ಅರವಿಂದ್ ಕೇಜ್ರಿವಾಲ್ ಬಂಧನ | ಇಂಡಿಯಾ ಒಕ್ಕೂಟವು ತಕ್ಕ ಉತ್ತರ ನೀಡಲಿದೆ : ರಾಹುಲ್ ಗಾಂಧಿ

0
431

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ : ದಿಲ್ಲಿ ಸಿಎಂ ಅರವಿಂದ್ ಕೇಜಿವಾಲ್‌ ಅವರನ್ನು ಈಡಿ ಬಂಧಿಸಿರುವ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, “ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟವು ಸೂಕ್ತ ಉತ್ತರ ನೀಡಲಿದೆ” ಎಂದು ಟ್ವಿಟ್ ಮಾಡಿದ್ದಾರೆ.

“ಹೆದರಿದ ಸರ್ವಾಧಿಕಾರಿ ಸತ್ತ ಪ್ರಜಾಪ್ರಭುತ್ವವನ್ನು ಸೃಷ್ಟಿಸಲು ಬಯಸುತ್ತಾನೆ. ಮಾಧ್ಯಮಗಳು ಸೇರಿದಂತೆ ಎಲ್ಲಾ ಸಂಸ್ಥೆಗಳನ್ನು ವಶಪಡಿಸಿಕೊಳ್ಳುವುದು, ಪಕ್ಷಗಳನ್ನು ಒಡೆಯುವುದು, ಕಂಪೆನಿಗಳಿಂದ ಹಣ ವಸೂಲಿ ಮಾಡುವುದು ಮತ್ತು ಪ್ರಮುಖ ವಿರೋಧ ಪಕ್ಷದ ಖಾತೆಯನ್ನು ಸ್ಥಗಿತಗೊಳಿಸುವುದು ‘ಪಿಶಾಚಿ ಶಕ್ತಿ’ಗೆ ಸಾಕಾಗಲಿಲ್ಲ. ಚುಣಾಯಿತ ಮುಖ್ಯಮಂತ್ರಿಗಳ ಬಂಧನವೂ ಸಾಮಾನ್ಯ ಸಂಗತಿಯಾಗಿದೆ. ಇದಕ್ಕೆ ಇಂಡಿಯಾ ಬಣವು ತಕ್ಕ ಪ್ರತ್ಯುತ್ತರ ನೀಡಲಿದೆ” ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

“ಲೋಕಸಭೆ ಚುನಾವಣೆಗೆ ಮುನ್ನ ಪ್ರತಿಪಕ್ಷಗಳನ್ನು ದುರ್ಬಲಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. “ಗೆಲುವಿನ ಬಗ್ಗೆ ನಿಜವಾದ ವಿಶ್ವಾಸವಿದ್ದರೆ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‌ ಪಕ್ಷದ ಖಾತೆಗಳನ್ನು ಸ್ಥಗಿತಗೊಳಿಸುತ್ತಿರಲಿಲ್ಲ. ಮುಂಬರುವ ಚುನಾವಣಾ ಫಲಿತಾಂಶಗಳ ಕುರಿತು ಬಿಜೆಪಿ ಈಗಾಗಲೇ ಹೆದರುತ್ತಿದೆ” ಎಂದು ಅವರು ಹೇಳಿದ್ದಾರೆ.