ನಾಳೆ ದೇಶವ್ಯಾಪಿ ರೈತ ಪ್ರತಿಭಟನೆ

0
574

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.4: ಕೇಂದ್ರ ಸರಕಾರದ ರೈತ ವಿರೋಧಿ ಕಾನೂನಿನ ವಿರುದ್ಧ ರೈತ ಸಂಘಟನೆಗಳ ದೇಶವ್ಯಾಪಿ ಪ್ರತಿಭಟನೆ ಗುರುವಾರ ನಡೆಯಲಿದೆ. ಪ್ರತಿಭಟನೆಯನ್ನು ಆಲ್ ಇಂಡಿಯಾ ಕಿಸಾನ್ ಸಂಘಷ್ ಕೊಆರ್ಡಿನೇಶನ್ ಕಮಿಟಿ ಘೋಷಿದೆ. ವಿವಿಧ ಕಡೆಗಳಲ್ಲಿ ರಸ್ತೆ, ರೈಲು ತಡೆ ಮಾಡಿ ರೈತರು ಪ್ರತಿಭಟಿಸಲಿದ್ದಾರೆ.

ಗುರವಾರದ ಪ್ರತಿಭಟನೆಯ ಬೆನ್ನಿಗೆ ನವೆಂಬರ್ 26 ಮತ್ತು 27ಕ್ಕೆ ದಿಲ್ಲಿ ಚಲೋ ಮಾರ್ಚ್‌ಅನ್ನು ರೈತ ಸಂಘಟನೆಗಳು ಘೋಷಿಸಿವೆ. ದಿಲ್ಲಿ ಮಾರ್ಚ್‌ಗೆ ಪಂಜಾಬಿನಿಂದ 40,000 ರೈತರು ಬರಲಿದ್ದಾರೆ. ಗುರುವಾರ ನಡೆಯುವ ದೇಶವ್ಯಾಪಿ ಹೋರಾಟಕ್ಕೆ ಐಎನ್‍ಟಿಯುಸಿ,ಎಐಟಿಯುಸಿ, ಎಚ್‍ಎಂಎಸ್‍ಸಿಐಟಿಯು, ಎಐಟಿಯುಸಿ ಮೊದಲಾದ ಹತ್ತು ಕಾರ್ಮಿಕ ಯೂನಿಯನ್‍ಗಳ ಸಹಿತ ಜಂಟಿ ವೇದಿಕೆಯೂ ಬೆಂಬಲ ಘೋಷಿಸಿದೆ.

ಇದೇ ವೇಳೆ, ಹೊಸ ರೈತ ಕಾನೂನಿನೊಂದಿಗೆ ರಾಷ್ಟ್ರಪತಿಯ ಭೇಟಿಗೆ ಬಂದ ಪಂಜಾಬ್ ಮುಖ್ಯ ಮಂತ್ರಿ ಕ್ಯಾಪ್ಟನ್ ಅಮರೇಂದ್ರ ಸಿಂಗ್‍ರಿಗೆ ಅನುಮತಿ ನಿರಾಕರಿಸಿದ್ದನ್ನು ಪ್ರತಿಭಟಿಸಿ ಕಾಂಗ್ರೆಸ್ ಶಾಸಕರು ದಿಲ್ಲಿ ರಾಜ್‍ಘಾಟ್‍ನಲ್ಲಿ ಧರಣಿ ನಡೆಸಲಿದ್ದಾರೆ.