ಸಿಎಎ ಹೋರಾಟಕ್ಕೆ ಬೆಂಬಲ ಘೋಷಿಸಿದ ಪರಮೋಚ್ಚ ಸಿಖ್ ಸಮಿತಿ

0
1783

ಸನ್ಮಾರ್ಗ ವಾರ್ತೆ

ಅಮೃತಸರ, ಫೆ.15: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಹೋರಾಟಕ್ಕೆ ಪರಮೋನ್ನತ ಸಿಖ್ ಸಂಘಟನೆ ಅಕಾಲ್ ತಕ್ತ್ ಬೆಂಬಲ ಘೋಷಿಸಿದೆ. ದಿಲ್ಲಿ ಅಲ್ಪಸಂಖ್ಯಾತ ಆಯೋಗ ಅಧ್ಯಕ್ಷ ಇಸ್ಲಾಮ್ ಖಾನ್ ಅಕಾಲ್ ತಕ್ತ್ ಮುಖ್ಯಸ್ಥ ಗ್ಯಾನಿ ಹರ್‍ಪ್ರೀತ್ ಸಿಂಗ್‍ ರನ್ನು ಭೇಟಿಯಾದ ನಂತರ ಈ ತೀರ್ಮಾನವನ್ನು ಅಕಾಲ್ ತಕ್ತ್ ವ್ಯಕ್ತಪಡಿಸಿತು.

ಸಿಎಎ ಹೋರಾಟಕ್ಕೆ ಬೆಂಬಲ ಮುಂದುವರಿಯಲಿದೆ ಎಂದು ಗ್ಯಾನಿ ಹರ್‍ಪ್ರೀತ್ ಸಿಂಗ್ ತಿಳಿಸಿದರು. ಅಲ್ಪಸಂಖ್ಯಾತರನ್ನು ಭಯ, ಅಸುರಕ್ಷಿತ ಸ್ಥಿತಿಯಲ್ಲಿಡುವ ಕಾನೂನು ಸಿಎಎ ಆಗಿದೆ. . ದಮನದ ವಿರುದ್ಧ ತಮ್ಮ ಸಂಘಟನೆ ಇದೆ ಎಂದು ಅವರು ತಿಳಿಸಿದರು. ಸಿಖ್ ತತ್ವಗಳು ಅನ್ಯಾಯದ ವಿರುದ್ಧವಾಗಿದೆ. ಅಂತಹ ಒಂದು ಆಗತ್ಯ ಮುಸ್ಲಿಮರಿಂದ ಎದ್ದು ಕಂಡಿದೆ. ಹಿಂದೂ ನಾಯಕರೊಂದಿಗೆ ಚರ್ಚಿಸಲು ಮುಸ್ಲಿಮ್ ಧಾರ್ಮಿಕ ನಾಯಕರು ಸಿದ್ಧರಾಗಬೇಕೆಂದು ಅವರು ಆಗ್ರಹಿಸಿದರು. ಸಿಖ್ ಸಮುದಾಯದ ಬೆಂಬಲ ಆತ್ಮ ವಿಶ್ವಾಸ ತಂದು ಕೊಡುತ್ತಿದೆ ಎಂದು ಖಾನ್ ಹೇಳಿದರು.