ಸನ್ಮಾರ್ಗ ವಾರ್ತೆ
ಬರುವ ಶ್ಯೆಕ್ಷಣಿಕ ವರ್ಷ 2026-27 ನೇ ಸಾಲಿನಲ್ಲಿ ಎಸ್ಸೆಸೆಲ್ಸಿ ತೇರ್ಗಡೆಗೊಳ್ಳುವ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಈ ಕೆಳಗೆ ನಮೂದಿಸಿರುವ ದ.ಕ. ಜಿಲ್ಲೆಯ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳು ಪ್ರಥಮ ಪಿ.ಯು.ಸಿ.ಗೆ ಉಚಿತ ಸೀಟುಗಳ ಕೊಡುಗೆಯನ್ನು ಮೀಫ್ ವ್ಯಾಪ್ತಿಗೆ ಒಳಪಡುವ ವಿದ್ಯಾ ಸಂಸ್ಥೆಗಳಿಗೆ ಹಾಗೂ ಸರಕಾರಿ ಶಾಲೆಗಳ ಅರ್ಹ ವಿದ್ಯಾರ್ಥಿಗಳಿಗಾಗಿ ನೀಡಲು ವಾಗ್ದಾನವನ್ನು ನೀಡಿರುತ್ತಾರೆ.
ವಿವರಗಳು ಈ ಕೆಳಗಿನಂತಿವೆ.
- ಯೆನೆಪೋಯ ಪಿ.ಯು. ಕಾಲೇಜು ಜೆಪ್ಪಿನ ಮೊಗರು :
ಪ್ರತೀ ವಿದ್ಯಾ ಸಂಸ್ಥೆಯ ಎಸ್ಸೆಸೆಲ್ಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಓರ್ವ ವಿದ್ಯಾರ್ಥಿಗೆ (ನೀಟ್/ ಸಿ.ಇ.ಟಿ. ತರಬೇತಿ ಸಹಿತ) ಉಚಿತ ಸೀಟು.
- ಬರಕಾ ವಿದ್ಯಾ ಸಂಸ್ಥೆ, ಅಡ್ಯಾರ್ :
ಪ್ರತೀ ವಿದ್ಯಾ ಸಂಸ್ಥೆಯ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ 90 ಕ್ಕಿಂತ ಅತ್ಯಧಿಕ ಅಂಕಗಳಿಸಿ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ಓರ್ವ ವಿದ್ಯಾರ್ಥಿಗೆ ಉಚಿತ ಸೀಟು.
- ಶೆಫರ್ಡ್ಸ್ ಶಾಹೀನ್ ವಿದ್ಯಾ ಸಂಸ್ಥೆ, ಅರ್ಕುಳ :
i). ಎಸ್ಸೆಸೆಲ್ಸಿಯಲ್ಲಿ 600 ಕ್ಕಿಂತ ಹೆಚ್ಚು ಅಂಕಗಳಿಸಿದ 20 ವಿದ್ಯಾರ್ಥಿಗಳಿಗೆ (ನೀಟ್/ ಜೆಇಇ ಸಹಿತ) ಉಚಿತ ಸೀಟು.
*ii. ಎಸ್ಸೆಸೆಲ್ಸಿ ಯಲ್ಲಿ 600 ಕ್ಕಿಂತ ಹೆಚ್ಚು ಅಂಕ ಗಳಿಸಿದ, ಆರ್ಥಿಕವಾಗಿ ತೀರಾ ಹಿಂದುಳಿದ ಬಡ ಮುಸ್ಲಿಂ ವಿದ್ಯಾರ್ಥಿಗಳಿಗೆ ದ.ಕ. ಹೊರತು ಪಡಿಸಿ ಮೀಫ್ ವ್ಯಾಪ್ತಿಗೆ ಒಳಪಡುವ ಉಡುಪಿ,ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಮತ್ತು ಹಾಸನ ಜಿಲ್ಲೆಗಳು ಮತ್ತು ಸರಕಾರಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಸೌಲಭ್ಯದೊಂದಿಗೆ ಒಟ್ಟು 10 ಸೀಟುಗಳು.
- ಅಲ್ ಫುರ್ಖಾನ್ ಇಸ್ಲಾಮಿಕ್ ಪಿ.ಯು. ಕಾಲೇಜು ಮೂಡಬಿದ್ರೆ :
I). ಪ್ರತೀ ವಿದ್ಯಾ ಸಂಸ್ಥೆಯ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ 90 ಕ್ಕಿಂತ ಅಧಿಕ ಅಂಕಗಳಿಸಿದ ಓರ್ವ ವಿದ್ಯಾರ್ಥಿಗೆ ಉಚಿತ ಸೀಟು.
II). ಹಾಫಿಝ್ ವಿದ್ಯಾರ್ಥಿಯಾಗಿದ್ದಲ್ಲಿ ಶೇಕಡಾ 80 ಕ್ಕಿಂತ ಅಧಿಕ ಅಂಕಗಳಿಸಿದ ಒಟ್ಟು 5 ವಿದ್ಯಾರ್ಥಿಗಳಿಗೆ ಉಚಿತ ಸೀಟುಗಳು.
ಈ ಮೇಲಿನ ಸೀಟುಗಳನ್ನು ಪಡೆಯಲು ಮೀಫ್ ವ್ಯಾಪ್ತಿಗೆ ಒಳಪಡುವ ವಿದ್ಯಾ ಸಂಸ್ಥೆ ಮತ್ತು ಸರಕಾರಿ ವಿದ್ಯಾ ಸಂಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ.
ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟಗೊಂಡ ತಕ್ಷಣ ಅರ್ಜಿಯನ್ನು ಮೀಫ್ ಕಚೇರಿಯಲ್ಲಿ ಸ್ವೀಕರಿಸಲಾಗುವುದು.
ಅಲ್ಲದೆ ಕಳೆದ ವರ್ಷಗಳಂತೆ ಪ್ರತಿಭಾವಂತ ಬಡ ಮುಸ್ಲಿಂ ವಿದ್ಯಾರ್ಥಿಗಳಿಗೆ ಉಚಿತ ಮೆಡಿಕಲ್, ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್ ಮತ್ತು ಡಿಗ್ರಿ ಕೋರ್ಸುಗಳ ಸೀಟುಗಳು ಲಭ್ಯವಾಗಲಿದ್ದು ಅವುಗಳ ವಿವರಗಳನ್ನು ಪ್ರತ್ಯೇಕ ಪ್ರಕಟಣೆಯಲ್ಲಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಮೀಫ್ ಕಚೇರಿಯ ಮೊಬೈಲ್ ಸಂಖ್ಯೆ 8792115666 ಗೆ ಸಂಪರ್ಕಿಸಬಹುದಾಗಿದೆ ಎಂದು ಮೀಫ್ ಕೇಂದ್ರ ಸಮಿತಿಯ ಅಧ್ಯಕ್ಷರಾದ ಮೂಸಬ್ಬ ಪಿ.ಬ್ಯಾರಿ ಜೋಕಟ್ಟೆಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.












