ಸನ್ಮಾರ್ಗ ವಾರ್ತೆ
ಜೈಪುರ, ಫೆ. 15: ಪೌರತ್ವ ತಿದ್ದು ಪಡಿ ಕಾನೂನನ್ನು ಕೇಂದ್ರವು ಹಿಂಪಡೆಯಬೇಕೆಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆಗ್ರಹಿಸಿದ್ದಾರೆ. ಜೈಪುರದ ಸಿಎಎ ವಿರುದ್ಧ ಕಾರ್ಯಕ್ರಮದಲ್ಲಿ ಅವರು ಮಾತಾಡುತ್ತಿದ್ದರು. ದೇಶದಲ್ಲಿ ಶಾಂತಿ ನೆಲೆಸಬೇಕಾಗಿದ್ದರೆ ಕೇಂದ್ರ ಸರಕಾರ ಸಿಎಎ ಯನ್ನು ಹಿಂಪಡೆಯಬೇಕೆಂದು ಅವರು ಹೇಳಿದರು.
ಈ ಕಾನೂನು ಸಂವಿಧಾನ ವಿರುದ್ಧವಿದೆ. ಆದ್ದರಿಂದ ಕೇಂದ್ರ ಸರಕಾರ ಇದನ್ನು ಹಿಂಪಡೆಯಲು ಮುಂಬರಬೇಕು. ಸಿಎಎ ಹೋರಾಟಗಾರರ ಜೊತೆ ಕಾಂಗ್ರೆಸ್ ರಾಜ್ಯ ಸರಕಾರ ಇದೆ. ಡಿಟೆನ್ಶನ್ ಸೆಂಟರ್ ಗೆ ಯಾರಾದರೂ ಹೋಗಬೇಕಾಗಿ ಬಂದರೆ ಮೊದಲು ತಾನು ಹೋಗುವೆ ಎಂದು ಗೆಹ್ಲೋಟ್ ಹೇಳಿದರು. ಕಾನೂನು ಮಾಡುವ ಹಕ್ಕು ಸರಕಾರಕ್ಕಿದೆ ನಿಜ. ಆದರೆ, ಜರನ ಭಾವನೆಯನ್ನು ಕೂಡ ಅದು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಶಾಹೀನ್ ಬಾಗ್ ಸಹಿತ ದೇಶದ ವಿವಿಧ ಕಡೆಗಳಲ್ಲಿ ಸಿಎಎ ವಿರುದ್ಧ ಹೋರಾಟ ನಡೆಯುತ್ತಿದ್ದು ಜನರ ಭಾವನೆಯನ್ನು ಸರಕಾರ ಕಡೆಗಣಿಸಿದರೆ ಅದಕ್ಕೆ ಮುಂದೆ ಹೋಗಲು ಸಾಧ್ಯವಿಲ್ಲ ಎಂದು ಗೆಹಲೋಟ್ ಹೇಳಿದರು.












