ಜಮಾಅತೆ ಇಸ್ಲಾಮೀ ಹಿಂದ್ ನೋಂದಾಯಿತ ಸಂಘಟನೆ

0
265

✍️ ಡಾ| ಬೆಳಗಾಮಿ ಮುಹಮ್ಮದ್ ಸಾದ್
ರಾಜ್ಯಾಧ್ಯಕ್ಷರು, ಜ.ಇ. ಹಿಂದ್, ಕರ್ನಾಟಕ

ಪ್ರಶ್ನೆ: ಆರ್‌ಎಸ್‌ಎಸ್ ನೋಂದಣಿಯ ವಿಷಯ ಚರ್ಚೆಯಲ್ಲಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಜಮಾಅತೆ ಇಸ್ಲಾಮೀ ಹಿಂದ್ ನೋಂದಣಿ ಆಗಿದೆಯಾ? ತೆರಿಗೆ ಕಟ್ಟುತ್ತಿದೆಯಾ?

ಉತ್ತರ: ಆರ್‌ಎಸ್‌ಎಸ್ ದೇಶದ ದೊಡ್ಡ ಸಂಘಟನೆಗಳ ಪೈಕಿ ಒಂದಾಗಿದೆ. ಆದ್ದರಿಂದ ಅದರ ನೋಂದ ಣಿಗೆ ಸಂಬಂಧಿಸಿದಂತೆ ಚರ್ಚೆಯಲ್ಲಿರುವ ವಿಷಯವು ನ್ಯಾಯಸಮ್ಮತ ವಾಗಿದೆ ಮತ್ತು ಕಾನೂನನ್ನು ಅವರೂ ಅನುಸರಿಸಬೇಕಾಗುತ್ತದೆ.

ಜಮಾಅತೆ ಇಸ್ಲಾಮೀ ಹಿಂದ್‌ಗೆ ಸಂಬಂಧಿಸಿದಂತೆ, ಇದು ‘ವ್ಯಕ್ತಿಗಳ ಸಂಘ’ ಎಂಬ ನಿಯಮದಡಿಯಲ್ಲಿ ನೋಂದಾಯಿಸಲ್ಪಟ್ಟಿದೆ ಮತ್ತು ಆದಾಯ ತೆರಿಗೆ ಇಲಾಖೆಯಲ್ಲಿಯೂ ಅಧಿಕೃತವಾಗಿ ನೋಂದಾಯಿಸಲ್ಪಟ್ಟಿದೆ ಮತ್ತು ತನ್ನ ಲೆಕ್ಕಪತ್ರಗಳನ್ನು ನಿಯಮಿತವಾಗಿ ದಾಖಲಿಸುತ್ತಿದೆ. ಮೊತ್ತ ಮೊದಲನೆಯದಾಗಿ ಅಖಿಲ ಭಾರತೀಯ ಸ್ತರದಲ್ಲಿ ಜಮಾಅತ್‌ನ ಬೈತುಲ್‌ಮಾಲ್ ನೋಂದಾಯಿಸಲ್ಪಟ್ಟಿದೆ. ಎರಡನೆಯದಾಗಿ ಜಮಾಅತ್‌ನ ಅಧೀನದಲ್ಲಿ ನಡೆಯುತ್ತಿರುವ ಹಲವು ಸಂಸ್ಥೆಗಳು, ಟ್ರಸ್ಟ್‌ಗಳು ಎಲ್ಲವೂ ತಂತಮ್ಮ ನೆಲೆಯಲ್ಲಿ ಕಾನೂನನ್ನು ಪಾಲಿಸುತ್ತಲಿವೆ. ಜಮಾಅತೆ ಇಸ್ಲಾಮೀಯು ದೇಶದ ನಾಗರಿಕ ಕಾನೂನನ್ನು ಸಂಪೂರ್ಣವಾಗಿ ಪಾಲಿಸುತ್ತಾ ಬಂದಂತಹ ಸಂಘಟನೆಯಾಗಿದೆ. ಇದುವೇ ನಮ್ಮ ಇಸ್ಲಾಮೀ ಬೋಧನೆಗಳ ಬೇಡಿಕೆಯೂ ಆಗಿದೆ.

ಪ್ರಶ್ನೆ: ಒಂದೊಂದೇ ರಾಜಕೀಯ ಪಕ್ಷಗಳನ್ನು ಬಿಜೆಪಿ ಒಡೆಯುತ್ತಾ ಇದೆ. ಹೀಗಾದರೆ ಮತದಾರರ ಪರಿಸ್ಥಿತಿ ಏನು? ಯಾವ ಪಕ್ಷಕ್ಕೆ ಮತ ಹಾಕಿದರೂ ಅಂತಿಮವಾಗಿ ಅವರು ಬಿಜೆಪಿ ಸೇರ್ತಾರೆ ಎಂಬ ಭಾವನೆ ಜನರಲ್ಲಿ ಬರುವ ಸಾಧ್ಯತೆ ಇದೆ. ಮುಂದೆ ಬಿಜೆಪಿಯೊಂದೇ ಏಕೈಕ ಪಕ್ಷವಾಗಿ ಉಳಿಯಬಹುದು ಮತ್ತು ಉಳಿದೆಲ್ಲಾ ಪಕ್ಷಗಳು ಲೆಕ್ಕಕ್ಕೆ ಇಲ್ಲದಂತಾಗಿ ಬಿಡಬಹುದು. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಉತ್ತರ: ಹೌದು, ದೇಶದಲ್ಲಿ ಪ್ರಜಾಪ್ರಭುತ್ವ ದುರ್ಬಲ ವಾಗುತ್ತಿರುವುದು ಅತ್ಯಂತ ಕಳವಳಕಾರಿ ವಿಷಯವಾಗಿದೆ. ಏನಿದ್ದರೂ ಪ್ರಜಾಪ್ರಭುತ್ವವನ್ನು ಸರಿಯಾದ ರೀತಿ ಯಲ್ಲಿ ನಿರ್ವಹಿಸಿಕೊಂಡು ಹೋಗಬೇಕಾದರೆ ಪ್ರಬಲವಾದ ವಿರೋಧ ಪಕ್ಷದ ಅಗತ್ಯವಿದೆ. ಇಂದು ರಾಜಕೀಯವು ಯಾವ ಮಟ್ಟಕ್ಕೆ ಕುಸಿದಿದೆ ಮತ್ತು ನಮ್ಮ ರಾಜಕಾರಣಿಗಳು ಎಂತಹ ನೈತಿಕ ಮಟ್ಟದಲ್ಲಿ ಇದ್ದಾರೆ ಎಂಬುದನ್ನು ಪ್ರತ್ಯೇಕ ಹೇಳಬೇಕಾಗಿಲ್ಲ. ಇನ್ನೊಂದೆಡೆ,

ಅದು ಭಾಜಪದ ದಬ್ಬಾಳಿಕೆ ಮತ್ತು ಶೋಷಕ ಮನಸ್ಥಿತಿಯ ಪ್ರತಿಬಿಂಬವೂ ಆಗಿದೆ. ಇದು ದೇಶದ ಭವಿಷ್ಯ ಮತ್ತು ಪ್ರಜಾ ಸತ್ತೆಯ ಸ್ವಾಸ್ಥ್ಯದ ಮಟ್ಟಿಗೆ ಅತ್ಯಂತ ಅಪಾಯಕಾರಿ ಸ್ಥಿತಿಯಾಗಿದೆ. ಜನರು ಈ ನಿಟ್ಟಿನಲ್ಲಿ ಚಿಂತಿತರಾಗುವುದು ಸ್ವಾಭಾವಿಕವೇ ಆಗಿದೆ. ನಾವು ನೀತಿಯುತ ಮತ್ತು ತತ್ವಾದರ್ಶವುಳ್ಳ ಪ್ರಜಾ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಪ್ರಯತ್ನಿ ಸಬೇಕಾಗಿದೆ. ದೇಶದಲ್ಲಿ ಫ್ಯಾಶಿಸಂ ವಿರುದ್ಧ ಒಂದು ಪ್ರಬಲವಾದ ತಡೆಯನ್ನು ಉಂಟು ಮಾಡುವ ಅಗತ್ಯವಿದೆ. ಫಾಶಿಸ್ಟ್ ಇಂಡಿಯಾಗೆ ವಿರುದ್ಧವಾಗಿ ನೈಜ ‘ಇಂಡಿಯಾ ಆಫ್ ಐಡಿಯಾ’ವನ್ನು ಪುನರ್ ಸ್ಥಾಪಿಸುವ ಮತ್ತು ಅದನ್ನು ಬಲಪಡಿಸುವ ಅಗತ್ಯವಿದೆ.

ಪ್ರಶ್ನೆ: ಎಸ್‌ಐಆರ್ ರಾಜ್ಯದಲ್ಲಿ ಪ್ರಾರಂಭವಾಗಿದೆ. ಇತರ ರಾಜ್ಯಗಳ ಎಸ್‌ಐಆರ್ ನೋಡಿದರೆ ಭಾರಿ ಪ್ರಮಾಣದಲ್ಲಿ ಮತದಾರರು ಪಟ್ಟಿಯಿಂದ ಹೊರ ಬೀಳುತ್ತಿದ್ದಾರೆ. ಅದರಲ್ಲಿ ಮುಸ್ಲಿಮರು ಮತ್ತು ದುರ್ಬಲ ವರ್ಗದವರೇ ಹೆಚ್ಚಿದ್ದಾರೆ. ರಾಜ್ಯದಲ್ಲಿ ಹಾಗೆ ಆಗದಿರಲು ಜಮಾಅತೆ ಇಸ್ಲಾಮೀ ಹಿಂದ್ ಏನು ಕ್ರಮ ಕೈಗೊಂಡಿದೆ?

ಉತ್ತರ: ನಮ್ಮ ರಾಜ್ಯದಲ್ಲಿ ಎಸ್‌ಐಆರ್ ಪ್ರಾರಂಭವಾಗಿದೆ ಮತ್ತು ಇದುವರೆಗೆ ಇತರ ರಾಜ್ಯಗಳಲ್ಲಿ ಎಸ್‌ಐಆರ್‌ನ ಫಲಿತಾಂಶಗಳನ್ನು ನೋಡಿದಾಗ, ಅದರ ಅಪಾಯಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಅಗತ್ಯವೆನಿಸುತ್ತಿದೆ. ಈ ವಿಷಯದಲ್ಲಿ ಪ್ರತಿಯೊಬ್ಬ ನಾಗರಿಕನು ಜತನದಿಂದ ತನ್ನ ಮತವನ್ನು ಸಂರಕ್ಷಿಸ ಬೇಕಾಗಿದೆ. ಜಮಾಅತೆ ಇಸ್ಲಾಮೀಯು ಈ ನಿಟ್ಟಿನಲ್ಲಿ ತನ್ನ ಸಕಲ ಕಾರ್ಯಕರ್ತರನ್ನು ಸಿದ್ಧಗೊಳಿಸಿದೆ. ನಾವು ಅನೇಕ ಆನ್‌ಲೈನ್ ಮತ್ತು ಆಫ್‌ಲೈನ್ ಸಭೆಗಳನ್ನು ನಡೆಸಿದ್ದೇವೆ. ನಮ್ಮ ಸೋಲಿಡಾರಿಟಿ, ಎಪಿಸಿಆರ್ ಮುಂತಾದ ಅಧೀನ ಸಂಸ್ಥೆ ಗಳು ಈ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಇನ್ನು ಮೊಹಲ್ಲ ಮಟ್ಟದಲ್ಲಿಯೂ, ಮಸೀದಿ ಮಟ್ಟದಲ್ಲಿಯೂ ಈ ವಿಷಯವಾಗಿ ಜನ ಜಾಗೃತಿ ಮೂಡಿಸ ಬೇಕಾದ ಅಗತ್ಯವಿದೆ. ಮುಸ್ಲಿಮರೊಂದಿಗೆ ಇತರ ದುರ್ಬಲ ವರ್ಗಗಳನ್ನೂ ಜಾಗೃತ ಗೊಳಿಸಬೇಕಾದ ಅಗತ್ಯವೂ ಬಹಳವಿದೆ. ಜಮಾಅತ್ ಸ್ವತಃ ಮತ್ತು ಸಮಾನ ಮನಸ್ಕ ಸಂಘಟನೆಗಳ ಜೊತೆ ಗೂಡಿಯೂ ಈ ಕೈಂಕರ್ಯದಲ್ಲಿ ಕಾರ್ಯ ಪ್ರವೃತ್ತವಾಗಿದೆ. ‘ಎದ್ದೇಳು ಕರ್ನಾಟಕ’, ‘ಮೈ ವೋಟ್ ಮೈ ರೈಟ್’ ಮತ್ತು ಇಂತಹ ಇತರ ವೇದಿಕೆಗಳೂ ನಮ್ಮ ಜೊತೆ ಕೈ ಜೋಡಿಸಿವೆ ಮತ್ತು ಈ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳು ಮತ್ತು ಸಮಾ ರಂಭಗಳು ಕೂಡ ನಡೆದಿವೆ.

ಪ್ರಶ್ನೆ: ಜಮಾಅತೆ ಇಸ್ಲಾಮೀ ಹಿಂದ್ ಸ್ಥಾಪನೆಯ ಉದ್ದೇಶ ಏನು? ಆ ಉದ್ದೇಶವನ್ನು ತಲುಪುವಲ್ಲಿ ಸಂಘಟನೆ ಯಶಸ್ವಿಯಾಗಿದೆಯಾ? ಸವಾಲುಗಳೇನು?

ಉತ್ತರ: ಜಮಾಅತೆ ಇಸ್ಲಾಮೀಯು ಸಂದೇಶ ಪ್ರಚಾರ, ಸಮಾಜ ಸುಧಾರಣೆ, ಜನಸೇವೆ ಮತ್ತು ನಮ್ಮ ದೇಶದ ವಿವಿಧ ಧರ್ಮೀಯರ ನಡುವೆ ಕೋಮು ಸೌಹಾರ್ದವನ್ನು ಸ್ಥಾಪಿಸುವ ಉದ್ದೇಶ ಹೊತ್ತು ಕೆಲಸ ಮಾಡುತ್ತಿದೆ. ಅಂತ್ಯದಲ್ಲಿ ಅಲ್ಲಾಹನ ಅರ್ಥಾತ್ ನಮ್ಮ ಸೃಷ್ಟಿಕರ್ತನ ಅರಿವು ಮತ್ತು ಅವನ ದಾಸ್ಯ-ಆರಾಧನೆಯಲ್ಲಿಯೇ ನಮ್ಮ ಒಳಿತು ಅಡಗಿದೆ. ಆದ್ದರಿಂದಲೇ ಧರ್ಮ ಸಂಸ್ಥಾಪನೆ ಅರ್ಥಾತ್ ಸೃಷ್ಟಿಕರ್ತನ ದಾಸ್ಯ-ಆರಾಧನೆ ಯೊಡಗೂಡಿದ ವ್ಯವಸ್ಥೆ ಸ್ಥಾಪಿಸುವುದನ್ನೇ ಜಮಾಅತೆ ಇಸ್ಲಾಮಿಯು ತನ್ನ ಪರಮ ಗುರಿಯನ್ನಾಗಿ ಭಾವಿಸಿದೆ.

ಅಲ್‌ಹಮ್ದುಲಿಲ್ಲಾಹ್, ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ನಡೆದಿದೆ, ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸಲಾಗಿದೆ, ಆದರೆ ಸಾಕಷ್ಟು ಕೆಲಸಗಳು ಉಳಿದಿವೆ ಮತ್ತು ಅದಕ್ಕಾಗಿ ನಿರಂತರ ಪ್ರಯತ್ನ, ಪುರೋಗತಿ ಮತ್ತು ಕಠಿಣ ಪರಿಶ್ರಮದ ಅಗತ್ಯವಿದೆ.

ಪ್ರಶ್ನೆ: ರಾಜ್ಯದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಸಚಿವ ಸಂಪುಟದಲ್ಲಿ ಒಬ್ಬರೇ ಮುಸ್ಲಿಮ್ ಸಚಿವರು ಇರುವ ಬಗ್ಗೆಯೂ ಅಸಮಾಧಾನ ಇದೆ. ಜಮಾಅತೆ ಇಸ್ಲಾಮೀಯು ಈ ವಿಷಯದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗಿದೆಯಾ? ಏನೆಲ್ಲಾ ಬೆಳವಣಿಗೆಗಳು ನಡೆದಿವೆ?

ಉತ್ತರ: ಸರಕಾರದಲ್ಲಿ ಮುಸ್ಲಿಮ್ ಪ್ರಾತಿನಿಧ್ಯ ಕೂಡ ಗಮನಾರ್ಹ ಅಂಶವಾಗಿದೆ. ಪ್ರಸಕ್ತ ಘೋಷಣೆಯಾದ ಮೊದಲ ಹಂತದ ಸಚಿವ ಸಂಪುಟದಲ್ಲಿ ಒಬ್ಬರೇ ಮುಸ್ಲಿಮ್ ಸಚಿವರಿದ್ದಾರೆ. ಈ ಪರಿಸ್ಥಿತಿ ಸುಧಾರಣೆಯಾಬೇಕು. ಮುಸ್ಲಿಮರ ಜನಸಂಖ್ಯೆಯ ಆಧಾರದಲ್ಲಿ, ಅವರ ಪ್ರಾತಿನಿಧ್ಯವು ಸರಕಾರ ಸಮೇತ ಎಲ್ಲೆಡೆ ಇರಬೇಕಿತ್ತು. ಇದು ನಮ್ಮ ನಿರಂತರ ಬೇಡಿಕೆಯಾಗಿದೆ. ಇದನ್ನು ಈ ಹಿಂದೆಯೂ ಅನೇಕ ಸಂದರ್ಭಗಳಲ್ಲಿ ವ್ಯಕ್ತಪಡಿಸಲಾಗಿದೆ. ಇದಕ್ಕೂ ಮೊದಲು, ಹಿಂದಿನ ಮುಖ್ಯಮಂತ್ರಿಗಳಿಗೆ ನಮ್ಮ ಬೇಡಿಕೆಗಳನ್ನು ಸಲ್ಲಿಸಲಾಗಿದೆ. ಪತ್ರಗಳನ್ನು ಬರೆಯಲಾಗಿದೆ. ಹಾಲಿ ಮುಖ್ಯಮಂತ್ರಿಯೊಂದಿಗೆ ಯಾವುದೇ ಸಭೆ ನಡೆದಿಲ್ಲ, ಆದಾಗ್ಯೂ, ಪತ್ರ ಬರೆಯಲಾಗಿದೆ. ಇನ್‌ಶಾ ಅಲ್ಲಾಹ್, ಭವಿಷ್ಯದಲ್ಲಿ ಸಂಘಟಿತ ನಿಯೋಗವು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬಹುದು.

ಪ್ರಶ್ನೆ: ಸಿದ್ದರಾಮಯ್ಯ ಸರಕಾರವೂ ಮದ್ಯಪಾನವನ್ನು ಉತ್ತೇಜಿಸಿತ್ತು. ಡಿಕೆಶಿ ಸರಕಾರವೂ ಆ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಯುವ ಸಮೂಹವು ನೈತಿಕ ಮೌಲ್ಯಗಳಿಂದ ದೂರ ಸರಿಯುತ್ತಾ ಇದೆ ಎಂಬ ಅಭಿಪ್ರಾಯ ಇದೆ. ವಿಚ್ಛೇದನ ಪ್ರಕ್ರಿಯೆಗಳು ಹೆಚ್ಚುತ್ತಾ ಇದೆ. ಈ ವಿಷಯದಲ್ಲಿ ರಾಜ್ಯ ಸರಕಾರಕ್ಕೆ ಮಾರ್ಗ ದರ್ಶನ ಮಾಡಬೇಕಾದ ಹೊಣೆಗಾರಿಕೆ ಜಮಾಅತೆ ಇಸ್ಲಾಮೀ ಹಿಂದ್‌ಗೆ ಇದೆ ಎಂದು ಅನಿಸುವುದಿಲ್ಲವೇ?

ಉತ್ತರ: ಮದ್ಯವ್ಯಸನ ಮಾತ್ರವಲ್ಲ, ಸಮಾಜದಲ್ಲಿ ನೈತಿಕ ಮೌಲ್ಯಗಳ ಕುಸಿತ ಮತ್ತು ಕುಟುಂಬಗಳು ಛಿದ್ರವಾಗುತ್ತಿರುವುದು ಇವೆಲ್ಲವೂ ನಮ್ಮ ಮುಂದಿರುವ ಸಮಸ್ಯೆಗಳಾಗಿವೆ. ಈ ನಿಟ್ಟಿನಲ್ಲಿ ನಾವು ಸರಕಾರ ಮಾತ್ರವಲ್ಲ, ಸಕಲ ನಾಗರಿಕರ ಗಮನ ಸೆಳೆಯಲು ಬಯಸುತ್ತೇವೆ. ಈ ಸ್ಥಿತಿಯ ಸುಧಾರಣೆಗಾಗಿ ನಾವು ಚಿಂತನೆ ನಡೆಸಬೇಕಾಗಿದೆ. ಈ ಹಿಂದೆಯೂ ಈ ವಿಷಯದಲ್ಲಿ ಪ್ರಯತ್ನಗಳು ನಡೆದಿವೆ. ಈ ಪ್ರಯತ್ನವನ್ನು ಇನ್ನಷ್ಟು ಬಲಗೊಳಿಸಬೇಕಾದ ಅಗತ್ಯವಿದೆ.

ಪ್ರಶ್ನೆ: ಬಹುಸಂಸ್ಕೃತಿಯ ಭಾರತದಲ್ಲಿ ಮುಸ್ಲಿಮ್ ಮತ್ತು ಇತರ ಸಮುದಾಯಗಳ ನಡುವೆ ಕಡಿದು ಹೋಗುತ್ತಿರುವ ಸೌಹಾರ್ದತೆಯನ್ನು ಮರುಸ್ಥಾಪಿಸಲು ಸಮುದಾಯ ಏನು ಮಾಡಬೇಕು? ನಿಮ್ಮ ಯೋಜನೆಗಳೇನು?

ಉತ್ತರ: ಹೌದು, ನಮ್ಮ ಈ ಬಹು ಧರ್ಮೀಯ ಮತ್ತು ವಿಭಿನ್ನ ಸಂಸ್ಕೃತಿಗಳ ಆಡುಂಬೊಲವಾಗಿರುವ ದೇಶದಲ್ಲಿ ದ್ವೇಷ ಹರಡುತ್ತಿರುವುದು, ಅಂತರ ಹೆಚ್ಚಿಸುತ್ತಿರುವುದು, ಅಕ್ರಮ-ಅನ್ಯಾಯ ಎಸಗುತ್ತಿರುವುದು ತೀರಾ ಖೇದಕರ ಅಂಶವಾಗಿದೆ. ಇದನ್ನು ನಿವಾರಿಸಲು ಜಮಾಅತೆ ಇಸ್ಲಾಮೀಯು ಮೊದಲ ದಿನದಿಂದಲೇ ಪ್ರಯತ್ನಿಸುತ್ತಾ ಬಂದಿದೆ. ನಾವಂತೂ ಇತರ ಧರ್ಮೀಯರೊಡನೆ ಸೇರಿ ಸಂಬಂಧ ಸುಧಾರಣೆ, ಪ್ರೀತಿ- ಸೌಹಾರ್ದ ಮತ್ತು ಶಾಂತಿ-ಸಮಾಧಾನವನ್ನು ಬೆಳೆಸಲು ಬೃಹತ್ ಪ್ರಮಾಣದಲ್ಲಿ ಪ್ರಯತ್ನಿಸುತ್ತಲಿದ್ದೇವೆ. ಜಮಾಅತ್‌ನ ವತಿಯಿಂದ ಸದ್ಭಾ ವನಾ ವೇದಿಕೆ, ಧಾರ್ಮಿಕ ಜನ ಮೋರ್ಚಾ ಮುಂತಾದ ಆಂದೋಲನಾತ್ಮಕ ಪ್ರಯತ್ನಗಳು ನಡೆಯುತ್ತಿದೆ. ಇದರ ಹಿಂದೆಯೂ ಸೌಹಾರ್ದ ಉದ್ದೇಶವಾಗಿದೆ. ಈ ಪ್ರಯತ್ನವು ನಿರಂತರ ದೊಡ್ಡ ಮಟ್ಟದಲ್ಲಿ ಜಾರಿಯಲ್ಲಿರಬೇಕಾಗಿದೆ.

ಪ್ರಶ್ನೆ: ಇತ್ತೀಚಿನ ದಿನಗಳಲ್ಲಿ ಮಸೀದಿಗಳನ್ನು ಅಕ್ರಮ ನಿರ್ಮಾಣ ಎಂದು ದಿಢೀರಾಗಿ ಒಡೆದು ಹಾಕುತ್ತಿರುವುದು, ಧಾರ್ಮಿಕ ಆಚರಣೆಗಳನ್ನು ತಡೆಯುವುದು, ಆಹಾರ ಅಥವಾ ಇತರ ವಿಷಯಗಳ ಸುತ್ತ ಸೃಷ್ಟಿಯಾಗುತ್ತಿರುವ ವಿವಾದಗಳನ್ನು ನೀವು ಹೇಗೆ ನೋಡುತ್ತೀರಿ?

ಉತ್ತರ: ಇಂದು ದೇಶದ ಅನೇಕ ಸ್ಥಳಗಳಲ್ಲಿ ಬುಲ್ಡೋಝರ್ ಮತ್ತು ಗುಂಪುಹತ್ಯೆಗಳಂತಹ ಘಟನೆಗಳು ನಡೆಯುತ್ತಿರುವುದು, ಧಾರ್ಮಿಕ ಕಟ್ಟಡಗಳ ಧ್ವಂಸ ಮತ್ತು ಧಾರ್ಮಿಕ ಆಚರಣೆಗಳಿಗೆ ತಡೆಯೊಡ್ಡುತ್ತಿರುವುದು ಇವೆಲ್ಲವೂ ಸ್ಪಷ್ಟ ಕಾನೂನು ವಿರೋಧಿ ಕೃತ್ಯಗಳಾಗಿವೆ. ಯಾವುದೇ ಕಟ್ಟಡವನ್ನು ಧ್ವಂಸಗೊಳಿಸುವುದಕ್ಕೆ ಮುನ್ನ ಕಾನೂನು ಪ್ರಕ್ರಿಯೆಗಳನ್ನು ನಡೆಸಬೇಕಾಗುತ್ತದೆ, ಪರ್ಯಾಯ ಸ್ಥಳ ಒದಗಿಸಬೇಕಾಗುತ್ತದೆ, ಪುನರ್ವಸತಿಯ ಯೋಜನೆ ಇರ ಬೇಕಾಗಿದೆ. ಇವ್ಯಾವುದನ್ನೂ ಅನುಸರಿಸದೆ ಏಕಾಏಕಿ ನಡೆಸಲಾಗುವ ಈ ಕ್ರಮಗಳು ನಮ್ಮ ದೇಶದ ಕೆಟ್ಟ ಚಿತ್ರಣವನ್ನು ದರ್ಶಿಸುತ್ತದೆ. ಈ ಅರಾಜಕತೆಯು ಕೊನೆಗೊಳ್ಳ ಬೇಕಾಗಿದೆ. ಸರಕಾರವು ಈ ನಿಟ್ಟಿನಲ್ಲಿ ತನ್ನ ಸರಿಯಾದ ಪಾತ್ರವನ್ನು ವಹಿಸಬೇಕಾಗಿದೆ. ಕುರುಡು ಕೋಮುವಾದವನ್ನು ತಡೆಯುವುದಕ್ಕಾಗಿ ನಾವು ಎಲ್ಲ ಸ್ತರದಲ್ಲೂ ಸಾರ್ವಜನಿಕ, ಕಾನೂನಾತ್ಮಕ ಮತ್ತು ನೈತಿಕವಾದಂತಹ ಕ್ರಮಗಳನ್ನು ಕೈಗೊಳ್ಳುವ ಕುರಿತು ಚಿಂತಿಸಬೇಕಾಗಿದೆ.

ಪ್ರಶ್ನೆ: ಸರಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿ ಮಾಡಿದೆ, AI ಚಾಲ್ತಿಯಲ್ಲಿದೆ, ವಿಪರೀತವಾಗಿ ಮತ್ತು ವೇಗವಾಗಿ ಬದಲಾಗುತ್ತಿರುವ ಕಾಲದಲ್ಲಿ ಮದ್ರಸಾ ಶಿಕ್ಷಣದ ಸುಧಾರಣೆಯ ಕುರಿತು ತಮ್ಮ ಅಭಿಪ್ರಾಯವೇನು? ಏನೇನು ಬದಲವಾಣೆಗಳು ಬೇಕು?

ಉತ್ತರ: ಹೊಸ ಶಿಕ್ಷಣ ನೀತಿ ಜಾರಿಯಲ್ಲಿದೆ ಮತ್ತು ಕೃತಕ ಬುದ್ಧಿಮತ್ತೆ(AI)ಯನ್ನೂ ದೊಡ್ಡ ಪ್ರಮಾಣದಲ್ಲಿ ಬಳ ಸಲಾಗುತ್ತಿದೆ. ಈ ನಿಟ್ಟಿನಲ್ಲಿ, ಮದ್ರಸಾ ಶಿಕ್ಷಣವು ಮುಸ್ಲಿಮರ ಧಾರ್ಮಿಕ ಅಗತ್ಯಗಳನ್ನು ಪೂರೈಸಲು ಕಾನೂನು ಬದ್ಧವಾದ ಅಗತ್ಯವಾಗಿದೆ. ಇದಕ್ಕೆ ಕಾನೂನು ಮತ್ತು ಸಂವಿಧಾನದಲ್ಲಿ ಮುಕ್ತ ಅವಕಾಶವನ್ನು ಒದಗಿಸಲಾಗಿದೆ. ಮದರಸಾ ಶಿಕ್ಷಣಕ್ಕೆ ಹೊಸ ಶಿಕ್ಷಣ ನೀತಿಯೊಂದಿಗೆ ಯಾವುದೇ ನೇರ ಸಂಬಂಧವಿಲ್ಲ. ಆದಾಗ್ಯೂ, ನಡೆಯುತ್ತಿರುವ ಸುಧಾರಣೆಗಳನ್ನು ಪರಿಗಣಿಸಿದರೆ, ಈ ಶಿಕ್ಷಣ ವನ್ನು ಇನ್ನಷ್ಟು ಸುಧಾರಿಸುವ ಕುರಿತು ಮತ್ತು ಸಮಕಾಲೀನ ಶಿಕ್ಷಣವನ್ನು ಮದರಸಾಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಸೇರಿಸುವ ಕುರಿತು, ಉದಾಹರಣೆಗೆ NOIS ಮುಂತಾದ ಸೌಲಭ್ಯಗಳನ್ನು ಈ ನಿಟ್ಟಿನಲ್ಲಿ ಪರಿಗಣಿಸುವ ಕುರಿತು ಚಿಂತಿಸಬಹುದಾಗಿದೆ. ಅದೇನಿದ್ದರೂ ಧಾರ್ಮಿಕ ಶಿಕ್ಷಣವು ತನ್ನದೇ ಆದ ಸ್ಥಾನಮಾನವನ್ನು ಹೊಂದಿದೆ, ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ; ಅದನ್ನು ಕಡೆ ಗಣಿಸಬಾರದು, ಅದನ್ನು ಕೀಳಂದಾಜಿಸಬಾರದು; ಬದಲಾಗಿ ಅದಕ್ಕೂ ಹೆಚ್ಚು ಪ್ರಾಮುಖ್ಯತೆ ನೀಡುವ ಮತ್ತು ಅಭಿವೃದ್ಧಿ ಪಡಿಸುವ ಕಡೆಗೆ ಗಮನ ಹರಿಸಬೇಕಾಗಿದೆ.