ಮೊಸರು ಕೇಳಿದ್ದಕ್ಕೆ ಯುವಕನನ್ನು ಹೊಡೆದು ಕೊಂದ ರೆಸ್ಟೋರೆಂಟ್ ಮಾಲಿಕ ಮತ್ತು ಸಿಬ್ಬಂದಿಗಳು

0
451

ಸನ್ಮಾರ್ಗ ವಾರ್ತೆ

ಹೈದರಾಬಾದ್, ಸೆ. 11: ಪುನಃ ಮೊಸರು ಕೇಳಿದ್ದಕ್ಕೆ ಕುಪಿತರಾದ ರೆಸ್ಟೋರೆಂಟಿನ ಮಾಲಕ, ಸಿಬ್ಬಂದಿ ಸೇರಿ ಯುವಕನನ್ನು ಹೊಡೆದು ಕೊಂದ ಘಟನೆ ಪಂಚ ಗುಟ್ಟದ ಮೆರಿಡಿಯನ್ ರೆಸ್ಟೋರೆಂಟಿನಲ್ಲಿ ನಡೆದಿದ್ದು ಚಂದರಯಾನ್ ಗುಟ್ಟದ ಹಸಷ್ಮತಾಬಾದ್‍ನ ಮುಹಮ್ಮದ್ ಲಿಯಾಕತ್(31)ರು ಹತ್ಯೆಗೀಡಾದರು.

ಮುಹಮ್ಮದ್ ಲಿಯಾಕತ್ ಆದಿತ್ಯವಾರ ರಾತ್ರೆ ಹನ್ನೊಂದು ಗಂಟೆಗೆ ಗೆಳೆಯರ ಜೊತೆ ತಿಂಡಿ ತಿನ್ನಲು ರೆಸ್ಟೋರೆಂಟಿಗೆ ಬಂದಿದ್ದ, ಪುನಃ ಮೊಸರು ಕೇಳಿದಾಗ ಸಿಬ್ಬಂದಿ ನಿರ್ಲಕ್ಷಿಸಿದ್ದು ಜಗಳಕ್ಕೆ ಕಾರಣವಾಗಿದೆ. ನಂತರ ರೆಸ್ಟೋರೆಂಟ್ ಮ್ಯಾನೇಜರ್ ಮತ್ತು ಇತರ ಸಿಬ್ಬಂದಿ ಸೇರಿ ಮುಹಮ್ಮದ್ ಲಿಯಾಕತ್‍ಗೆ ಥಳಿಸಿದ್ದಾರೆ. ಮುಹಮ್ಮದ್ ಲಿಯಾಕತ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳದೆ ಮೃತಪಟ್ಟಿದ್ದಾರೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದೇ ವೇಳೆ ಪೊಲೀಸರ ವರ್ತನೆ ಸರಿಯಾಗಿರಲಿಲ್ಲ ಎಂದು ಮೃತ ಮುಹಮ್ಮದ್‍ರ ಕುಟುಂಬ ಸದಸ್ಯರು ಹೇಳಿದ್ದು ಮುಹಮ್ಮದ್‍ರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪೊಲೀಸರು ಸೌಕರ್ಯ ಮಾಡಿಕೊಟ್ಟಿಲ್ಲ ಕೆಟ್ಟದಾಗಿ ವರ್ತಿಸಿದರು ಎಂದು ಆರೋಪಿಸಿದ್ದಾರೆ.

ನಮ್ಮನ್ನು ಪೊಲೀಸ್ ಠಾಣೆಗೆ ಕರೆದು ಕೊಂಡು ಹೋಗಿ ಅಲ್ಲಿ ಒಬ್ಬ ಸಬ್ ಇನ್ಸ್‍ಪೆಕ್ಟರ್ ಮುಹಮ್ಮದ್‍ಗೆ ಪುನಃ ಹೊಡೆದಿದ್ದಾನೆ ಎಂದು ಮುಹಮ್ಮದ್ ಲಿಯಾಕತ್ ನ ಗೆಳೆಯರು ತಿಳಿಸಿದ್ದಾರೆ.

ಮುಹಮ್ಮದ್‍ರ ಆರೋಗ್ಯ ತುಂಬ ಕೆಟ್ಟ ನಂತರ ಅವರನ್ನು ಖಾಸತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆದರೆ ಅಲ್ಲಿ ಅವರು ಮೃತ ಪಟ್ಟಿದ್ದಾರೆ. ಪಂಚಗುಟ್ಟ ಪೊಲೀಸ್ ಠಾಣೆಯಲ್ಲಿ ಕೊಲೆ ಕೃತ್ಯಕ್ಕೆ ಕೇಸು ದಾಖಲಿಸಲಾಗಿದ್ದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.