ಅರ್ನಬ್ ಗೋಸ್ವಾಮಿ ಬಂಧನ: ವಿರೋಧ ವ್ಯಕ್ತಪಡಿಸಿದ ಪ್ರಕಾಶ್ ಜಾವಡೇಕರ್, ಸ್ಮೃತಿ ಇರಾನಿ

0
411

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.4: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಯ ಬಂಧಿಸಿದ ಮುಂಬೈ ಪೊಲೀಸರ ಕ್ರಮವನ್ನು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಸ್ಮೃತಿ ಇರಾನಿ ಖಂಡಿಸಿದ್ದಾರೆ. ಅರ್ನಾಬ್‍ರ ಬಂಧನ ಮಾಧ್ಯಮ ಸ್ವಾತ್ರಂತ್ಯದ ವಿರುದ್ಧ ದಾಳಿಯೆಂದು ಜಾವಡೇಕರ್ ಟ್ವೀಟ್ ಮಾಡಿದ್ದು ಇದನ್ನು ಸ್ಮಥತಿ ಇರಾನಿ ಬೆಂಬಲಿಸಿದ್ದಾರೆ. ಈ ಬಂಧನ ನಮಗೆ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತದೆ ಎಂದು ಜಾವಡೇಕರ್ ಹೇಳಿದರು. ಮಹಾರಾಷ್ಟ್ರದಲ್ಲಿ ಮಾಧ್ಯಮ ಸ್ವಾತಂತ್ರ್ಯದ ವಿರುದ್ಧ ನಡೆದ ದಾಳಿಯನ್ನು ನಾವು ಖಂಡಿಸುತ್ತೇವೆ. ಮಾಧ್ಯಮಗಳೊಂದಿಗೆ ತೋರಿಸಬೇಕಾದ ಶಿಷ್ಟಾಚಾರ ಇದಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇಂದು ಅರ್ನಾಬ್‍ರನ್ನು ಬೆಂಬಲಿಸದವರು ಫ್ಯಾಶಿಸಂನ್ನು ಬೆಂಬಲಿಸುವವರು. ನಿಮಗೆ ಅವರು ಇಷ್ಟವಿಲ್ಲದಿರಬಹುದು. ಒಪ್ಪದಿರಬಹುದು. ಆದರೆ ನೀವು ಮೌನವಾಗಿರುವುದು ದಮನವನ್ನು ಬೆಂಬಲಿಸುವುದು ಎಂಬ ಅರ್ಥವನ್ನು ನೀಡುತ್ತದೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ. ಬಂಧನದ ಹಿಂದೆ ಒಂದು ಅಜೆಂಡಾ ಇಲ್ಲ ಎಂದು ಶಿವಸೇನೆ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಕಾನೂನು ಪ್ರಕಾರವೇ ಎಲ್ಲ ನಡೆಯುತ್ತಿದೆ ಎಂದು ಸಂಸದ ಸಂಜಯ್ ರಾವತ್ ಹೇಳಿದ್ದಾರೆ. ಪ್ರತೀಕಾರ ರಾಜಕೀಯ ಉದ್ಧವ್ ಸರಕಾರದ ನೀತಿಯಲ್ಲ ಎಂದು ಅವರು ಹೇಳಿದರು.

ಇಂದು ಬೆಳಗ್ಗೆ ರಿಪಬ್ಲಿಕ್ ಟಿವಿಯ ಸಂಪಾದಕ ಅರ್ನಾಬ್ ಗೋಸ್ವಾಮಿಯನ್ನು ಅವರ ಮನೆಯಿಂದ ಮುಂಬೈ ಪೊಲೀಸರು ಕಸ್ಟಡಿಗೆ ಪಡೆದುಕೊಂಡು ಹೋಗಿದ್ದಾರೆ. 2018ರಲ್ಲಿ ಇಂಟಿರಿಯರ್ ಡಿಸೈನರ್ ಅನ್ವಯ್ ನಾಯಿಕ್ ಮತ್ತು ತಾಯಿಯ ಆತ್ಮಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಅರ್ನಾಬ್‍ರನ್ನು ಬಂಧಿಸಲಾಗಿದೆ. ಆತ್ಮಹತ್ಯೆ ವೇಳೆ ನಾಯಿಕ್ ರಿಪಬ್ಲಿಕ್ ಟಿವಿ, ಫಿರೋಝ್ ಶೇಖ್, ನಿತೀಶ್ ಸರ್ದಾ ಕೊಡಬೇಕಾದ ಹಣವನ್ನು ಕೊಟ್ಟಿಲ್ಲ ಆದ್ದರಿಂದ ಆತ್ಮಹತ್ಯೆ ಮಾಡಿ ಕೊಂಡೆವೆಂದು ಬರೆದಿದ್ದರು. ರಿಪಬ್ಲಿಕ್ ಟಿವಿ 83 ಲಕ್ಷ ರೂಪಾಯಿ, ಫಿರೋಝ್ ಶೇಖ್ 4 ಕೋಟಿ ರೂಪಾಯಿ, ನಿತೀಶ್ ಶರ್ದಾ 55ಲಕ್ಷ ನೀಡಬೇಕಾಗಿದೆ ಎಂದು ಪತ್ರದಲ್ಲಿ ಬರೆದಿದ್ದರು.