ಅಮೆರಿಕದ ಶಾಂತಿ ಒಪ್ಪಂದ ಒಪ್ಪಲು ಸೌದಿ ಅರೇಬಿಯದಿಂದ ಫೆಲಸ್ತೀನಿಗೆ ಹಣದ ಆಮಿಷ

0
488

ಬೈರೂತ್,ಮೇ4: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರ ನೇತೃತ್ವದಲ್ಲಿ ರೂಪುಗೊಂಡ ಪಶ್ಚಿಮೇಶ್ಯನ್ ಶಾಂತಿ ಒಪ್ಪಂದ ಅಂಗೀಕರಿಸಲು ಸೌದಿ ಅರೇಬಿಯ ಫೆಲಸ್ತೀನ್‍ಗೆ ಹಣದ ಆಮಿಷವೊಡ್ಡಿದೆ ಎಂದು ವರದಿಯಾಗಿದೆ. ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಫೆಲಸ್ತೀನ್ ಅಥಾರಿಟಿ ಅಧ್ಯಕ್ಷ ಮಹ್ಮೂದ್ ಅಬ್ಬಾಸ್‍ರಿಗೆ ಹತ್ತು ಬಿಲಿಯನ್ ಡಾಲರ್ ವಾಗ್ದಾನ ಮಾಡಿದರೆಂದು ಲೆಬನಾನ್‍ನ ದೈನಿಕ ಅಲ್ ಅಕ್ಬರ್ ವರದಿ ಮಾಡಿದೆ. ಶತಮಾನದ ಒಪ್ಪಂದ ಎಂದು ಹೆಸರಿನಲ್ಲಿ ಅರಿಯಲ್ಪಡುವ ಸಂಪೂರ್ಣ ವಿವಾದಯುತ ಸೂಚನೆಗಳನ್ನು ಟ್ರಂಪ್ ಫೆಲಸ್ತೀನ್-ಇಸ್ರೇಲ್ ವಿಷಯದಲ್ಲಿ ಮುಂದಿಟ್ಟಿದ್ದಾರೆ. ಈ ಒಪ್ಪಂದ ಒಪ್ಪಿಕೊಳ್ಳಲು ಸೌದಿ ಅರೇಬಿಯ ಹಣದ ವಾಗ್ದಾನ ಮಾಡಿದೆ ಆದರೆ ಅಬ್ಬಾಸ್ ಇದನ್ನು ತಿರಸ್ಕರಿಸಿದರೆಂದು ಮಂಗಳವಾರ ಅಲ್‍ಅಕ್ಬರ್ ವರದಿ ಮಾಡಿತ್ತು.

ಈ ಒಪ್ಪಂದ ತಾನು ಸ್ವೀಕರಿಸಿದರೆ ಅಂದಿಗೆ ತನ್ನ ರಾಜಕೀಯ ಜೀವನ ಅಂತ್ಯಗೊಳ್ಳುತ್ತದೆ ಎಂದು ಸೌದಿಯ ವಕ್ತಾರರಿಗೆ ಅಬ್ಬಾಸ್ ಹೇಳಿದ್ದಾರೆಂದು ಪತ್ರಿಕೆ ವರದಿ ಮಾಡಿದೆ. ಒಪ್ಪಂದ ಪ್ರಕಾರ ಜೆರುಸಲೇಂ ಬದಲು ಅಬೂದಿಸ್ ಫೆಲಸ್ತೀನ್ ರಾಜಧಾನಿಯಾಗಿ ಅಮೆರಿಕ ಪ್ರಸ್ತಾಪ ಇಟ್ಟಿದೆ.