು ಅಮೆರಿಕ ಹೊಂದಿತ್ತು. ಈ ಸಾಲಿನಲ್ಲಿ ಅತೀ ದೊಡ್ಡ ಸವಾಲಾಗಿ ಬೌದ್ದಿಕ ಹಕ್ಕು ಸ್ವಾಮ್ಯದ (ಇಂಟೆಲೆಕ್ಚು ವಲ್ ಪ್ರಾಪರ್ಟಿ) ದೊಡ್ಡ ಸವಾಲಾಗಿ ಎದುರು ನಿಂತಿತು.
ಮೊತ್ತಮೊದಲು ಮದ್ದಿನ ಪೇಟೆಂಟ್ಗಳು, ಪಾಶ್ಚಾತ್ಯ ಬಹು ರಾಷ್ಟ್ರೀಯ ಕಂಪೆನಿಗಳು ಈಡುಗೊಳಿಸುವ ಬೆಲೆಗಿಂತ ತುಂಬ ಕಡಿಮೆ ರೇಟಿಗೆ ಆಫ್ರಿಕ, ಏಷ್ಯ, ಲ್ಯಾಟಿನ್ ಅಮೇರಿಕಗಳಲ್ಲಿ ಮಿಲಿಯನ್ ಗಟ್ಟಲೆ ಜನರಿಗೆ ಜೀವ ರಕ್ಷಕ ಔಷಧಗಳನ್ನು ವಿತರಿಸುವ ಭಾರತದ ಜನರಿಕ್ ಫಾಮ್ಯು ಸೂಟಿಕಲ್ ಉದ್ಯಮ ಅಭಿವೃಧಿಶೀಲ ದೇಶಗಳ ಔಷಧ ಸಂಸ್ಥೆ ಎಂಬ ನೆಲೆಯಲ್ಲಿ ಜಗತ್ತಿನಲ್ಲಿ ಪ್ರಧಾನವಾದುದು ಆಗಿದೆ. ಇದು ವ್ಯಾಪಾರದ ಹಿತಕ್ಕಿಂತ ಜಗತ್ತಿನ ಕೋಟಿಗಟ್ಟಲೆ ಮನುಷ್ಯರ ಜೀವನ ವಿಷಯವಾಗಿದೆ.
ಟಿಆರ್ಐಪಿಎಸ್ ವ್ಯವಸ್ಥೆಯ ನಿಬಂಧನೆಗಳೊಳಗೆ ಇದ್ದೇ ಸಹಿಸಬಹು ದಾದ ಬೆಲೆ, ಲಭ್ಯತೆ, ಸಾರ್ವಜನಿಕಾರೋಗ್ಯಗಳಿಗೆ ಆದ್ಯತೆ ನೀಡುವ ಮಾನವೀಯತೆಯ ಪೇಟೆಂಟ್ ಕಾನೂನು ಭಾರತದ್ದು. ಈ ಭಾರತದ ಈಗಿನ ನಿಬಂಧನೆಯ ಹೊರತಾಗಿ ಹೆಚ್ಚು ಶಕ್ತಿ ಶಾಲಿ ಬೌದ್ಧಿಕ ಸ್ವಾಮ್ಯ ಹಕ್ಕು ಸಂರಕ್ಷಣೆಗೆ ಅಮೆರಿಕದ ಆಗ್ರಹವು ಜಾಗತಿಕ ಮಟ್ಟದಲ್ಲಿಯೂ ಸುಲಭ ಬೆಲೆಗೆ ಸಿಗುವ ಮದ್ದು ಲಭ್ಯತೆಯೇ ಗಂಭೀರ ಬಿಕ್ಕಟ್ಟು ಸೃಷ್ಟಿಸುತ್ತದೆ. ಡಬ್ಲ್ಯೂಟಿಒ ಸದಸ್ಯ ದೇಶಗಳಿಂದ ಅಂಗೀಕೃತವಾದ ಸಾರ್ವಜನಿಕಾರೋಗ್ಯಕ್ಕೆ ಸಂಬಂಧಿಸಿದ 2001ರ ಟಿಆರ್ಐಪಿಎಸ್ನ ದೋಹ ಘೋಷಣೆಯು ಆರೋಗ್ಯ ರಂಗವನ್ನು ವಾಣಿಜ್ಯ ಹಿತಕ್ಕಿಂತಲೂ ಸಾರ್ವಜನಿಕಾ ರೋಗ್ಯಕ್ಕೆ ಆಧ್ಯತೆ ನೀಡಬೇಕೆಂದಾಗಿತ್ತು.
ಆದರೆ, ಭಾರತದೊಂದಿಗಿನ ಚರ್ಚೆಗಳಲ್ಲಿ ಬೃಹತ್ ಫಾಮ್ಯೂಸ್ಯೂಟಿಕಲ್ ಕಂಪೆನಿಗಳಿಗೆ ಅನುಕೂಲಕರವಾಗಿ ಶಕ್ತಿಶಾಲಿ ಪೇಟೆಂಟ್ ವ್ಯವಸ್ಥೆಯ ಹಕ್ಕನ್ನು ಅಮೆರಿಕ ಮುಂದಿಡುತ್ತಿದೆ.
ಲಾಭ ಬೃಹತ್ ಮದ್ದು ಕಂಪೆನಿಗಳಿಗೆ
ಪ್ರಸ್ತುತ ಪೇಟೆಂಟ್ ಇರುವ ಮದ್ದುಗಳಲ್ಲಿ ನಂತರ ಸಣ್ಣ ಬದಲಾವಣೆ ಕೂಡ ಮಾಡಿದರೂ ಹೊಸ ಪೇಟೆಂಟ್ ಕೊಡುವ ರೀತಿಯ ವಿಶಾಲವಾದ ಪೇಟೆಂಟ್ ಯೋಗ್ಯ ಮಾನದಂಡಗಳಿಗೂ (ಪೆಟೆಂಟ್ ಎವರ್ ಗ್ರೀನಿಗ್) ಪೇಟೆಂಟ್ ಅವಧಿ 20 ವರ್ಷಗಳಿಗಿಂತ ಹೆಚ್ಚು ಸಮಯ ಮಾಡವುದು, ಸಾರ್ವಜನಿಕಾರೋಗ್ಯಕ್ಕೆ ನಿರ್ಬಂಧಿತ ಲೈಸೆನ್ಸಿಂಗ್ನ ನಿಯಂತ್ರಣ ಕೈಬಿಡುವುದು, ಕ್ರಲಿನಿಕಲ್ ಟ್ರೆಯಲ್ ಡಾಟ ಎಕ್ಸ್ ಕ್ಯೂಸಿವಿಟಿ, ಜನರಿಕ್ ಮದ್ದುಗಳ ಅಂಗೀಕಾರಗಳಲ್ಲಿ ಹಕ್ಕು. ಪೇಟೆಂಟ್ ಲಿಂಕೇಜ್, ಔಷಧ ರೆಗ್ಯುಲೇಟರಿ ಅಂಗೀಕರಿಸದ ಪೇಟೆಂಟ್ ಸ್ಟಾಟಸ್ನೊಂದಿಗೆ ಜೋಡಿಸುವುದು; ಆವಶ್ಯಕ ಮದ್ಯುಗಳ ಬೆಲೆ ನಿಯಂತ್ರಣ ಇಲ್ಲದಂತೆ ಮಾಡು ವುದು ಇವೆಲ್ಲವೂ ಆರೋಗ್ಯರಂಗವನ್ನು ಹಿನ್ನಡೆಗೆತಳ್ಳಲು ಕಾರಣವಾಗಬಹುದು.
ಬಹುರಾಷ್ಟ್ರ ಕಂಪೆನಿಗಳ ಹಿತವನ್ನು ಮುಂದಿಟ್ಟು ಪೇಟೆಂಟ್ ಕಾನೂನುಗಳಲ್ಲಿ ಬದಲಾವಣೆ ಮತ್ತು ಪೇಟೆಂಟ್ ಅವಧಿ 20 ವರ್ಷಕ್ಕಿಂತ ಹೆಚ್ಚು ಮಾಡುವುದು ನಿತ್ಯ ಹಸಿರುಕರಣ ಅನುಮತಿಸುವುದು (ಪೆಟೆಂಟ್ ಎವರ್ ಗ್ರೀನಿಂಗ್) ಇದರಲಿ ಗುರಿಯಿರಿಸಲಾಗುತ್ತಿದೆ.
ಪೇಟೆಂಟ್ ಎವರ್ಗ್ರೀನಿಂಗ್ ಒಂದು ಉತ್ಪನ್ನದ ಮೇಲೆ ಪೇಟೆಂಟ್ ಸುರಕ್ಷಿತತೆಯನ್ನು ಹೆಚ್ಚಿಸುವ ಕುತಂತ್ರವಾಗಿದೆ. ಸಾಮಾನ್ಯವಾಗಿ ಔಷಧ ವ್ಯಾಪಾರದಲ್ಲಿ, ನಿಜವಾದ ಮದ್ದಿನ ವೈಪರೀತ್ಯಗಳಿಗೆ ಸಣ್ಣ ಬದಲಾವಣೆ ಮಾಡುವುದೋ ಹೊಸ ಪೇಟೆಂಟ್ಗಳನ್ನು ಹುಡುಕುವುದೋ ಮಾಡುವ ಈ ತಂತ್ರದಲ್ಲಿ ಕಂಪೆನಿಗಳಿಗೆ ಮಾರುಕಟ್ಟೆಯಲ್ಲಿ ಆಧಿಪತ್ಯವನ್ನು ಉಳಿಸಿ ಕೊಳ್ಳಲು ಮತ್ತು ದೀರ್ಘಾವದಿಗೆ ಜನರಿಕ್ ಮದ್ದುಗಳು ಮಾರುಕಟ್ಟೆಗೆ ಮಾರುವುದನ್ನು ತಡೆಯಲು ಸಾಧ್ಯವಾಗುತ್ತದೆ. ಜೊತೆಗೆ ಮದ್ದಿನ ಲಭ್ಯತೆ (ಅಫ್ಫರ್ಡೇಬಲ್ ಏಕ್ಸಸ್ ಟುಮೆಡಿಸಿನ್) ಇಲ್ಲದಂತೆ ಮಾಡಲು ಸಾಧ್ಯವಾಗುತ್ತದೆ.
ಉದಾಹರಣೆಗೆ, ನೊವರ್ಟಿಸ್ಗೆ ಪೇಟೆಂಟ್ ಇದ್ದಾಗ ಅರ್ಬುದ ಮದ್ದು ಇಮಾಟಿನಿಬಿಗೆ ಒಬ್ಬ ರೋಗಿ ಪ್ರತಿ ತಿಂಗಳು 1.2 ಲಕ್ಷ ರೂಪಾಯಿ ಖರ್ಚು ಮಾಡಬೇಕಾಗಿ ಬಂದಿತ್ತು. ಪೇಟೆಂಟ್ ಕಾಲವಧಿ ಮುಗಿಯುತ್ತಿದ್ದಾಗ ಅದೇ ಮದ್ದಿನ ಹೊಸ ರೂಪಾಂತರಕ್ಕೆ ಪೇಟೆಂಟಿಗೆ ಅರ್ಜಿ ಸಲ್ಲಿಸಲ್ಪಟ್ಟರೂ ಭಾರತದ ಪೇಟೆಂಟಿಗೆ ಕಾನೂನಿನ ಸೆಕ್ಷನ್3(ಡಿ) ಮಾನದಂಢಗಳ ಪ್ರಕಾರ ಅದನ್ನು ತಳ್ಳಿಹಾಕಲಾಯಿತು. ಅದರಿಂದಾಗಿ ರೋಗಿಗಳು ತಿಂಗಳಿಗೆ 8,000 ರೂಪಾಯಿ ದರದಲ್ಲಿ ಜನರಿಕ್ ಮದ್ದನ್ನು ಲಭ್ಯಗೊಳಿಸಲು ಪ್ರಾರಂಭಿಸಿತು. ಅಮೆರಿಕದ ಆಗ್ರಹಕ್ಕೆ ಭಾರತ ಒಪ್ಪಿಕೊಂಡರೆ ಹಳೆ ಮದ್ದುಗಳ ಸಣ್ಣ ಬದಲಾವಣೆಯೂ ಪೇಟೆಂಟ್ ಕೂಡಲು ನಾವು ನಿರ್ಬಂಧಿತವಾಗುತ್ತೇವೆ. ಮೊದಲ ಮದ್ದು ತಯಾರಕ ಪುನಃ ಪೇಟೆಂಟ್ ಹಕ್ಕು ಕೇಳುವುದರಿಂದ ಜನರಿಕ್ ಮದ್ದುಗಳ ಅಂಗೀಕಾರ ನಿಷೇಧಿಸಲ್ಪಡುತ್ತದೆ.
ನಿರ್ಬಂಧಿತ ಲೈಸನ್ಸಿಂಗ್ (ಕಂಪಲ್ಸರಿ ಲೈಸೆನ್ಸಿಂಗ್ ಪೇಟೆಂಟ್ ಆಕ್ಟ್ ಆಫ್ ಇಂಡಿಯ -ಸೆಕ್ಸನ್ 84,92) ಸಂಬಂಧಿಸಿದ ನಿಬಂಧನೆಗಳು ಸಾರ್ವಜನಿಕ ಹಿತಾಸಕ್ತಿಯೊಂದಿಗೆ ಪೇಟೆಂಟ್ ಒಡೆಯರ ಹಕ್ಕುಗಳನ್ನು ಸಮತೋಲನದ ವ್ಯವಸ್ಥೆಯಾಗಿ ರೂಪಕಲ್ಪನೆ ಮಾಡಲಾಗಿದೆ. ಈ ನಿಯಂತ್ರಣಗಳಿಗೆ ಸಹ್ಯವಾದ ಬೆಲೆಯಲ್ಲಿ ಅವಶ್ಯಕ ಮದ್ದುಗಳು ಅಂತಹ ಅವಶ್ಯಕ ವಸ್ತುಗಳ ಲಭ್ಯತೆ ಖಚಿತಪಡಿಸುವುದರಲ್ಲಿ ಪ್ರಧಾನ ಪಾತ್ರವಿದೆ. ಈ ನಿಬಂಧನೆಗಳು ಪ್ರಕಾರ ತುರ್ತು ಪರಿಸ್ಥಿತಿಯಲ್ಲಿ ಪೇಟೆಂಟ್ ಮಾಲಕನ ಸಮ್ಮತ ಇಲ್ಲದೆ ಮೂರನೇ ಕಕ್ಷಿಗೆ ಪೇಟೆಂಟ್ ಪಡೆದ ಉತ್ಪನ್ನಗಳನ್ನು ತಯಾರಿಸಲು ಲೈಸೆನ್ಸ್ ನೀಡಲು ಸರ ಕಾರಕ್ಕೆ ಅಧಿಕಾರವಿದೆ. ಸಾರ್ವಜನಿಕ ಆರೋಗ್ಯ ಸಂರಕ್ಷಿಸುವುದಕ್ಕೆ ಆಂತರಿಕ ಬೇಡಿಕೆಗಳು ಪೂರೈಕೆಯಾಗುವುದು ಖಚಿತಪಡಿಸಿಕೊಳ್ಳಲು ಈ ವ್ಯವಸ್ಥೆ ಅತ್ಯಂತ ನಿರ್ಣಾಯಕವಾಗಿದೆ.
ಭಾರತದ ನೈತಿಕ ಜವಾಬ್ದಾರಿ:
ಫಾರ್ಮಸ್ಯೂಟಿಕಲ್ ಕ್ಷೇತ್ರದಲ್ಲಿ ನವೀಕರಣ ಆಗಬಹುದು, ಹೊಸ ಮದ್ದುಗಳಿಗೆ ಮಾರ್ಕೆಟಿಂಗ್ ಎಕ್ಸಿ ಕ್ಯೂವಿಟಿ ಒಂದು ಅವಧಿಯವರೆಗೆ ಲಭಿಸುವುದು ಕಂಪೆನಿಗಳಿಗೆ ಅವರ ಸಂಶೋಧನೆ, ಅಭಿವೃದ್ಧಿ ಹೂಡಿಕೆಗಳನ್ನು ಪಡೆಯಬಹುದು ಎಂದು ವಾದಿಸುತ್ತಾ ಡಾಟ ಎಕ್ಸಿಸ್ಕ್ಲೂಸಿವಿಟಿ ಎಂಬ ಬೇಡಿಕೆಯನ್ನು ಮದ್ದು ಕಂಪೆನಿಗಳು ಮುಂದಿಡುತ್ತಿವೆ. ಇದು ಅಂಗೀಕರಿಸಿದರೆ ಈ ಸಮಯಾವಧಿಯಲ್ಲಿ ಒಂದು ಮದ್ದಿನ ಜನರಿಕ್ ಪ್ರತಿಗೆ ಅರ್ಜಿಗಳನ್ನು ಅಂಗೀ ಕರಿಸುವುದಕ್ಕೆ ರೆಗುಲೇಟರಿ ಏಜೆನ್ಸಿಗಳಿಗೆ ಮೊದಲ ಕಂಪೆನಿ ಸಲ್ಲಿಸಿದ ಮದ್ದಿನ ಉಪಯೋಗ ಮತ್ತು ಕಾರ್ಯ ನಿರ್ವಹಣೆಗೆ ಸಂಬಂಧಿಸಿ ಡಾಟವನ್ನು ಉಪಯೋಗಿಸಲು ಆಗುವುದಿಲ್ಲ.
ಡಾಟ ಎಕ್ಸಿಸ್ಕ್ಲೂಸಿವಿಟಿ ಸಾಮಾನ್ಯವಾಗಿ ಒಂದು ಮದ್ದಿಗೆ ಮಾರ್ಕೆಟ್ ಅಂಗೀಕಾರ ಸಿಕ್ಕಿದ ದಿನಾಂಕದಿಂದ ನಿಗದಿತ ಅವಧಿಗೆ (5 ಅಥವಾ 8 ವರ್ಷಗಳು) ಅಮೆರಿಕ ಸಹಿತ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಪೇಟೆಂಟ್ ಕೊಡಲಾಗುತ್ತಿದೆ. ಈ ಯಥಾರ್ಥದಲ್ಲಿ 20 ವರ್ಷ ಎಂಬ ಪೇಟೆಂಟ್ ಅವಧಿಯನ್ನು ಜನರಿಕ್ ಮದ್ದುಗಳ, ವಿಶೇಷವಾಗಿ ಜೀವನ್ರಕ್ಷಾ ಮದ್ದುಗಳ ಜನರಿಕ್ ಪ್ರತಿಯನ್ನು ಉತ್ಪಾದನೆ ತಡ ಮಾಡುವುದೋ ತಡೆಯುವುದೋ ಮಾಡಬಹುದು ಎಂಬುದಕ್ಕೆ ಆಧಾರವಾಗಿದೆ.
ಡಾಟ ಎಕ್ಸಿಸ್ಕ್ಲೂಸಿವಿಟಿ ಬಯೋ ಸಿಮಿಲರ್ಗಳ (ವ್ಯಾಕ್ಸಿನ್ಗಳ ಸಹಿತ ಬಯೋಲಜಿಕಲ್ ಮದ್ದುಗಳ ಜನರಿಕ್ ಪ್ರತಿಗಳು) ಲಭ್ಯತೆಯು ಪ್ರತಿಕೂಲವಾಗಿ ಬಾಧಿಸುತ್ತದೆ ಮತ್ತು ಮದ್ದಿನ ಬೆಲೆ ಹೆಚ್ಚಿಸಬಹುದು. ಭಾರತದಲ್ಲಿ ಪ್ರಸಕ್ತ ಡಾಟ ಎಕ್ಸಿಸ್ಕ್ಲೂಸಿವಿಟಿಗಾಗಿ ಪ್ರತ್ಯೇಕ ವಾದ ಕಾನೂನಿಲ್ಲ. ಆದರೂ ಇಂತಹ ಕ್ರಮಗಳನ್ನು ಕಾನೂನು ಪ್ರೋತ್ಸಾಹಿಸುವುದಿಲ್ಲ. ಆಯೋಗದ ಒತ್ತಡಕ್ಕೆ ಮಣಿಯ ಬೇಕಾಗುತ್ತದೆಂದಾದರೆ ಸಿಂಧುವಾದ ಪೇಟೆಂಟ್ ಇಲ್ಲದಿದ್ದರೆ ಕೂಡ ವರ್ಷಗಳ ಕಾಲ ಕ್ಲಿನಿಕಲ್ ಡಾಟ ರಹಸ್ಯವಾಗಿ ಕಾದಿರಿಸಲು ನಿರ್ಬಂಧಿತರಾಗಬೇಕಾಗುತ್ತದೆ.
ಒಂದು ಎರಡು ದೇಶಗಳ ಸ್ವತಂತ್ರ ವ್ಯಾಪಾರ ಒಪ್ಪಂದ ಪ್ರಯತ್ನಗಳಲ್ಲಿ, ಭಾರತದ ಸಾರ್ವಭೌಮತೆ ಮತ್ತು ಕಾನೂನು ವ್ಯವಸ್ಥೆಯನ್ನು ದುರ್ಬಲ ಗೊಳಿಸುವ ಬೇಡಿಕೆಗಳನ್ನು ಅಮೆರಿಕ ಎತ್ತುವಾಗ ನಾವು ಹೆಚ್ಚು ಎಚ್ಚರಿಕೆ ವಹಿಸಬೇಕಾಗಿದೆ. ಮತ್ತಷ್ಟು ಕಟ್ಟುನಿಟ್ಟಾದ ಬೌದ್ಧಿಕ ಸ್ವಾಮ್ಯ ಹಕ್ಕು ವ್ಯವಸ್ಥೆ ಮತ್ತು ಆ ಹಕ್ಕುಗಳನ್ನು ದುರ್ಬಲಗೊಳಿಸಲು ಮತ್ತು ಸಾರ್ವಜನಿಕಾರೋಗ್ಯ ವ್ಯವಸ್ಥೆಯು ಶಿಥಿಲಗೊಳ್ಳುವುದಕ್ಕೂ ಅದು ಕಾರಣವಾದೀತು. ಈಗ ಇತರ ಅಭಿವೃದ್ಧಿ ಹೊಂದುತ್ತಿರುವ ದೇಶಗಳೊಂದಿಗೆ ಅಮೆರಿಕ ಸ್ವತಂತ್ರ ವ್ಯಾಪಾರ ಒಪ್ಪಂದ ಟಿಆರ್ಐಪಿಎಸ್-ಪ್ಲಸ್ ವ್ಯವಸ್ಥೆಗಳು ಮದ್ದಿನ ದರ ಹೆಚ್ಚಳಕ್ಕೂ ಅವಶ್ಯಕ ಮದ್ದಿನ ಕೊರತೆಗೂ ಕಾರಣವಾಗಿದೆ ಎಂದು ಲೋಕಾರೋಗ್ಯ ಸಂಘಟನೆಯ ಮೆಡಿಸಿನ್ಸ್ ಸೈನ್ಸ್ ಫ್ರಂಟಿಯರ್ಸ ಬೆಟ್ಟು ಮಾಡಿ ತೋರಿಸಿದೆ.
ಅಮೆರಿಕದೊಂದಿಗೆ ಇರುವ ಸ್ವತಂತ್ರ ವ್ಯಾಪಾರ ಒಪ್ಪಂದ ನಮ್ಮ ರಫ್ತು, ಉದ್ಯೋಗವಕಾಶ ಹೆಚ್ಚಳಕ್ಕೂ ಹೂಡಿಕೆ ಮಾರುಕಟ್ಟೆ ಪ್ರವೇಶ ಮಾಡಿಕೊಡುತ್ತದೆ ಎಂದು ವಾದಿಸುವವರು ಕೆಲವು ಬಿಲಿಯನ್ ಡಾಲರ್ ವ್ಯಾಪಾರಕ್ಕಾಗಿ ನಮ್ಮ ಪ್ರಜೆಗಳು ಮಾತ್ರವಲ್ಲ ಜಗತ್ತಿನಾದ್ಯಂತ ಇರುವ ಮಿಲಿಯನ್ಗಟ್ಟಲೆ ಮನುಷ್ಯ ಜೀವವನ್ನು ಒತ್ತೆ ಇಡುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಬೇಕು.
ಭಾರತದ ಪೇಟೆಂಟ್ ಕಾನೂನುಗಳು ಡಬ್ಲ್ಯೂಟಿಒಟಿಆರ್ ಐಪಿಎಸ್ ಒಪ್ಪಂದ ಪ್ರಕಾರ ಇದೆ. ಅದ್ದರಿಂದ ಅಂತಾರಾಷ್ಟ್ರೀಯ ಕಾನೂನಿನ ಅಧೀನದ ನಮ್ಮ ಹಕ್ಕುಗಳು ಸಾರ್ವಜನಿಕಾರೋಗ್ಯ ಸಂರಕ್ಷಿಸುವುದಕ್ಕೆ ಸಾಧ್ಯವಾದ ಒಂದು ನೀತಿಯನ್ನು ನಾವು ರೂಪಿಸಬೇಕಾಗಿದೆ. ಟಿಆರ್ಐಪಿಎಸ್-ಪ್ಲಸ್ ವ್ಯವಸ್ಥೆಗಳನ್ನೇ ಸ್ವೀಕರಿಸಬೇಕೆಂಬ ಅಮೆರಿಕದ ಒತ್ತಡವನ್ನು ವಿರೋಧಿಸುವುದು ಅಭಿವೃದ್ಧಿ ಶೀಲ ದೇಶಗಳ ಫಾರ್ಮಸಿ ಎಂಬ ನೆಲೆಯಲ್ಲಿ ಭಾರತದ ನೈತಿಕ ಹೊಣೆಗಾರಿಕೆಯಾಗಿದೆ.
(ಬರಹಗಾರರು ಕೊಚ್ಚಿ ವಿಜ್ಞಾನ ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಬೌದ್ಧಿಕ ಸ್ವಾಮ್ಯ ಹಕ್ಕು ಕಾನೂನಿನಲ್ಲಿ ಎಲ್ಎಲ್ಎಂ ಪಿಎಚ್ಡಿ ಪಡೆದುಕೊಂಡಿರುವ ಲೇಖಕಿಯಾಗಿದ್ದಾರೆ)












