ಪಶ್ಚಿಮ ಬಂಗಾಳವನ್ನು ದಿಲ್ಲಿ ಮಾಡಲು ಬಿಡಲ್ಲ, ರಾಜ್ಯದಿಂದ ಒಬ್ಬರನ್ನೂ ಹೊರಹಾಕಲ್ಲ- ಮಮತಾ ಬ್ಯಾನರ್ಜಿ

0
707

ಸನ್ಮಾರ್ಗ ವಾರ್ತೆ

ಕಾಲಿಗಂಜ್, ಮಾ. 4: ಬಾಂಗ್ಲಾ ದೇಶದಿಂದ ಬಂದು ಇಲ್ಲಿನ ಚುನಾವಣೆಯಲ್ಲಿ ಮತ ಹಾಕಿದವರು ಭಾರತದ ಪ್ರಜೆಗಳಾಗಿದ್ದಾರೆ ಮತ್ತು ಅವರು ಪುನಃ ಪೌರತ್ವಕ್ಕೆ ಅರ್ಜಿ ಹಾಕಬೇಕಾಗಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು. ಪಶ್ಚಿಮ ಬಂಗಾಳದಿಂದ ಒಬ್ಬರನ್ನೂ ಹೊರಹಾಕುವುದಿಲ್ಲ. ರಾಜ್ಯದಲ್ಲಿ ವಾಸವಿರುವ ಯಾವುದೇ ನಿರಾಶ್ರಿತರಿಗೂ ಪೌರತ್ವ ಸಿಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ನಿಮಗೆ ಒಂದು ವಿಳಾಸ ಇದೆ. ರೇಷನ್ ಕಾರ್ಡು ಇದೆ. ವೋಟರ್ ಐಡಿ ಇದೆ. ಡ್ರೈವಿಂಗ್ ಲೈಸನ್ಸ್ ಇದೆ. ಇನ್ನು ಬಿಜೆಪಿ ಹೇಳುವ ಆ ಹೊಸ ಕಾರ್ಡು ಬೇಡ ಎಂದು ಮಮತಾ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿದರು. ದಿಲ್ಲಿ ಗಲಭೆಗೆ ಮೋದಿ ಸರಕಾರವನ್ನು ಖಂಡಿಸಿದ ಮಮತಾ ಪಶ್ಚಿಮ ಬಂಗಾಳವನ್ನು ದಿಲ್ಲಿ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.